ಇಶಾಂತ್ ಕಿಶನ್, ರಿಷಬ್ ಪಂತ್ ಹಾಗು ದಿನೇಶ್ ಕಾರ್ತಿಕ್ ಈ ಮೂವರಲ್ಲಿ ಈ ಆಟಗಾರನೇ ವಿಶ್ವಕಪ್ ಗೆ ಭಾರತದ ಟಿ-೨೦ ತಂಡದಲ್ಲಿ ಇರಬೇಕಂತೆ.

221

ಟಿ-20 ವಿಶ್ವಕಪ್ ಗೆ ಇನ್ನು ೬ ತಿಂಗಳು ಮಾತ್ರ ಬಾಕಿ ಇದೆ. ಆಯ್ಕೆ ಸಮಿತಿಯವರು ವಿಶ್ವಕಪ್ ಗೆ ಭಾರತ ತಂಡ ಹೇಗಿರಬೇಕು ಎಂದು ಈಗಾಗಲೇ ಯೋಚನೆ ಮಾಡುತ್ತಿರಬಹುದು. ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮ, ಕೆ ಎಲ್ ರಾಹುಲ್ ಹಾಗು ಮೊಹಮ್ಮದ್ ಶಮ್ಮಿ ಖಂಡಿತವಾಗಿಯೂ ತಂಡದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಉಳಿದ ಜಾಗಕ್ಕೆ ಕೆಲವು ಆಟಗಾರರ ನಡುವೆ ಇದೀಗ ಸ್ಪರ್ಧೆ ಏರ್ಪಟ್ಟಿದೆ. ಯಾರು ರಿಸರ್ವ್ ಆಟಗಾರರಾಗುತ್ತಾರೆ, ಯಾರೆಲ್ಲ ಸ್ಪಿನ್ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತಾರೆ, ಯಾರು ಅಲ್ಲ್ರೌಂಡರ್ ಇರುತ್ತಾರೆ ಎನ್ನುವು ಕುತೂಹಲ ಇದೀಗಲೇ ಶುರುವಾಗಿದೆ.

ಆದರೆ ಮಾಜಿ ಆಟಗಾರರು ಹಾಗು ಕ್ರಿಕೆಟ್ ವಿಶ್ಲೇಷಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದರಲ್ಲಿ ಹಿಂದೆ ಉಳಿದಿಲ್ಲ. ಪ್ರತಿ ದಿನ ತಮಗೆ ಸರಿ ಎಣಿಸಿದ ಆಟಗಾರರ ಹೆಸರನ್ನು ಹೇಳುತ್ತಾ ಇರುತ್ತಾರೆ. ಅದೇ ರೀತಿ ಕ್ರಿಕೆಟ್ ಅಭಿಮಾನಿಗಳು ಕೂಡ ತಮ್ಮ ಆಯ್ಕೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೇಳುತ್ತಿರುತ್ತಾರೆ. ಇದೀಗ ವಿಕೆಟ್ ಕೀಪರ್ ಸ್ಥಾನಕ್ಕೆ ತೀವ್ರ ಪೈಪೋಟಿ ಕಾಣುತ್ತಿದೆ. ಇದು ದಿನೇಶ್ ಕಾರ್ತಿಕ್, ರಿಷಬ್ ಪಂತ್ ಹಾಗು ಇಶಾನ್ ಕಿಶನ್ ಈ ಮೂವರ ನಡುವೆ ತೀವ್ರ ಪೈಪೋಟಿ ಎದ್ದಿದೆ. ಆಯ್ಕೆ ಸಮಿತಿ ಈ ಸ್ಥಾನಕ್ಕೆ ಯಾರಾಗಬಲ್ಲರು ಎನ್ನುವ ಕ್ಲಿಷ್ಟ ಸ್ಥಿತಿಗೆ ಬಂದಿದ್ದಾರೆ.

