ಅಂದು RCB ಹಾಕುತ್ತಿದ್ದ ಪ್ಲೇ ಆಫ್ ಲೆಕ್ಕಾಚಾರ ಇಂದು ಮುಂಬೈ ಹಾಕುತ್ತಿದೆ. ಲೆಕ್ಕಾಚಾರ ಪ್ರಕಾರ ಮುಂಬೈ ಗೆ ಇನ್ನು ಚಾನ್ಸ್ ಇದೆಯಾ?

455

ಐಪಿಎಲ್ ಅಲ್ಲಿ ಅತ್ಯಂತ ಯಶಸ್ವೀ ತಂಡ ಅಂತ ಇದ್ದರೆ ಅದು ಮುಂಬೈ ಇಂಡಿಯನ್ಸ್ ಹಾಗು ಚೆನ್ನೈ ಸೂಪರ್ ಕಿಂಗ್ಸ್. ಎರಡು ತಂಡಗಳು ಕೂಡ ಟ್ರೋಫಿ ಗೆಲ್ಲುವಲ್ಲಿ ಹಾಗು ಪ್ಲೇ ಆಫ್ ತನಕ ಬರುವಲ್ಲಿ ಸಫಲವಾಗಿದೆ. ಈ ಬಾರಿಯ ಐಪಿಎಲ್ ಅಲ್ಲಿ ಎರಡು ತಂಡಗಳು ಕೂಡ ಟೇಬಲ್ ಕೊನೆಯ ಎರಡು ಸ್ಥಾನಗಳಲ್ಲಿ ಇದೆ. ಚೆನ್ನೈ ಎರಡು ಪಂದ್ಯಗಳನ್ನಾದರೂ ಗೆದ್ದುಕೊಂಡಿದೆ ಆದರೆ ಮುಂಬೈ ಇಂಡಿಯನ್ಸ್ ಆಡಿದ ೭ ಪಂದ್ಯಗಳಲ್ಲಿ ೭ ನ್ನು ಸೋತಿದೆ.

ರೋಹಿತ್ ಶರ್ಮ ನಾಯಕ್ತ್ವದ ಬಗ್ಗೆ ಕೂಡ ಪ್ರಶ್ನೆ ಎದ್ದಿದೆ. ಇದೆ ಸ್ಥಿತಿಯಲ್ಲಿ ಬಹಳ ಬಾರಿ RCB ಕೂಡ ಇತ್ತು. ಅವಾಗೆಲ್ಲ ಅಭಿಮಾನಿಗಳು ಸೋತರು ಕೂಡ ಪ್ಲೇ ಆಫ್ ಲೆಕ್ಕಾಚಾರ ಹಾಕುತಿದ್ದರು. ಇದೀಗ ಆ ಪರಿಸ್ಥಿತಿ ಮುಂಬೈ ಇಂಡಿಯನ್ಸ್ ಹಾಗು ಚೆನ್ನೈ ಸೂಪರ್ ಕಿಂಗ್ಸ್ ಗೆ ಬಂದಿದೆ. ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಗೆ ಬರಲು ಅವಕಾಶ ಇದೆಯಾ? ಏನು ಹೇಳುತ್ತವೆ ಲೆಕ್ಕಾಚಾರ? ಇಲ್ಲಿದೆ ನೋಡಿ. ಮುಂಬೈ ಇಂಡಿಯನ್ಸ್ ಇನ್ನು ಉಳಿದ ೭ ಪಂದ್ಯಗಳನ್ನು ಆಡಲಿದೆ. ಈ ೭ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಪರಿಸ್ಥಿತಿ ತಂಡಕ್ಕಿದೆ.

ಒಂದು ಪಂದ್ಯ ಸೋತರು ಕೂಡ ಮುಂಬೈ ಪ್ಲೇ ಆಫ್ ಕನಸು ಕನಸಾಗಿಯೇ ಉಳಿಯಲಿದೆ. ೭ ಪಂದ್ಯಗಳಲ್ಲಿ ಏಳನ್ನು ಗೆದ್ದರು ಕೂಡ ಪ್ಲೇ ಆಫ್ ಆಡುವುದು ಖಚಿತವಲ್ಲ. ೧೦ ನೇ ಸ್ಥಾನದಲ್ಲಿ ಇರುವ ಮುಂಬೈ ೧೪ ಅಂಕ ಗಳಿಸಿದರು ಕೂಡ ರನ್ ರೇಟ್ ಕಾಪಾಡುವುದರ ಜೊತೆಗೆ ಇತರ ತಂಡಗಳು ಉಳಿದ ಪಂದ್ಯಗಳಲ್ಲಿ ಸೋಲಲೇ ಬೇಕು. ಮುಂಬೈ ಒಂದು ಪಂದ್ಯ ಸೋತರು ಕೂಡ ೧೨ ಅಂಕ ಗಳಿಸುತ್ತದೆ. ಇದರಿಂದ ಪ್ಲೇ ಆಫ್ ಗೆ ಹೋಗುವುದು ಕನಸಾಗಿಯೇ ಉಳಿಯಲಿದೆ.

ಕಳೆದ ಚೆನ್ನೈ ಜೊತೆಗಿನ ಪಂದ್ಯದಲ್ಲಿ ಕೊನೆಯವರೆಗೂ ಗೆಲುವು ಪಕ್ಕ ಎಂದೇ ನಂಬಿತ್ತು ಮುಂಬೈ ಆದರೆ ಚೆನ್ನೈ ಸೂಪರ್ ಕಿಂಗ್ಸ್ ನ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕೊನೆ ಓವರ್ ನ ಸಿಕ್ಸ್ ಹಾಗು ಫೋರ್ ಗಳಿಂದ ಪಂದ್ಯ ಸಂಪೂರ್ಣ ಚೆನ್ನೈ ಪರ ಬಂದಿತು. ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ ಅಜೇಯ ೫೧ ರನ್ ಗಳಿಸಿ ಎಲ್ಲರ ಗಮನ ಸೆಳೆದರು. ಹಾಗೇನೇ ಅತ್ಯಂತ ದುಬಾರಿ ಆಟಗಾರ ಇಶಾನ್ ಕಿಶನ್ ನಿನ್ನೆಯ ಪಂದ್ಯದಲ್ಲೂ ಕೂಡ ಯಾವುದೇ ಗಮನಾರ್ಹ ಆಟವಾಡದೆ ಪೆವಿಲಿಯನ್ ಸೇರಿದರು. ರೋಹಿತ್ ಶರ್ಮ ಅವರು ರನ್ ಗಳಿಸಲು ಪರದಾಡಿದ್ದು ಭಾರತೀಯ ತಂಡಕ್ಕೂ ಆತಂಕ ತಂದಿದೆ.

 

Leave A Reply

Your email address will not be published.