ಆಟಗಾರರಿಗೆ ಸಿಹಿ ಸುದ್ದಿ ಇದ್ದದ್ದೇ, ಈ ಬಾರಿ ಅಂಪೈರ್ ಗಳಿಗೂ ಗುಡ್ ನ್ಯೂಸ್ ಕೊಟ್ಟ ಬಿಸಿಸಿಐ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ನಿರ್ಣಾಯಕ ಸಂದರ್ಭ ಬಂದರೇ ಅಂತಹ ನಿರ್ಣಯಗಳನ್ನು ನೀಡುವುದು ದೇವರು ಎಂಬ ಅಂಪೈರ್. ಎಲ್ಲದಕ್ಕೂ ತೀರ್ಪುಗಾರ ಅವನೇ. ಇನ್ನು ಕ್ರೀಡೆಯ ಸಂದರ್ಭದಲ್ಲಿಯೂ ಸಹ ಅಂಪೈರ್ ತೀರ್ಮಾನವೇ ಅಂತಿಮ ತೀರ್ಮಾನ ಎಂಬ ಬರಹಗಳನ್ನು ನೀವು ಗಮನಿಸಿರುತ್ತಿರಿ.ಅಂತಹ ಮಹತ್ವದ ಬೇಡಿಕೆ ಅಂಪೈರ್ ಸ್ಥಾನಕ್ಕೆ ಇದೆ. ಇನ್ನು ಕ್ರಿಕೆಟ್ ನಲ್ಲಿಯೂ ಸಹ ಅಂಪೈರ್ ಗಳ ಸ್ಥಾನಕ್ಕೆ ಬಹಳ ಮಹತ್ವವಿದ್ದು, ಉತ್ತಮ ಗುಣಮಟ್ಟದ ಅಂಪೈರಿಂಗ್ ಗೆ ಬಿಸಿಸಿಐ ಬಹಳ ಪ್ರಾಮುಖ್ಯತೆಯನ್ನು ಇತ್ತಿಚಿನ ದಿನಗಳಲ್ಲಿ ನೀಡುತ್ತಿದೆ.
ಕೇವಲ ಆಟಗಾರರಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಿದ್ದ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಈಗ ಅಂಪೈರ್ ಗಳಿಗೂ ಗುಡ್ ನ್ಯೂಸ್ ನೀಡಿದೆ. ಬನ್ನಿ ಆ ಗುಡ್ ನ್ಯೂಸ್ ಏನೆಂಬುದನ್ನು ನಾವು ತಿಳಿದುಕೊಳ್ಳೋಣ. ಕೋವಿಡ್ ನಂತರ ಕ್ರೀಡಾ ಚಟುವಟಿಕೆಗಳು ಮತ್ತೆ ಆರಂಭವಾಗಿವೆ. ಈ ದಿಸೆಯಲ್ಲಿ ಬಿಸಿಸಿಐ ರಣಜಿ,ಲಿಸ್ಟ್ ಎ ನಿಂದ ಹಿಡಿದು ಎಲ್ಲಾ ಥರಹದ ಪಂದ್ಯಗಳಿಗೆ ಉತ್ತಮ ಗುಣಮಟ್ಟದ ಅಂಪೈರ್ ಗಳನ್ನು ನೇಮಕ ಮಾಡಿಕೊಳ್ಳುವುದರ ಜೊತೆಗೆ ಈಗಿರುವ ಅಂಪೈರ್ ಗಳಿಗೆ ಸಹ ವೇತನವನ್ನು ಹೆಚ್ಚಿಸಿದೆ.
ಎ+ ಮತ್ತು ಎ ಶ್ರೇಣಿಯ ಅಂಪೈರ್ ಗಳಿಗೆ ಪ್ರಥಮ ದರ್ಜೆ ಪಂದ್ಯಗಳಿಗೆ ಪ್ರತಿ ದಿನಕ್ಕೆ 40 ಸಾವಿರ ಸಂಬಳ ನಿಗದಿಪಡಿಸಿದೆ. ಬಿ ಮತ್ತು ಸಿ ವಿಭಾಗದ ಅಂಪೈರ್ ಗಳಿಗೆ ಪ್ರತಿ ದಿನಕ್ಕೆ 30 ಸಾವಿರ ಸಂಬಳ ನಿಗದಿಪಡಿಸಿದೆ. ಇನ್ನು ಭಾರತದಿಂದ ಕೇವಲ ನಿತಿನ್ ಮೆನನ್ ಮಾತ್ರ ಐಸಿಸಿ ಎಲೈಟ್ ಗುಂಪಿಗೆ ಸೇರಿದವರಾಗಿದ್ದಾರೆ. ಹಾಗಾಗಿ ಐಸಿಸಿ ಎಲೈಟ್ ಗುಂಪಿಗೆ ಮತ್ತಷ್ಟು ಭಾರತೀಯ ಅಂಪೈರ್ ಗಳು ಸೇರಲು ಬಿಸಿಸಿಐ ಈ ಭಾರಿ ಪ್ರಯತ್ನ ನಡೆಸಲಿದೆ ಎಂದು ತಿಳಿದುಬಂದಿದೆ. ಕ್ರಿಕೆಟ್ ನಲ್ಲಿ ಕೇವಲ ಆಟಗಾರರಿಗೆ ಮಾತ್ರವಲ್ಲದೇ ಅಂಪೈರ್ ಗಳಿಗೂ ಸಹ ಶುಕ್ರದೆಸೆ ಆರಂಭವಾಗಿದೆ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.