ಈ ಆಟಗಾರನ ವೃತ್ತಿ ಜೀವನಕ್ಕೆ ಬಿಳಲಿದೆಯಾ ಕತ್ತರಿ. ದಕ್ಷಿಣ ಆಫ್ರಿಕಾ ಸರಣಿಗೆ ತಂಡಕ್ಕೆ ಆಯ್ಕೆ ಆಗಿದ್ದರು ಕೂಡ ಪ್ಲೇಯಿಂಗ್ 11 ಅಲ್ಲಿ ಸಿಕ್ಕಿಲ್ಲ ಅವಕಾಶ.

`

245

ಇಂದು ಎರಡನೇ ಟಿ-೨೦ ದಕ್ಷಿಣ ಆಫ್ರಿಕಾ ಎದುರು ಭಾರತ ಆಡಲಿದೆ. ಮೊದಲನೇ ಪಂದ್ಯದಲ್ಲಿ ಹೀನಾಯವಾಗಿ ಸೋತ ಭಾರತ ಎರಡನೇ ಪಂದ್ಯದಲ್ಲಿ ಗೆಲ್ಲಲು ಕಾತೊರೆಯುತ್ತಿದೆ. ಈ ಪಂದ್ಯಕ್ಕೂ ಕೂಡ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ರಿಷಬ್ ಪಂತ್ ಹಾಗು ದ್ರಾವಿಡ್ ಅವರು ಕಳೆದ ಪಂದ್ಯದಲ್ಲಿ ಆಡಿದ ಆಟಗಾರರಿಗೆ ಇನ್ನೊಂದು ಅವಕಾಶ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದೆ. ನೋಡಬೇಕು ತಂಡ ಹೇಗೆ ಪ್ರದರ್ಶನ ಮಾಡಲಿದೆ ಎಂದು. ಈ ಬಾರಿಯೂ ಯಾವುದೇ ಬದಲಾವಣೆ ಮಾಡಲಾಗಿಲ್ಲ ತಂಡದಲ್ಲಿ.

ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ, ಇದರ ಮೂಲಕ ಈ ಆಟಗಾರನ ವೃತ್ತಿ ಜೀವನ ಅಡ್ಡ ಕತ್ತರಿಯಲ್ಲಿ ಬಿದ್ದಿದೆ. ಈ ಆಟಗಾರ ಬೇರ್ಯಾರು ಅಲ್ಲ ಆಲ್ರೌಂಡರ್ ವೆಂಕಟೇಶ್ ಅಯ್ಯರ್. ಕಳೆದ ವರ್ಷ ಹಾಗು ಐಪಿಎಲ್ ಮೊದಲು ಉತ್ತಮವಾಗಿ ಆಡುತ್ತಿದ್ದ ವೆಂಕಟೇಶ್ ಅಯ್ಯರ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಇವರ ಆಟದಲ್ಲಿ ಸ್ಥಿರತೆ ಇತ್ತು. ಮಿಡ್ಲ್ ಆರ್ಡರ್ ಅಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದ ಇವರು ಉತ್ತಮವಾಗಿ ಬ್ಯಾಟ್ ಮಾಡುತ್ತ ಎಲ್ಲರ ಗಮನ ತಮ್ಮತ್ತ ಸೆಳೆದ ಆಟಗಾರ. ಇದೆ ಕಾರಣಕ್ಕೆ ಐಪಿಎಲ್ ಅಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಕೋಲ್ಕತ್ತಾ ತಂಡದ ಪಾಲಾದರು.

ಕೋಲ್ಕತ್ತಾ ಪರ ಇವರನ್ನು ಆರಂಭಿಕ ಆಟಗಾರರಾಗಿ ಬಡ್ತಿ ನೀಡಲಾಯಿತು. ಆದರೆ ಇವರನ್ನು ಖರೀದಿಸಿದ ಹಣಕ್ಕೆ ಇವರ ಪ್ರದರ್ಶನ ನೀರಸವಾಗಿತ್ತು. ಇವರ ಬ್ಯಾಟ್ ಇಂದ ಯಾವುದೇ ಹೇಳಿಕೊಳ್ಳುವಂತ ಪ್ರದರ್ಶನ ಬರಲಿಲ್ಲ. ಆದರೂ ಕೂಡ ಇವರನ್ನು ಈ ಬಾರಿಯ ದಕ್ಷಿಣ ಆಫ್ರಿಕಾ ಎದುರಿನ ಟಿ-೨೦ ಸರಣಿಗೆ ಸೇರಿಸಲಾಯಿತು. ಆದರೆ ಇದೀಗ ಎರಡು ಪಂದ್ಯಗಳು ಮುಗಿಯಿತು ರಿಷಬ್ ಪಂತ್ ಇವರನ್ನು ಎರಡು ಪಂದ್ಯಗಳಿಗೂ ಸೇರಿಸಲಿಲ್ಲ. ಇವರ ಬದಲಿಗೆ ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದರೆ ಇದೆ ಕಾರಣಕ್ಕೆ ಇವರಿಗೆ ಮುಂಬರುವ ಸರಣಿಗೂ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ. ಇವರ ಅಂತಾರಾಷ್ಟ್ರೀಯ ವೃತ್ತಿ ಜೀವನ ಇದೀಗ ಅಪಾಯದಲ್ಲಿದೆ.

Leave A Reply

Your email address will not be published.