ಆಸ್ಟ್ರೇಲಿಯದಲ್ಲಿ ನಡೆಯುವ ಈ ಟೆಸ್ಟ್ ಕ್ರಿಕೆಟ್ ಗೆ ಬಾಕ್ಸಿಂಗ್ ಡೇ ಟೆಸ್ಟ್ ಎಂದು ಏಕೆ ಕರೆಯುತ್ತಾರೆ? ಏನು ಇದರ ಹಿಂದಿನ ಕಥೆ?

1,144

ಕ್ರಿಕೆಟ್ ಎಂದರೆ ಎಲ್ಲರಿಗೂ ಅತೀ ಪ್ರೀತಿ. ಬಾಲ್ಯದಿಂದಲೇ ಒಂತರಾ ಈ ಆಟದ ಹುಚ್ಚು. ಸ್ವಲ್ಪ ಜಾಗ ಸಿಕ್ಕಿದರೆ ಸಾಕು ಅಲ್ಲೇ ಶುರು, ಯಾಕೆಂದರೆ ಈ ಆಟದ ಕ್ರೇಜ್ ಅಷ್ಟರ ಮಟ್ಟಿಗೆ ಇದೆ. ಅಂತಹುದೇ ಈ ಕ್ರಿಕೆಟ್ ಆಟದ ಬಗೆಗೆ ನಾವು ಇಂದು ತಿಳಿಯೋಣ. ಆಸ್ಟ್ರೇಲಿಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎಂದರೂ ತಪ್ಪಾಗಲಾರದು. ಯಾಕೆಂದರೆ ಅವರು ಕ್ರಿಕೆಟ್ ನಲ್ಲಿ ಮಾಡಿದ ಸಾಧನೆ ಆ ಮಟ್ಟಿಗೆ ಇದೆ.

ಆಸ್ಟ್ರೇಲಿಯಾ ಪ್ರತಿ ವರ್ಷ ಡಿಸೆಂಬರ್ 26 ರಂದು ಮೆಲ್ಬರ್ನ್ ಕ್ರಿಕೆಟ್ ಅಂಗಣದಲ್ಲಿ ಕ್ರಿಕೆಟ್ ಮ್ಯಾಚ್ ಆಯೋಜಿಸುತ್ತದೆ. ಈ ಒಂದು ನಿರ್ದಿಷ್ಟ ಪಂದ್ಯಕ್ಕೆ ಬಾಕ್ಸಿಂಗ್ ಡೇ ಟೆಸ್ಟ್ ಅಂತಲೇ ಹೆಸರು ಇದೆ. ಹಾಗಾದರೆ ಈ ಹೆಸರಿಟ್ಟರುವ ಹಿಂದೆ ಏನಾದರೂ ಕಥೆ ಇದೆಯೇ ? ಎಂಬ ಯೋಚನೆ ನಿಮ್ಮ ಮನಸಿನಲ್ಲಿದರೆ, ಸರಿಯಾಗಿ ಯೋಚನೆ ಮಾಡಿದ್ದೀರಿ. ವಿಕ್ಟೋರಿಯಾ ರಾಣಿ ಇರುವಾಗಿನ ಕಾಲಕ್ಕೆ ನಾವು ಒಮ್ಮೆ ಹೋಗಿ ಬರಬೇಕು. ವಿಚಿತ್ರ ಎನಿಸಿದರೂ ಸತ್ಯ ಯಾಕಂದರೆ ಈ ಒಂದು ಹೆಸರು ವಿಕ್ಟೋರಿಯಾ ರಾಣಿ ಅವರ ಕಾಲಕ್ಕೆ ಸಂಬಂಧ ಇದೆ.

ಹೌದು ತಮ್ಮ ಎಲ್ಲಾ ನೌಕರರಿಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ಮಸ್ ಮುಗಿದ ಒಂದು ದಿನಕ್ಕೆ ಅಂದರೆ ಡಿಸೆಂಬರ್ 26 ರಂದು ವಿಕ್ಟೋರಿಯಾ ರಾಣಿ ಬಾಕ್ಸ್ ನಲ್ಲಿ ಉಡುಗೊರೆಗಳನ್ನು ಕೊಡುತ್ತಿದ್ದರು. ಹೌದು ಇದು ಎಷ್ಟು ಪ್ರಸಿದ್ದಿ ಆಗಿತ್ತು ಎಂದರೆ ಈ ಸಂಪ್ರದಾಯ ನಡೆದು ನಡೆದು ಆ ದಿನವನ್ನು ಬಾಕ್ಸಿಂಗ್ ಡೇ ಅಂತಲೇ ಕರೆಯಲು ಶುರು ಮಾಡಿದರು. ಅದರ ನೆನಪಿಗಾಗಿ ಇಂದಿಗೂ ಕೂಡ ಕ್ರಿಕೆಟ್ ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್ ಅನ್ನು ಆಚರಿಸುತ್ತದೆ.

Leave A Reply

Your email address will not be published.