ಈತ ಏಷ್ಯಾ ಕಪ್ ಗೆ ಸಾಕು, ಈತನಿಂದ ಏನು ಪ್ರಯೋಜನವಿಲ್ಲ. ವಿಶ್ವಕಪ್ ಗೆ ಈತ ಬೇಡವಂತೆ. ಯಾರು ಗೊತ್ತೇ??

85

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಈಗ ಕಾಮೆಂಟೆಟರ್ ಸಹ ಆಗಿರುವ ರೋಹನ್ ಗವಾಸ್ಕರ್ ಇದೀಗ ಟಿ20 ವಿಶ್ವಕಪ್ ಪಂದ್ಯಗಳಿಗೆ ಭಾರತ ತಂಡಕ್ಕೆ ಆ ಒಬ್ಬ ಆಟಗಾರ ಬೇಡವೇ ಎಂದು ಶಾಕಿಂಗ್ ಕಮೆಂಟ್ ಮಾಡಿದ್ದಾರೆ. ಏಷ್ಯಾಕಪ್ ಪಂದ್ಯಗಳನ್ನು ನೋಡಿರುವ ರೋಹನ್ ಗವಾಸ್ಕರ್ ಆ ಒಬ್ಬ ಆಟಗಾರ ಮುಂಬರುವ ಟಿ20 ವಿಶ್ವಕಪ್ ಪಂದ್ಯಗಳಿಗೆ ಅರ್ಹನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು, ಆ ಆಟಗಾರ ಯಾರು? ರೋಹನ್ ಅವರು ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ..

ರೋಹನ್ ಗವಾಸ್ಕರ್ ಅವರು ಮಾತನಾಡಿರುವುದು, ಭಾರತ ತಂಡದ ಪರವಾಗಿ ಪ್ರಸ್ತುತ ಬೌಲಿಂಗ್ ಮಾಡುತ್ತಿರುವ ಆವೇಶ್ ಖಾನ್ ಅವರ ಬಗ್ಗೆ, ಆವೇಶ್ ಖಾನ್ ಅವರು ಈ ಹಿಂದಿನ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಪ್ರವಾಸ ಪಂದ್ಯಗಳಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನವೇನು ನೀಡಿಲ್ಲ, ಹಾಗಿದ್ದರೂ ಏಷ್ಯಾಕಪ್ 2022 ಪಂದ್ಯಗಳಿಗೆ ಆಯ್ಕೆಯಾದರು. ಆದರೆ ಆಡಿದ ಎರಡು ಪಂದ್ಯಗಳಲ್ಲೂ ಒಳ್ಳೆಯ ಪ್ರದರ್ಶನ ನೀಡಲಿಲ್ಲ, ಅದರಲ್ಲೂ ಹಾಂಗ್ ಕಾಂಗ್ ವಿರುದ್ಧ ಬೌಲಿಂಗ್ ಮಾಡಿದ 4 ಓವರ್ ಗಳಲ್ಲಿ ಬರೋಬ್ಬರಿ 53 ರನ್ ಬಿಟ್ಟುಕೊಟ್ಟರು. ಇದರಿಂದ ಆವೇಶ್ ಖಾನ್ ಟೀಕೆಗೆ ಸಹ ಗುರಿಯಾಗಿದ್ದಾರೆ.

ಇದೀಗ ರೋಹನ್ ಗವಾಸ್ಕರ್ ಅವರು ಸಹ ಆವೇಶ್ ಖಾನ್ ಅವರ ಬಗ್ಗೆ ಮಾತನಾಡಿ, ಈಗೇನೋ ಪರವಾಗಿಲ್ಲ, ವಿಶ್ವಕಪ್ ಪಂದ್ಯಗಳಿಗೆ ಈತ ಅರ್ಹನೇ ಅಲ್ಲ ಎಂದು ಹೇಳಿದ್ದಾರೆ. “ಟಿ20 ವಿಶ್ವಕಪ್ ನಲ್ಲಿ ಸ್ಥಾನ ಬೇಕಾದರೆ, ಪ್ರದರ್ಶನವನ್ನು ಸುಧಾರಿಸಿಕೊಳ್ಳುವ ಅವಶ್ಯಕತೆ ಇದೆ. ಆವೇಶ್ ಅವರ ಇಲ್ಲಿನವರೆಗಿನ ಪ್ರದರ್ಶನದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಜನರು ಯೋಚಿಸುವ ರೀತಿಯಲ್ಲೇ ಅವರು ಯೋಚನೆ ಮಾಡುತ್ತಿದ್ದಾರೆ. ಆದರೆ ಈಗ ಆವೇಶ್ ಖಾನ್ ಅವರು ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಾಗಿಲ್ಲ..” ಎನ್ನುವ ಮಾತುಗಳನ್ನು ಆಡಿದ್ದಾರೆ ಮಾಜಿ ಕ್ರಿಕೆಟಿಗ ರೋಹನ್ ಗವಾಸ್ಕರ್.

Leave A Reply

Your email address will not be published.