ಈ ಐದು ಕಾರಣಗಳಿಂದಲೇ ಭಾರತ ಜೋಹನಿಸ್ ಬರ್ಗ್ ನ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ? ಯಾವುದು ಆ ಕಾರಣಗಳು?
ಭಾರತ ತಂಡ ಇತ್ತೀಚೆಗೆ ನಡೆದ ಎಲ್ಲಾ ಟೆಸ್ಟ್ ಪಂದ್ಯಗಳಲ್ಲಿ ತನ್ನ ಪಾರುಪತ್ಯ ಸ್ಥಾಪಿಸಿ ಕಳೆದ ವರ್ಷದ ಐಸಿಸಿ ರ್ಯಾಂಕಿಂಗ್ ನಲ್ಲಿ ನಂಬರ್ ವನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿ ಆಗಿದೆ. ತಂಡ ಎಲ್ಲಾ ರೀತಿಯಲ್ಲೂ ಸಧೃಡವಾಗಿ ಪ್ರದರ್ಶನ ತೋರುತ್ತಿದೆ. ಅದು ಭಾರತ ಇರಲಿ ಅಥವಾ ವಿದೇಶಗಳಲ್ಲಿ ಇರಲಿ ತನ್ನ ಉತ್ತಮ ಪ್ರದರ್ಶನ ಕಾಯ್ದು ಕೊಳ್ಳುವಲ್ಲಿ ಯಶಸ್ವಿ ಆಗಿದೆ. ಆದರೆ ಇತ್ತೀಚೆಗೆ ನಡೆದ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮುಗ್ಗರಿಸಿ, ದಕ್ಷಿಣ ಆಫ್ರಿಕಾದ ರೆಕಾರ್ಡ್ ಮುರಿಯುವಲ್ಲಿ ವಿಫಲ ಆಗಿದೆ. ಹೌದು ಇದುವರೆಗೂ ಆ ಕ್ರೀಡಾಂಗಣದಲ್ಲಿ ಯಾರು ಕೂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಲು ಆಗಿಲ್ಲ. ಆದರೆ ಭಾರತದ ಈ ವೈಫಲ್ಯಕ್ಕೆ ಕಾರಣಗಳು ಏನು ಎಂದು ಬೆನ್ನಟ್ಟಿ ಹೋದಾಗ ಈ 5 ಪ್ರಮುಖ ವಿಷಯಗಳು ತಿಳಿಯಬಹುದು.
1.ಭಾರತದ ಓಪನಿಂಗ್ ಜೋಡಿ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲರಾದರು. ಎರಡು ಇನ್ನಿಂಗ್ಸ್ ಗಳಲ್ಲಿ ಈ ಜೋಡಿ ಉತ್ತಮ ಆರಂಭ ಒದಗಿಸುವಲ್ಲಿ ಯಶಸ್ಸು ಕಾಣಲಿಲ್ಲ. 2.ಭಾರತದ ಮದ್ಯಮ ಕ್ರಮಾಂಕದ ಬ್ಯಾಟಸ್ಮನ್ ಗಳ ವೈಫಲ್ಯ ಕಾಣಬಹುದು. ರೀಶಬ್ ಪಂತ್, ಹನುಮ ವಿಹಾರಿ, ಮತ್ತು ಇತರರು ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. 3.ರವಿಚಂದ್ರನ್ ಅಶ್ವಿನ್ ಅವರ ಮೋಡಿ ಈ ಪಂದ್ಯಾಟದಲ್ಲಿ ನಡೆಯಲಿಲ್ಲ. ಎರಡು ಇನ್ನಿಂಗ್ಸ್ ಒಗ್ಗೂಡಿಸಿ ಅಶ್ವಿನ್ ಪಡೆದ ವಿಕೆಟ್ ಕೇವಲ ಒಂದು.
4. ಬಮ್ರಹ್ ಮತ್ತು ಶಮ್ಮಿ ಜೋಡಿಯ ವೈಫಲ್ಯ . ತಮ್ಮ ಕನ್ಸಿಸ್ಟನ್ಸಿ ಕಾಯುವಲ್ಲಿ ಈ ಜೋಡಿ ವಿಫಲ ವಾಯಿತು. ಇಬ್ಬರು ಎರಡು ಇನ್ನಿಂಗ್ಸ್ ನಲ್ಲಿ ಒಟ್ಟು 4 ವಿಕೆಟ್ ಪಡೆದರು. 5.ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಗೈರು ಕೂಡ ಒಂದು ಕಾರಣ ಆಗಿರಬಹುದು. ಈಗಾಗಲೇ ನೂತನ ಕೋಚ್ ಆಗಿ ನೇಮಕಗೊಂಡ ರಾಹುಲ್ ದ್ರಾವಿಡ್ ಅವರು ಮುಂದಿನ ಪಂದ್ಯಕ್ಕೆ ಯಾವ ರೀತಿ ತಂಡವನ್ನು ಸಜ್ಜುಗೊಳಿಸಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ. ಅದೇನೇ ಆಗಲಿ ಮುಂಬರುವ ಪಂದ್ಯವನ್ನು ಗೆದ್ದು ಸರಣಿ ವಶ ಪಡಿಸಿಕೊಳ್ಳಲಿ ಎಂಬುದು ಭಾರತೀಯರ ಆಶಯ.