ಈ ಬಾರಿಯ ಐಪಿಎಲ್ ಗೆ ವಿಶ್ವಕಪ್ ಟಚ್ ನೀಡಿದ ಬಿಸಿಸಿಐ. ಈ ರೀತಿ ಇರಲಿದೆ 2022 ನೇ ಐಪಿಎಲ್ ಪಂದ್ಯಾಟ?

847

ಐಪಿಎಲ್ ಅಂದರೆ ಭಾರತೀಯರಿಗೆ ಅದರಲ್ಲೂ ಈ ಕ್ರಿಕೆಟ್ ಪ್ರೇಮಿಗಳಿಗೆ ಒಂತರ ಹಬ್ಬ ಅಂದರೆ ತಪ್ಪಾಗಲ್ಲ. ಈ ಬಾರಿಯ ಐಪಿಎಲ್ ಸಂಪೂರ್ಣವಾಗಿ ಭಾರತದಲ್ಲಿಯೇ ಇರಲಿದೆ ಹಾಗು ಈ ಪಂದ್ಯಗಳು ಮಾರ್ಚ್ ೨೬ ರಿಂದ ಪ್ರಾರಂಭವಾಗಲಿದೆ. ಒಟ್ಟಾರೆ ೭೦ ಪಂದ್ಯಗಳ ಈ ಐಪಿಎಲ್ ಗ್ರಾಂಡ್ ಆಗಿ ಓಪನ್ ಆಗಲಿದೆ ಮಾರ್ಚ್ ಅಲ್ಲಿ. ಅಲ್ಲದೆ ಈ ಬಾರಿ ಬಿಸಿಸಿಐ ಐಪಿಎಲ್ ಗೆ ಹೊಸ ಟಚ್ ನೀಡಿದೆ. ವಿಶ್ವಕಪ್ ಮಾದರಿ ಪಂದ್ಯ ನಡೆಸಲು ಪ್ಲಾನ್ ಮಾಡಿದೆ. ಎರಡು ತಂಡಗಳು ಈ ಬಾರಿ ಹೊಸದಾಗಿ ಸೇರಿರುವುದರಿಂದ ಪಂದ್ಯಗಳು ರೋಚಕವಾಗಿರಲಿದೆ.

ಈ ಬಾರಿ ಐಪಿಎಲ್ ಆನು ಜೈವಿಕ ಸುರಕ್ಷಾ ವಾತಾವರಣದಲ್ಲಿ ನಡೆಸಲಾಗುವುದು ಅದರಿಂದ ವಿಮಾನ ಪ್ರಯಾಣಗಳನ್ನು ತಪ್ಪಿಸಲು ಕೇವಲ ಮುಂಬೈ ಹಾಗು ಪುಣೆಯಲ್ಲಿ ನಡೆಸಲು ನಿರ್ಧರಿಸಿದೆ. ಹಾಗೇನೇ ಕೊನೆಯ ಪ್ಲೇ ಆಫ್ ಗಳನ್ನು ಎಲ್ಲಿ ನಡೆಸಲಾಗುವುದು ಎನ್ನುವುದು ಇನ್ನು ಕೂಡ ನಿರ್ಧಾರ ಮಾಡಲಾಗಿಲ್ಲ ಎಂದು ಬಿಸಿಸಿಐ ಹೇಳಿದೆ. ಈಗ ಇರುವ ಹತ್ತು ಐಪಿಎಲ್ ತಂಡಗಳಲ್ಲಿ ಹೊಸ ತರಹದ ಮಾದರಿಯಲ್ಲಿ ಆಡಲಾಗುವುದು. ಪ್ರತಿ ತಂಡಗಳು ಕೂಡ ಮೊದಲಿನ ರೀತಿಯಲ್ಲೇ ೧೪ ಪಂದ್ಯಗಳನ್ನು ಆಡಲಿದೆ. ಆದರೆ ಅವುಗಳನ್ನು ಎರಡು ಗುಂಪುಗಳಾಗಿ ಮಾಡಲಾಗಿದೆ.

ಐದು ಬಾರಿ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಗ್ರೂಪ್ ಎ ತಂಡದ ಮುಖ್ಯ ತಂಡವಾದರೆ ನಾಲ್ಕು ಬಾರಿ ಚಾಂಪಿಯನ್ ಆದಂತಹ ಚೆನ್ನೈ ಸೂಪರ್ ಕಿಂಗ್ಸ್ ಗ್ರೂಪ್ ಬಿ ತಂಡದ ಮುಖ್ಯ ತಂಡವಾಗಿದೆ. ಗ್ರೂಪ್ ಎ ಅಲ್ಲಿ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ, ರಾಜಸ್ತಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೌ ಇದ್ದರೆ ಗ್ರೂಪ್ ಬಿ ಅಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದೆರಾಬಾದ್, ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಪಂಜಾಬ್ ಕಿಂಗ್ಸ್, ಗುಜರಾತ್ ತಂಡ ಇರಲಿದೆ. ಒಟ್ಟಾರೆ ಹೇಳುವುದಾದರೆ ಈ ಬಾರಿಯ ಐಪಿಎಲ್ ಗೆ ವಿಶ್ವಕಪ್ ಮಾದರಿ ಟಚ್ ಅಲ್ಲದೆ ಪಂದ್ಯಗಳು ಕೂಡ ಅಧಿಕವಾಗಿ ಇರಲಿದೆ.

ಹತ್ತು ತಂಡಗಳು ಈ ಬಾರಿ ಆಡಲಿದ್ದು ಪ್ರತಿ ತಂಡವು ಕೂಡ ಒಟ್ಟು ೧೪ ಪಂದ್ಯಗಳನ್ನು ಆಡಲಿದೆ. ಪ್ರತಿ ತಂಡವು ಕೂಡ ತಮ್ಮ ಗುಂಪಿನಲ್ಲಿರುವ ತಂಡದ ಜೊತೆ ಎರಡು ಬಾರಿ ಮುಖಾಮುಖಿ ಗೊಳ್ಳಲಿದೆ. ಉಳಿದ ತಂಡ ವಿರುದ್ಧ ತಲಾ ಒಂದು ಪಂದ್ಯ ಆಡಲಿದೆ. ಈ ಲೀಗ್ ಪಂದ್ಯದಲ್ಲಿ ಅತಿ ಹೆಚ್ಚು ಅಂಕ ಹಾಗು ರನ್ ರೇಟ್ ಹೊಂದಿದ ತಂಡಗಳು ಇಂದಿನ ರೀತಿ ಸೆಮಿ ಫೈನಲ್ ಹಾಗು ಫೈನಲ್ ಪಂದ್ಯಗಳನ್ನು ಆಡಲಿದೆ. ಈ ಬಾರಿ ಕೂಡ ಎಲ್ಲ ಪಂದ್ಯಗಳು ಡಿಸ್ನಿ ಹೊಟ್ಸ್ಟಾರ್ ಅಲ್ಲಿ ಪ್ರಸಾರ ಗೊಳ್ಳಲಿದೆ.

Leave A Reply

Your email address will not be published.