ಆರ್ಸಿಬಿ ವಿಚಾರದ ಕುರಿತಾಗಿ ಸಿಹಿ ಸುದ್ದಿ ಹಂಚಿಕೊಂಡ ಎಬಿಡಿ: ಅಭಿಮಾನಿಗಳಿಗೆ ಎಬಿಡಿ ರವಾನೆ ಮಾಡಿದ ಸಂದೇಶ ಏನು ಗೊತ್ತೇ??

103

ಆರ್.ಸಿ.ಬಿ ತಂಡದ ಆಪತ್ಬಾಂಧವನಾಗಿ ಇದ್ದವರು ಎಬಿ ಡಿವಿಲಿಯರ್ಸ್ ಅವರು. ಇಂದಿಗು ಆರ್.ಸಿ.ಬಿ ತಂಡದ ಪರವಾಗಿ ಎಬಿಡಿ ಅವರು ಆಡಿರುವ ಇನ್ನಿಂಗ್ಸ್ ಗಳನ್ನು ಆರ್.ಸಿ.ಬಿ ಅಭಿಮಾನಿಗಳು ಮರೆಯಲು ಸಾಧ್ಯವಿಲಾಲ್. ಆರ್.ಸಿ.ಬಿ ಪರವಾಗಿ ಕ್ರೀಸ್ ನಲ್ಲಿ ಎಬಿಡಿ ಇದ್ದಾರೆ ಅಂದ್ರೆ, ಒಂಟಿ ಸಲಗದ ಹಾಗೆ ಪಂದ್ಯ ಗೆದ್ದು ಬರುತ್ತಾರೆ ಎನ್ನುವ ನಂಬಿಕೆ ಇರುತ್ತಿತ್ತು. ಎಬಿಡಿ ಅಬರ 360 ಡಿಗ್ರಿ ಬ್ಯಾಟಿಂಗ್ ವೈಖರಿಯನ್ನು ಯಾರು ತಾನೇ ಮರೆಯಲು ಸಾಧ್ಯ. 11 ವರ್ಷಗಳ ಕಾಲ ಎಬಿಡಿ ಅವರು ಆರ್.ಸಿ.ಬಿ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ.

ಆದರೆ ಕಳೆದ ವರ್ಷ ಎಬಿಡಿ ಎಲ್ಲಾ ಫಾರ್ಮ್ ಆಫ್ ಕ್ರಿಕೆಟ್ ಇಂದಲೂ ನಿವೃತ್ತಿ ಪಡೆದರು. ಹಾಗಾಗಿ ಐಪಿಎಲ್ ಸೀಸನ್ 15ರಲ್ಲಿ ಎಬಿಡಿ ಅವರು ಆರ್.ಸಿ.ಬಿ ಪರವಾಗಿ ಆಡಲಿಲ್ಲ, ಎಬಿಡಿ ಅವರನ್ನು ಎಲ್ಲರೂ ಮಿಸ್ ಮಾಡಿಕೊಂಡಿದ್ದಂತೂ ನಿಜ. ಆದರೆ ಇದೀಗ ಆರ್.ಸಿ.ಬಿ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ, ಅದೇನೆಂದರೆ ಎಬಿಡಿ ಅವರು ಮುಂದಿನ ವರ್ಷ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡಕ್ಕೆ ಮರಳಿ ಬರಲಿದ್ದಾರೆ. ಈ ವಿಚಾರ ಕನ್ಫರ್ಮ್ ಆಗಿದೆ. ಆದರೆ ಎಬಿಡಿ ಅವರು ಯಾವ ರೂಪದಲ್ಲಿ ಬರುತ್ತಾರೆ ಎಂದು ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ. ಐಪಿಎಲ್15ರ ಸಂದರ್ಶನದಲ್ಲಿ ವಿರಾಟ್ ಕೋಹ್ಲಿ ಅವರು ಮುಂದಿನ ವರ್ಷ ಎಬಿಡಿ ಅವರು ಮುಂದಿನ ವರ್ಷ ಆರ್ಸಿಬಿ ತಂಡಕ್ಕೆ ಮರಳಿ ಬರುತ್ತಾರೆ ಎಂದಿದ್ದರು.

ಇದೀಗ ಎಬಿಡಿ ಅವರು ಸಹ ಈ ವಿಚಾರಕ್ಕೆ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಎಬಿಡಿ ಅವರು ಹೇಳಿರುವ ಪ್ರಕಾರ, ಮುಂದಿನ ವರ್ಷ ನಾನು ನನ್ನ ಎರಡನೇ ತವರು ಮನೆಗೆ ಹೋಗಲಿದ್ದೇನೆ, ಇದರಿಂದ ನನಗೆ ಬಹಳ ಸಂತೋಷವಾಗಿದೆ.ಮುಂದಿನ ಸೀಸನ್ ನಲ್ಲಿ ನಾನು ಐಪಿಎಲ್ ನ ಭಾಗವಾಗಿರುತ್ತೇನೆ ಆದರೆ ಯಾವ ರೂಪದಲ್ಲಿ ಎನ್ನುವುದು ಇನ್ನು ನಿರ್ಧಾರವಾಗಿಲ್ಲ..ಎಂದಿದ್ದಾರೆ ಎಬಿಡಿ. ಸಧ್ಯಕ್ಕೆ ಆರ್ಸಿಬಿ ಕಡೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಎಬಿಡಿ ಅವರು ಬ್ಯಾಟಿಂಗ್ ಕೋಚ್ ಆಗಿ ಬರುತ್ತಾರೆ ಎನ್ನಲಾಗಿದ್ದು, ಆರ್ಸಿಬಿ ತಂಡದ ಯುವ ಆಟಗಾರರಿಗೆ ಎಬಿಡಿ ಸಲಹೆಗಳನ್ನು ನೀಡುವ ಮೂಲಕ ಆರ್ಸಿಬಿ ಜೆರ್ಸಿ ತೊಟ್ಟು ಮತ್ತೊಮ್ಮೆ ಮರಳಿ ಬರುತ್ತಿದ್ದಾರೆ.

Leave A Reply

Your email address will not be published.