ರಿಷಬ್ ಪಂತ್ ಅಂತಾರಾಷ್ಟ್ರೀಯ ತಂಡಕ್ಕೆ ಸ್ಥಾನ ಪಡೆದಿದ್ದರು ಕೂಡ ಐಪಿಎಲ್ ಅಲ್ಲಿ ಅವರ ಪ್ರದರ್ಶನ ಹೇಳಿಕೊಳ್ಳುವಷ್ಟು ಉತ್ತಮವಿರಲಿಲ್ಲ. ಇನ್ನು ಯುವ ಆಟಗಾರ ಇಶಾನ್ ಕಿಶನ್ ಕೂಡ ಐಪಿಎಲ್ ಅಲ್ಲಿ ಹರಾಜಾಗಿ ಪಡೆದುಕೊಂಡ ಮೊತ್ತಕ್ಕೆ ಉತ್ತಮ ಪ್ರದರ್ಶನ ನೀಡಲಿಲ್ಲ. ಇನ್ನು ವೃತ್ತಿ ಜೀವನಕ್ಕೆ ಎರಡನೇ ಅವಕಾಶ ಪಡೆದು ಆಯ್ಕೆ ಆದ ದಿನೇಶ್ ಕಾರ್ತಿಕ್ ಐಪಿಎಲ್ ಅಲ್ಲಿ ಭರ್ಜರಿ ಪ್ರದರ್ಶನ ತೋರಿದ್ದಾರೆ. ಇವರ ನಡುವೆ ಯಾರು ವಿಕೆಟ್ ಕೀಪರ್ ಆಗಿ ಆಯ್ಕೆ ಆಗಬೇಕು ಎನ್ನುವುದಕ್ಕೆ ಭಾರತದ ಮಾಜಿ ತರಬೇತುಗಾರರಾದ ರವಿ ಶಾಸ್ತ್ರೀ ಸ್ಪಷ್ಟ ಹೆಸರು ಹೇಳಿದ್ದಾರೆ.

ರಿಷಬ್ ಪಂತ್ ಹೊರತು ಪಡಿಸಿ ಬೇರೆ ಯಾರ ಬಗೆಯು ನಾನು ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ ರವಿ ಶಾಸ್ತ್ರೀ. ಆಸ್ಟ್ರೇಲಿಯಾದಲ್ಲಿನ ಪಂತ್ ಟ್ರ್ಯಾಕ್ ರೆಕಾರ್ಡ್ ಹಾಗು ಅಲ್ಲಿ ಯಾವ ಸಾಧನೆ ಮಾಡಿದ್ದಾರೆ ಎಂದು ನೋಡಿದರೆ ನನಗೆ ಬೇರೆ ಯಾರು ಕೂಡ ಈ ಸ್ಥಾನಕ್ಕೆ ಉತ್ತಮ ಎಂದು ಕಾಣುವುದಿಲ್ಲ ಎಂದು ಶಾಸ್ತ್ರೀ ಹೇಳಿದ್ದಾರೆ. ಪಂತ್ ಅಲ್ಲದೆ ಇವರ ಎರಡನೇ ಆಯ್ಕೆ ದಿನೇಶ್ ಕಾರ್ತಿಕ ಆಗಿದ್ದಾರೆ. ಹಾಗೇನೇ ತಂಡದಲ್ಲಿ ಫಿನಿಶರ್ ಪಾತ್ರವನ್ನು ದಿನೇಶ್ ಉತ್ತಮವಾಗಿ ನಿಭಾಯಿಸಬಲ್ಲರು ಎಂದು ಶಾಸ್ತ್ರೀ ಹೇಳಿದ್ದಾರೆ.

ರಿಷಬ್ ಪಂತ್ ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದರೆ ಕೆಳಗಿನ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಉತ್ತಮ ಆಯ್ಕೆ ಎಂದು ಶಾಸ್ತ್ರೀ ಅಭಿಪ್ರಾಯ ಪಟ್ಟಿದ್ದಾರೆ. ಹಾಗೇನೇ ಇಶಾನ್ ಕಿಶನ್ ಅವರು ಭಾರತದಲ್ಲಿ ನಡೆಯುವ ಸರಣಿಗೆ ಸೂಕ್ತರು ಅಲ್ಲದೆ ಅವರು ಆರಂಭಿಕ ಆಟಕ್ಕೆ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ಬೇಕಾಗಿರುವುದು ಫಿನಿಶರ್ ಅದಕ್ಕೆ 6 ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಉತ್ತಮ. ಅಲ್ಲದೆ ಅವರು ಎರಡನೇ ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ಆಸರೆ ಆಗುತ್ತಾರೆ. ಅವರ ಫಾರ್ಮ್ ಹಾಗು ಪ್ರಬುದ್ಧತೆ ಉತ್ತಮವಾಗಿದೆ. ಜವಾಬ್ದಾರಿಯುತ ಆಟಕ್ಕೆ ದಿನೇಶ್ ಕಾರ್ತಿಕ್ ಹೆಸರು ಶಾಸ್ತ್ರೀ ಸೂಚಿಸಿದ್ದಾರೆ. ನಿಮ್ಮ ಅಭಿಪ್ರಾಯವೇನು ಇದರ ಬಗ್ಗೆ? ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.