ಈ ಬಾರಿಯ ಐಪಿಎಲ್ ಅಲ್ಲಿ ಹರಾಜಾಗದೆ ಉಳಿಯಬಹುದಾದ ಈ 3 ಆಟಗಾರರು. ಯಾರ್ಯಾರು ಗೊತ್ತೇ?

780

ಐಪಿಎಲ್ ಅಂದರೇನೇ ಹಾಗೇನೇ ಆಟಗಾರರಿಗೆ ದೊಡ್ಡ ಮೊತ್ತ ಪಡೆಯುವ ಅವಕಾಶ ಒಂದೆಡೆಯಾದರೆ, ಯಾವುದೇ ಡೀಲ್ ಪಡೆಯದೇ ಹಾರಾಜಗದೇ ಉಳಿಯುವ ಸಾಧ್ಯತೆ ಕೂಡ ಇದೆ. ಹಿಂದೆ ಹಲವಾರು ಆಟಗಾರರು ಹಾರಾಜಗದೇ ಉಳಿದಿರುವ ಸನ್ನಿವೇಶ ಇದೆ. ಈ ಬಾರಿಯೂ ಅದು ಮರುಕಳಿಸಬಹುದು. ಉದಾಹರಣೆಗೆ ಕ್ರೈಸ್ ಗೇಲ್ ಅಂದು ಹಾರಾಜಗದೇ ಉಳಿದಿದ್ದರು. ನಂತರ ಅರ ಸಿ ಬಿ ಅವರನ್ನು ಖರೀದಿಸಿತ್ತು. ಈ ಬಾರಿ ಹಾಗೆ ಆಗಲು ಬಹುದು ಆಗದೆ ಇರಲು ಬಹುದು. ಈ ಬಾರಿ ದೊಡ್ಡ ಆಟಗಾರರ ಪೈಕಿ ಈ ಮೂವರು ಹಾರಾಜಗದೇ ಇರುವ ಸಾಧ್ಯತೆ ಇದೆ.

೧. ಸುರೇಶ ರೈನಾ – ಭಾರತದಲ್ಲಿ ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತ ಅನೇಕ ಪಂದ್ಯಗಳನ್ನು ಗೆಲ್ಲಿಸಿದ ಶ್ರೇಯಸ್ಸು ಸುರೇಶ ರೈನಾ ರಿಗೆ ಸಲ್ಲುತ್ತದೆ. ಅದೇ ರೀತಿ ತಾವು ಐಪಿಎಲ್ ಅಲ್ಲಿ ಕೂಡ ಚೆನ್ನೈ ಪರ ಆಟ ಆಡಿ ಚೆನ್ನೈ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ರೈನಾ ಮಹತ್ತರ ಪಾತ್ರ ವಹಿಸಿದ್ದಾರೆ. ಅದೇ ಕಾರಣಕ್ಕೆ ಅವರನ್ನು ಚೆನ್ನೈ ಕಳೆದ ವರ್ಷದವರೆಗೆ ಕೂಡ ಬೇರೆ ತಂಡಕ್ಕೆ ಹೋಗದಂತೆ ಉಳಿಸಿಕೊಂಡಿತ್ತು. ಆದರೆ ಕಳೆದ ವರ್ಷ ಧೋನಿ ಜೊತೆಗೆ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರು. ಅಲ್ಲದೆ ಕಳೆದ ಆವೃತ್ತಿಯ ಪ್ಲೇ ಆಫ್ ಪಂದ್ಯದಲ್ಲಿ ರೈನಾ ಅವರನ್ನ ತಂಡದಿಂದ ಕೈ ಬಿಡಲಾಗಿತ್ತು. ಅದೇ ಕಾರಣಕ್ಕೆ ಈ ಬಾರಿ ಸುರೇಶ ರೈನಾ ಹಾರಾಜಗದೇ ಉಳಿಯುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ತಜ್ಞರು ಹಾಗು ಅಭಿಮಾನಿಗಳು ಹೇಳುತ್ತಿದ್ದಾರೆ.

೨.ಇಯಾನ್ ಮಾರ್ಗನ್ – ಕಳೆದ ಬಾರಿಯ ಐಪಿಎಲ್ ಅಲ್ಲಿ ಇಯಾನ್ ಮಾರ್ಗನ್ ಕೆ ಕೆ ಆರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಆದರೆ ಕೋಲ್ಕತ್ತಾ ತಂಡ ಮಾರ್ಗನ್ ಅವರನ್ನು ತಂಡದಲ್ಲಿ ಉಳಿಸದೆ ಹರಾಜಿಗೆ ಕಳಿಸಿದೆ. ಅವರ ನಾಯಕತ್ವದ ಕಾರಣದಿಂದ ಕಳೆದ ಬಾರಿ ತಂದಲ್ಲಿ ಸ್ಥಾನ ಸಿಕ್ಕಿತ್ತು ಹೊರತು ಅವರ ಬ್ಯಾಟ್ ಇಂದ ಹೇಳುವಷ್ಟು ಪ್ರದರ್ಶನ ಬಂದಿರಲಿಲ್ಲ. ಬೇರೆ ಯಾವ ಫ್ರಾಂಚೈಸ್ ಕೂಡ ಅವರನ್ನು ಖರೀದಿಸುವ ಉತ್ಸಾಹ ತೋರಿಸುತ್ತಿಲ್ಲ. ಇದೆ ಕಾರಣದಿಂದ ಇಯಾನ್ ಮಾರ್ಗನ್ ಕೂಡ ಈ ಬಾರಿಯ ಐಪಿಎಲ್ ಅಲ್ಲಿ ಹಾರಾಜಗದೇ ಉಳಿಯಬಲ್ಲ ಹಿರಿಯ ಆಟಗಾರಗಬಹುದು.

೩. ಆರನ್ ಫಿಂಚ್ – ಕಳೆದ ಬಾರಿ ಆರ್ ಸಿ ಬಿ ತಂಡದಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದ ಫಿಂಚ್ ಅವರ ಬ್ಯಾಟ್ ಇಂದ ಹೇಳುವಂತ ಯಾವುದೇ ಉತ್ತಮ ಪ್ರದರ್ಶನ ಬಂದಿರಲಿಲ್ಲ. ಅನೇಕ ನಿರ್ಣಾಯಕ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಪ್ರದರ್ಶನ ತೋರಿಸಲಿಲ್ಲ. ಇತ್ತೀಚಿಗೆ ಇವರು ಆಸ್ಟ್ರೇಲಿಯಾ ಟಿ-೨೦ ತಂಡದ ನಾಯಕರಾದರು ಕೂಡ ಐಪಿಎಲ್ ಅಲ್ಲಿ ಅವರ ಫಾರಂ ಉತ್ತಮವಾಗಿಲ್ಲ. ಇದೆ ಕಾರಣಕ್ಕೆ ಅವರು ಕೂಡ ಈ ಬಾರಿಯ ಐಪಿಎಲ್ ಅಲ್ಲಿ ಹಾರಾಜಗದೇ ಇರಬಹುದಾದ ಆಟಗಾರರಾಗಿರಬಹುದು.

Leave A Reply

Your email address will not be published.