ಆಶೀಶ್ ನೆಹ್ರಾ- ಗ್ಯಾರಿ ಕರ್ಸ್ಟನ್ ಇಬ್ಬರನ್ನು RCB ತೆಗೆದು ಹಾಕಿತ್ತು. ಇಂದು ಇವರಿಬ್ಬರ ಸಾಧನೆಗೆ ದೇಶವೇ ಚಪ್ಪಾಳೆ ತಟ್ಟುತ್ತಿದೆ.

319

ಇಂಡಿಯನ್ ಪ್ರೀಮಿಯರ್ ಲೀಗ್ ನ ೧೫ ನೇ ಆವೃತ್ತಿ ಭಾನುವಾರ ಮುಕ್ತಾಯಗೊಂಡಿತ್ತು. ಈ ಆವೃತ್ತಿಯಲ್ಲಿ ಪಾದಾರ್ಪಣೆ ಮಾಡಿದ ಗುಜರಾತ್ ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಪಡೆದುಕೊಂಡಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಗುಜರಾತ್ ಟೈಟಾನ್ಸ್ ೭ ವಿಕೆಟ್ ಗಳಿಂದ ಸೋಲಿಸುವುದರ ಮೂಲಕ ಸುಲಭ ಜಯವನ್ನು ಸಾಧಿಸಿದೆ. ಗುಜರಾತ್ ಈ ಸರಣಿ ಉದ್ದಕ್ಕೂ ತನ್ನ ಸಾಂಘಿಕ ಪ್ರದರ್ಶನ ತೋರುವುದರ ಮೂಲಕ ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡಿದೆ.

ಹಾರ್ದಿಕ್ ಪಂದ್ಯ ನೇತೃತ್ವದಲ್ಲಿ ಗುಜರಾತ್ ತಂಡ ಒಗ್ಗಟ್ಟಾಗಿ ಆಡಿ ಚೊಚ್ಚಲ ಪ್ರಶಸ್ತಿ ಪಡೆದಿದೆ. ಆದರೆ ಇದರ ಹಿಂದೆ ತಂಡದ ಸಹಾಯಕ ಸಿಬ್ಬಂದಿ ಅವರುಗಳ ದೊಡ್ಡ ಪಾತ್ರಗಳಿವೆ ಎನ್ನುವುದು ಸ್ಪಷ್ಟವಾಗಿದೆ. ವಿಶೇಷವಾಗಿ ಮೆಂಟರ್ ಗ್ಯಾರಿ ಕರ್ಸ್ಟನ್ ಹಾಗು ತರಬೇತುಗಾರ ಆಶೀಶ್ ನೆಹ್ರಾ. ಈ ಇಬ್ಬರ ಜೋಡಿ ತೆರೆಮರೆಯಲ್ಲಿ ನಿಂತು ನೀಡಿದ ಸಲಹೆ ಬಹಳ ಮಹತ್ವದಾಗಿತ್ತು. ಇದನ್ನು ತಂಡದ ಆಟಗಾರರು ಒಪ್ಪಿಕೊಂಡಿದ್ದಾರೆ. ಆದರೆ ಇದೆ ನೆಹ್ರಾ ಹಾಗು ಗ್ಯಾರಿ ಜೋಡಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೧೯ ರ ಆವೃತ್ತಿಯಲ್ಲಿ ಕೈಬಿಟ್ಟಿತ್ತು. ಆದರೆ ಈ ಜೋಡಿ ಹೊಸ ಋತುವಿನಲ್ಲಿ ಹೊಸ ತಂಡದೊಂದಿಗೆ ಬಂದು ಚೊಚ್ಚಲ ಪ್ರಶಸ್ತಿ ಗೆಲ್ಲಿಸಿ ಕೊಟ್ಟಿದ್ದಾರೆ.

ಬೆಂಗಳೂರು ತಂಡ ೨೦೧೮ ರ ನಂತರ ಬೌಲಿಂಗ್ ತರಬೇತುಗಾರರಾಗಿ ಆಶೀಶ್ ನೆಹ್ರಾ ಅವರನ್ನು ಹಾಗೇನೇ ಬ್ಯಾಟಿಂಗ್ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ಅವರನ್ನು ನೇಮಿಸಿತ್ತು. ಆದರೆ ಮುಂದಿನ ಆವೃತ್ತಿಗೆ ಇವರಿಬ್ಬರನ್ನು ಕೂಡ ಕೈ ಬಿಡಲಾಯಿತು. ಇವರಿಬ್ಬರನ್ನು ಬಿಟ್ಟರು ಕೂಡ RCB ಆಟ ಬದಲಾಗಲಿಲ್ಲ. ಪ್ರಶಸ್ತಿ ಕೂಡ ಗೆಲ್ಲಲಾಗಲಿಲ್ಲ. ಆದರೆ ಈ ಬಾರಿ ಈ ಜೋಡಿ ಹೊಸ ತಂಡದೊಂದಿಗೆ ಬಂದು ಪ್ರಶಸ್ತಿ ಗೆದ್ದಿದ್ದಾರೆ. ಕರ್ಸ್ಟನ್ ಗೆ ಸಾಕಷ್ಟು ತರಬೇತಿ ಅನುಭವವಿದೆ. ಅವರ ನೇತೃತ್ವದಲ್ಲಿಯೇ ೨೦೧೧ ರಲ್ಲಿ ಭಾರತ ವಿಶ್ವಕಪ್ ಗೆದ್ದಿತ್ತು. ಗ್ಯಾರಿ ಆಟಗಾರರಿಗೆ ಆಡಲು ಮುಕ್ತ ಅವಕಾಶ ನೀಡುತ್ತಾರೆ ಹಾಗೇನೇ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾರೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಇನ್ನು ಆಶೀಶ್ ನೆಹ್ರಾ ಬಗ್ಗೆನೂ ಮಾತಾಡಿದ ಹಾರ್ದಿಕ್ ಪಾಂಡ್ಯ, ನೆಹ್ರಾ ಅವರ ಶೈಲಿ ನಿರಾತಂಕವಾಗಿದೆ, ಅವರು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ. ಆಟಗಾರನ ಮೇಲು ಕೂಡ ಅಷ್ಟೇ ಪ್ರೆಷರ್ ಹಾಕುವುದಿಲ್ಲ. ತಂಡದ ಯಶಸ್ಸಿನಲ್ಲಿ ಇವರಿಬ್ಬರ ಪಾತ್ರ ತುಂಬಾ ದೊಡ್ಡದಿದೆ ಎಂದು ಹಾರ್ದಿಕ್ ಪಾಂಡ್ಯ ಕಪ್ ಗೆದ್ದ ಬಳಿಕ ಹೇಳಿದ್ದಾರೆ. ಇವರಿಬ್ಬರು ಕೂಡ ಆಟಗಾರರಿಗೆ ಮೈದಾನದಲ್ಲಿ ಸಾಕಷ್ಟು ಅಭ್ಯಾಸ ನಡೆಸಿದ್ದಾರೆ. ಅಲ್ಲದೆ ಆಟಗಾರರು ವಿಫಲವಾದರು ಕೂಡ ಅವರಿಗೆ ಬಹಳ ಅವಕಾಶ ನೀಡಿದರು. ಇದು ಆಟಗಾರರ ಹಾಗು ತಂಡದ ಆತ್ಮವಿಶ್ವಾಸ ಹೆಚ್ಚಿಸಿತ್ತು ಎಂದು ಪಾಂಡ್ಯ ಹೇಳಿದ್ದಾರೆ.

Leave A Reply

Your email address will not be published.