ಈ ಆಟಗಾರನ ಸಾಮರ್ಥ್ಯ ಧೋನಿ ಹಾಗು ಪಾಂಡ್ಯ ಗಮನಿಸಿಲ್ಲ. ಐಪಿಎಲ್ ನ ಒಂದು ಪಂದ್ಯಕ್ಕೂ ಇವರನ್ನು ಆಯ್ಕೆ ಮಾಡಲಲ್ಲಿ.ಇದೀಗ ಇಂಗ್ಲೆಂಡ್ ಅಲ್ಲಿ ದೊಡ್ಡ ಸುದ್ದಿ ಮಾಡಿದ್ದಾರೆ.

1,403

ವಯಸ್ಸು ಕೇವಲ 24 ಆದರೆ ಪ್ರತಿಭೆ ತುಂಬಿದೆ ಈ ಆಟಗಾರನಲ್ಲಿ. ಇದೆ ಕಾರಣಕ್ಕೆ ಇಂಗ್ಲೆಂಡ್ ಅಲ್ಲಿ ಎಲ್ಲರ ಮನಸೂರೆ ಗೊಳಿಸಿದ್ದಾರೆ ಈ ಆಟಗಾರ. ಇವರು ಐಪಿಎಲ್ ಅಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಈ ಆಟಗಾರನ ಪ್ರತಿಭೆ ಸಾಮರ್ಥ್ಯ ನಮಗೆ ತಿಳಿಯಲೇ ಇಲ್ಲ. ಕಾರಣ ಇವರು ಒಂದು ಪಂದ್ಯ ಕೂಡ ಆಡಿರಲಿಲ್ಲ. ಮಹೇಂದ್ರ ಸಿಂಗ್ ಧೋನಿ ಅವರ ಚೆನ್ನೈ ತಂಡದಲ್ಲಿ ಕಳೆದ ವರ್ಷ ಇದ್ದರು ಈ ಆಟಗಾರ ಯಾವಾಗಲೂ ಇವರಿಗೆ ಬೆಂಚು ಕಾಯುವ ಕೆಲಸವಿತ್ತು. ಈ ವರ್ಷ ಗುಜರಾತ್ ಟೈಟಾನ್ಸ್ ತಂಡದಲ್ಲಿ ಇದ್ದರು, ಇಲ್ಲೂ ಕೂಡ ಒಂದೇ ಒಂದು ಪಂದ್ಯ ಆಡಲು ಸಾಧ್ಯವಾಗಲಿಲ್ಲ.

ಪಾಂಡ್ಯ ಹಾಗು ಧೋನಿ ಇಬ್ಬರು ಕೂಡ ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲೇ ಇಲ್ಲ. ಒಂದೇ ಒಂದು ಪಂದ್ಯ ಆಡಲಿಲ್ಲ ಆದರೂ ಇವರು ಎರಡು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಐಪಿಎಲ್ ಅಲ್ಲಿ ತನ್ನ ಪ್ರತಿಭೆ ತೋರಿಸಲು ಸಾಧ್ಯವಾಗದೆ ಇದ್ದ ಇವರಿಗೆ ಅವಕಾಶ ಸಿಕ್ಕಿದ್ದು ಇಂಗ್ಲೆಂಡ್ ಅಲ್ಲಿ. ಇಂಗ್ಲೆಂಡ್ ಅಲ್ಲಿ ಆಗುತ್ತಿರುವ ಟಿ-೨೦ ಸರಣಿಯಲ್ಲಿ ಈ ಆಟಗಾರ ಯಾರ್ಕ್ ಶೈರ್ ಪರ ಆಡುತ್ತಿದ್ದಾರೆ. ನಾವು ಹೇಳುತ್ತಿರುವ ಆಟಗಾರನ ಹೆಸರು 24 ವರ್ಷದ ಡೊಮಿನಿಕ್ ಡ್ರೇಕ್ಸ್. ಹಿಂದೆ ಚೆನ್ನೈ ಹಾಗು ಗುಜರಾತ್ ಎರಡು ತಂಡಗಳು ಒಂದು ಅವಕಾಶವನ್ನು ಕೊಡಲಿಲ್ಲ.

