ಅದೊಂದು ಕಾರಣಕ್ಕೆ ಮತ್ತೊಮ್ಮೆ ಧೋನಿಯನ್ನು ನೆನೆದ ವಿರಾಟ್ ಕೊಹ್ಲಿ: ಪೋಸ್ಟ್ ನೋಡಿ ಕಣ್ಣೀರು ಹಾಕಿದ ಫ್ಯಾನ್ಸ್. ಏನಾಗಿದೆ ಗೊತ್ತೆ??

91

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೋಹ್ಲಿ ಅವರು ಕಳಪೆ ಫಾರ್ಮ್ ಇಂದ ಬಳಲುತ್ತಿದ್ದರು. ಇದೀಗ ವಿರಾಟ್ ಅವರು ಒಂದು ತಿಂಗಳ ವಿಶ್ರಾಂತಿ ಪಡೆದು, ಭಾರತ ತಂಡಕ್ಕೆ ಮರಳಿ ಬಂದಿದ್ದಾರೆ. ಏಷ್ಯಾಕಪ್ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ಅವರು ಕಂಬ್ಯಾಕ್ ಮಾಡಿ, ಕಳಪೆ ಫಾರ್ಮ್ ಇಂದ ಹೊರಬರುವ ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗಿ ಅದ್ಭುತವಾಗಿ ಪ್ರಾಕ್ಟೀಸ್ ಸಹ ಮಾಡುತ್ತಿದ್ದಾರೆ. ಈಗಾಗಲೇ ದುಬೈ ಗೆ ತೆರಳಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ನಾಳೆ ನಡೆಯುವ ಭಾರತ ವರ್ಸಸ್ ಪಾಕಿಸ್ತಾನ್ ತಂಡದಲ್ಲಿ ವಿರಾಟ್ ಕೋಹ್ಲಿ ಬ್ಯಾಟ್ ಬೀಸಲು ರೆಡಿ ಆಗಿದ್ದಾರೆ.

ಈ ನಡುವೆ ವಿರಾಟ್ ಕೋಹ್ಲಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಶೇಷವಾದ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರ ಜೊತೆಗಿರುವ ಫೋಟೋ. ಇದು 2016ರಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದ ಫೋಟೋ ಆಗಿದ್ದು, ಇದನ್ನು ಶೇರ್ ಮಾಡಿ, ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ ವಿರಾಟ್ ಕೋಹ್ಲಿ. “ಧೋನಿ ಅವರ ನಾಯಕತ್ವದಲ್ಲಿ ಉಪನಾಯಕ ಆಗಿದ್ದದ್ದು ನನ್ನ ವೃತ್ತಿ ಜೀವನದ ಅತ್ಯಂತ ಸಂತೋಷದ ಕ್ಷಣಗಳು. ಅವರ ಜೊತೆಗಿನ ನಮ್ಮ ಪಾಲುದಾರಿಕೆ ನನಗೆ ಯಾವಾಗಲೂ ಸಂತೋಷ ತಂದುಕೊಡುತ್ತದೆ. 7+18❤️” ಎಂದು ಬರೆದುಕೊಂಡಿದ್ದಾರೆ..

ಇಲ್ಲಿ 7 ಮತ್ತು 18 ಎನ್ನುವುದು ಈ ಇಬ್ಬರು ಆಟಗಾರರ ಜೆರ್ಸಿ ನಂಬರ್ ಆಗಿದೆ. ವಿರಾಟ್ ಕೋಹ್ಲಿ ಅವರು ಈ ಪೋಸ್ಟ್ ಶೇರ್ ಮಾಡಿರುವುದು ಇಬ್ಬರು ಆಟಗಾರರ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ. ಧೋನಿ ಅವರ ಕ್ಯಾಪ್ಟನ್ಸಿಯಲ್ಲಿ ವಿರಾಟ್ ಕೋಹ್ಲಿ ಅವರು ಟಿ20 ವಿಶ್ವಕಪ್, ಏಷ್ಯಾಕಪ್ ಹೀಗೆ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಉತ್ತಮವಾದ ಪ್ರದರ್ಶನವನ್ನು ಸಹ ನೀಡಿದ್ದಾರೆ. ಏಷ್ಯಾಕಪ್ ಪಂದ್ಯಗಳ ಬಗ್ಗೆ ಹೇಳುವುದಾದರೆ, ನಾಳೆ ನಡೆಯುವ ರೋಚಕ ಪಂದ್ಯವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Leave A Reply

Your email address will not be published.