Plastic Bottel: ನೀವು ಕೂಡ ಬೀದಿ ಬದಿಯಲ್ಲಿ ಮಾರಾಟ ಮಾಡೋ ಬಾಟಲ್ ನೀರು ಕುಡಿಯುತ್ತೀರಾ? ಕುಡಿಯುವ ಮುನ್ನ ಈ ವರದಿ ಒಮ್ಮೆ ಓದಿ.
ಪ್ಲಾಸ್ಟಿಕ್ ಬಳಕೆ ಮಾಡುವುದು ದೇಹಕ್ಕೆ ಹಾನಿಕಾರಕ ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಆದರೂ ನಾವು ಟ್ರಾವೆಲ್ ಮಾಡುವಾಗ ಪ್ಲಾಸ್ಟಿಕ್ ವಸ್ತು ಬಳಕೆ ಮಾಡುತ್ತೇವೆ. ಡಾಕ್ಟರ್ ಗಳ ಸಮೇತ ಅನೇಕ ತಜ್ಞರು ಹೇಳುವ ಪ್ರಕಾರ ಈ ರೋಡ್ ಸೈಡ್ ಮಾರಾಟ ಮಾಡುವ ಪ್ಲಾಸ್ಟಿಕ್ ಬಾಟಲ್ ನಿರುವ ಆರೋಗ್ಯಕ್ಕೆ ಬಹಳ ಹಾನಿಕಾರಕ. ಈ ಬಾಟಲ್ ನೀರು ಬಳಸುವುದನ್ನು ಕಡಿಮೆ ಮಾಡಿ, ಇದಕ್ಕೆ ಕಾರಣ ಏನು ಎನ್ನುವುದನ್ನು ಈ ಪೋಸ್ಟ್ ಅಲ್ಲಿ ನಾವು ನಿಮಗೆ ತಿಳಿಸುತ್ತೇವೆ.
ಮಾಧ್ಯಮ ವರದಿ ಪ್ರಕಾರ ಈ ಪ್ಲಾಸ್ಟಿಕ್ ಬಾಟಲ್ ಉತ್ಪಾದನೆ ಮಾಡಲು ಬಳಸುವ ವಸ್ತು ಪಾಲಿಮರ್ ಆಗಿದೆ. ಈ ಪಾಲಿಮರ್ ಮಾಡಲು ಉಪಯೋಗಿಸುವುದು ಕಾರ್ಬನ್, ಆಕ್ಸಿಜನ್, ಹೈಡ್ರೋಜನ್ ಹಾಗು ಕ್ಲೋರೈಡ್. ಹಾರ್ವರ್ಡ್ ಸ್ಕೂಲ್ ಒಫ್ ಪಬ್ಲಿಕ್ ಹೆಲ್ತ್ ಪ್ರಕಾರ ಹೆಚ್ಚುವರಿ ನೀರಿನ ಬಾಟಲ್ ಗಳಲ್ಲಿ ಪಾಲಿ ಕಾರ್ಬೊನೇಟ್ ಪ್ಲಾಸ್ಟಿಕ್ ನ ಬಳಕೆ ಮಾಡಲಾಗುತ್ತದೆ. ನೀವು ಗಮನಿಸಿರಬಹುದು, ಕೆಲವು ನೀರಿನ ಬಾಟಲ್ ಗಳು ಮೃದುವಾಗಿರುತ್ತದೆ. ಈ ಬಾಟಲ್ ಗಳಲ್ಲಿ phthalate ಹಾಗು Bisaphenol-A (BPA) ಎನ್ನುವ ಕೆಮಿಕಲ್ ಬಳಸಲಾಗುತ್ತದೆ. ಇದರಿಂದ ಹೃದಯರೋಗ ಹಾಗು ಮದುಮೇಹ ಕಾಯಿಲೆಗೆ ಕಾರಣವಾಗುತ್ತದೆ.
ನಿಮಗೆ ಗೊತ್ತಿರುವ ಹಾಗೇನೇ ಈ ಪ್ಲಾಸ್ಟಿಕ್ ಬಾಟಲಿ ಇಂದ ನೀರು ಕುಡಿಯುವಾಗ ಗೊತ್ತು ಗೊತ್ತಿಲ್ಲದೆಯೋ ಮೈಕ್ರೋ ಪ್ಲಾಸ್ಟಿಕ್ ಕೂಡ ದೇಹದೊಳಗೆ ಹೋಗುತ್ತದೆ. Frotiers.Org ವರದಿ ಪ್ರಕಾರ, ಬೀದಿ ಬದಿ ಮಾರಾಟ ಮಾಡುವ ಬಾಟಲಿ ಗಳು ಸೂರ್ಯನ ಬಿಸಿಲಲ್ಲಿ ಇರುವುದರಿಂದ ಇದು ವಿಷಕಾರಿಯಾಗುತ್ತದೆ. ಈ ನೀರನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ತೊಂದರೆಗಳು ಉಂಟಾಗುತ್ತದೆ.
ಈ ನೀರು ಕುಡಿಯುವುದರಿಂದ ದೇಹದಲ್ಲಿ ಹಾರ್ಮೋನ್ ಸಮತೋಲನ ಕಾಪಾಡುವ ಅಂತಃಸ್ರಾವಕಗಳಿಗೆ ತೊಂದರೆ ಉಂಟು ಮಾಡುತ್ತದೆ. ಈ ತರಹ ನೀವು ನಿರಂತರವಾಗಿ ಪ್ಲಾಸ್ಟಿಕ್ ಬಾಟಲ್ ನೀರು ಕುಡಿದರೆ ನಿಮಗೆ ಬಂಜೆತನ, ಯಕೃತ್ ನ ಸಮಸ್ಯೆ, ಹಾರ್ಮೋನ್ ಅಸಮತೋಲನ, ಆರಂಭಿಕ ಪ್ರೌಡಾವಸ್ಥೆ ಸಮಸ್ಯೆಗೆ ಕಾರಣವಾಗಬಹುದು. ಮೈಕ್ರೋ ಪ್ಲಾಸ್ಟಿಕ್ ಇಂದ ಅನೇಕ ಜನರು ಕ್ಯಾನ್ಸರ್ ಸಮಸ್ಯೆ ಕೂಡ ಎದುರಿಸುತ್ತಿದ್ದಾರೆ. ಆದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ದುಬಾರಿಯಾದರೂ ಪರವಾಗಿಲ್ಲ, ಸ್ಟೀಲ್ ಅಥವಾ ಅಲ್ಯೂಮಿನಿಯಂ ಬಾಟಲ್ ಬಳಸಿ.