ಇವರು ಈ ಬಾರಿ ಇಂಗ್ಲೆಂಡ್ ಅಲ್ಲಿ ಯಾರ್ಕ್ ಶೈರ್ ಪರ ಸಿಕ್ಕ ಅವಕಾಶ ಭರ್ಜರಿ ಆಗಿ ಬಳಸಿಕೊಂಡಿದ್ದಾರೆ.ಯಾರ್ಕ್ ಶೈರ್ ಹಾಗು ನೊಟ್ಟಿಂಗ್ ಶೈರ್ ನಡುವಿನ ಪಂದ್ಯದಲ್ಲಿ ಯಾರ್ಕ್ ಶೈರ್ 203 ರನ್ ಗಳ ಭರ್ಜರಿ ಆಟ ಪ್ರದರ್ಶನ ಮಾಡಿತ್ತು. ಇದನ್ನು ಬೆನ್ನತ್ತಿದ್ದ ನೊಟಿಂಗ್ಹ್ಯಾಮ್ ಶೈರ್ ಕೇವಲ 179 ರನ್ ಗಳಿಸಿ ಸೋಲು ಒಪ್ಪೊಕೊಂಡಿತು. ಇದಕ್ಕೆ ಮುಖ್ಯ ಕಾರಣ ಡೊಮಿನಿಕ್ ಡ್ರೇಕ್. ನಾಲ್ಕು ಓವರ್ ಅಲ್ಲಿ ೩೧ ರನ್ ನೀಡುವ ಮೂಲಕ 3 ವಿಕೆಟ್ ಪಡೆಯುವ ಮೂಲಕ 24 ರನ್ ಗಳ ಜಯ ದಾಖಲಿಸಲು ಸಾಧ್ಯವಾಯಿತು ಯಾರ್ಕ್ ಶೈರ್.

ಒಬ್ಬ ಆರಂಭಿಕ ಆಟಗಾರನನ್ನು, ಒಬ್ಬ ಉತ್ತಮ ಜೊತೆಯಾಟ ನಡೆಸುತ್ತಿದ್ದ ಆಟಗಾರ ಡೆನ್ ಕ್ರಿಶ್ಚಿಯನ್ 56 ರನ್ ಮಾಡಿ ಉತ್ತಮವಾಗಿ ಆಡುತ್ತಿದವನ ವಿಕೆಟ್ ಪಡೆಯುವ ಮೂಲಕ ಜಯದ ಹಾದಿ ಸುಗಮಗೊಳಿಸಿದರು. ಇನ್ನು ಇನೊಬ ಮಧ್ಯಕ್ರಮಾಂಕದ ಆಟಗಾರನ ವಿಕೆಟ್ ಪಡೆಯುವ ಮೂಲಕ ಗೆಲುವಿನ ಹಾದಿ ಸರಳಗೊಳಿಸಿದರು. ಇವರಲ್ಲದೆ ಇನ್ನು ನಮ್ಮ RCB ಪರ ಆಡಿದ ಡೇವಿಡ್ ವಿಲ್ಲೆ ಕೂಡ ಉತ್ತಮ ಬ್ಯಾಟ್ ಬಿಸಿದ್ದಾರೆ. ಇವರು ಕೂಡ ಅಲ್ಲ್ರೌಂಡರ್ ಆಗಿದ್ದು ಇಬ್ಬರು ತಮ್ಮ ಸಂಪೂರ್ಣ ಸಾಮರ್ಥ್ಯ ಇಂಗ್ಲೆಂಡ್ ಅಲ್ಲಿ ನಡೆಯುತ್ತಿರುವ ಟಿ-೨೦ ಸರಣಿಯಲ್ಲಿ ತೋರಿಸಿದ್ದಾರೆ. ಇದರ ಮೂಲಕ ತಮಗೆ ಐಪಿಎಲ್ ಅಲ್ಲಿ ಇನ್ನು ಹೆಚ್ಚಿನ ಅವಕಾಶ ಸಿಗಬೇಕಿತ್ತು ಎನ್ನುವುದು ಪರೋಕ್ಷವಾಗಿ ಹೇಳಿದ್ದಾರೆ.

Leave A Reply

Your email address will not be published.