ಈ ಬಾರಿ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು ಸಿರಾಜ್. ವಿರಾಟ್ ಕೊಹ್ಲಿ ರನ್ ಮಷೀನ್ ಪಟ್ಟ ಇದೀಗ ಸಿರಾಜ್ ಗೆ ಸಿಕ್ಕಿದೆ.

2,397

ಇಂಡಿಯನ್ ಪ್ರೀಮಿಯರ್ ಲೀಗ್ ೨೦೨೨ ಮುಗಿಯುತ್ತ ಬಂದಿದೆ. ಈ ಬಾರಿ RCB ಕಪ್ ಗೆಲ್ಲುವ ಅವಕಾಶ ಬಹಳ ಇತ್ತು. ಆದರೆ ಈ ಅವಕಾಶ ಕೂಡ ಕಳೆದುಕೊಂಡಿದೆ RCB. ಈ ಬಾರಿಯ ತಂಡಕ್ಕಿಂತ ಒಳ್ಳೆಯ ತಂಡ ಹಿಂದೆ ಇರಲಿಲ್ಲ ಎಂದರೆ ತಪ್ಪಾಗಲಾರದು. ಘಟಾನುಘಟಿ ಬ್ಯಾಟ್ಸಮನ್ ಹಾಗು ಬೌಲರ್ ಗಳಿಂದ ಒಳಗೊಂಡಿದ್ದ RCB ತಂಡ ತನ್ನ ಇಂದಿನ ಪದ್ಧತಿ ಮುಂದುವರೆಸಿದೆ. ಅಭಿಮಾನಿಗಳಿಗೆ ನಿರಾಸೆ ಮೂಡಿಸಿ ಕ್ವಾಲಿಫೈರ್ ೨ ತನಕ ಬಂದಿದ್ದ ತಂಡ ಮರಳಿ ಮನೆ ಹಾದಿ ಹಿಡಿದಿದೆ.

RCB ಅಲ್ಲಿ ಈ ಬಾರಿ ಉತ್ತಮ ಪ್ರದರ್ಶನ ನೀಡದೆ ಇದ್ದವರಿದ್ದಾರೆ ಅದು ವಿರಾಟ್ ಕೊಹ್ಲಿ ಮಾತ್ರ. ರನ್ ಮಷೀನ್ ಅಂತಾನೆ ಕರೆಸಿಕೊಳ್ತಿದ್ದ ವಿರಾಟ್ ಕೊಹ್ಲಿ ರನ್ ಮಷೀನ್ ಹಾಳಾಗಿದೆ ಅಂತ ಕಾಣಿಸುತ್ತದೆ. ಕಳೆದ ಮೂರೂ ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಹಾಗೇನೇ ಯಾವುದೇ ಉತ್ತಮ ಪ್ರದರ್ಶನ ಕೊಹ್ಲಿ ಕಡೆಯಿಂದ ಬರಲಿಲ್ಲ. ಇದೀಗ ಇವರ ರನ್ ಮಷೀನ್ ಪಟ್ಟವನ್ನು ಕ್ರಿಕೆಟ್ ಅಭಿಮಾನಿಗಳು ತಂಡದ ಇನ್ನೊಬ್ಬ ಆಟಗಾರನಿಗೆ ನೀಡಿದ್ದಾರೆ. ಅದು ಬೇರೆ ಯಾರು ಅಲ್ಲ ಸಿರಾಜ್.

ಬೌಲರ್ ರನ್ ಮಷೀನ್ ಆಗಲು ಹೇಗೆ ಸಾಧ್ಯ ಅಂತ ಯೋಚಿಸುತ್ತಿದ್ದೀರಾ? ಸಿರಾಜ್ ಗೆ ಈ ಪಟ್ಟ ಸಿಕ್ಕಿದ್ದು ಬ್ಯಾಟ್ ಇಂದ ರನ್ ಮಾಡಿದ್ದಕ್ಕೆ ಅಲ್ಲ ಬದಲಾಗಿ ತನ್ನ ಬೌಲಿಂಗ್ ಇಂದ ಅತಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಕ್ಕೆ. ಅನೇಕ ವರ್ಷಗಳಿಂದ RCB ತಂಡದಲ್ಲಿ ಇರುವ ಸಿರಾಜ್, ಈ ಬಾರಿ ತಂಡ ಇವರನ್ನು ಬರೋಬ್ಬರಿ ೭ ಕೋಟಿ ನೀಡಿ ತಂಡಕ್ಕೆ ಮತ್ತೊಮ್ಮೆ ಖರೀದಿ ಮಾಡಿದೆ. ಆದರೆ ಈ ಬಾರಿ ಇವರ ಪ್ರದರ್ಶನ ಕೊಟ್ಟ ಹಣಕ್ಕೆ ಸರಿ ಆಗಿ ಬರಲಿಲ್ಲ. ಅದೇ ಕಾರಣಕ್ಕೆ ಅಭಿಮಾನಿಗಳು ಇವರ ಮೇಲು ಕೂಡ ನಿರಾಸೆ ಗೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ೧೫ ರಲ್ಲಿ ಆಡಿದ ಸಿರಾಜ್, ಒಟ್ಟು ೧೫ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಇವರ ಎಕಾನಮಿ ೧೦.೭ ರಲ್ಲಿದೆ, ಹಾಗೇನೇ ಕೊಟ್ಟ ರನ್ ಗಳು ಬರೋಬ್ಬರಿ ೫೧೪ ರನ್. ಆದರೆ ಪಡೆದ ವಿಕೆಟ್ ೯ ಮಾತ್ರ. ಇವರ ಈ ಪ್ರದರ್ಶನಕ್ಕೆ ಅನೇಕ ಅಭಿಮಾನಿಗಳು ಬೇಸರ ಪಟ್ಟಿದ್ದಲ್ಲದೆ ಇವರನ್ನು RCB ಸೋಲಿಗೆ ಕಾರಣ ಎಂದು ಟೀಕೆ ಕೂಡ ಮಾಡಿದ್ದಾರೆ. ಇವರ ಇನ್ಸ್ಟಾಗ್ರಾಮ್ ಅಕೌಂಟ್ ಗೆ ಹೋಗಿ ಟೀಕೆಗಳ ಸುರಿಮಳೆ ಇದೆ. ಅಲ್ಲದೆ ಈ ಆವೃತ್ತಿಯಲ್ಲಿ ಅತಿ ಹೆಚ್ಚು ಅಂದರೆ 31 ಸಿಕ್ಸ್ ಇವರು ನೀಡಿದ್ದಾರೆ. ಇದು ಕೂಡ ರೆಕಾರ್ಡ್ ಆಗಿದೆ.

Leave A Reply

Your email address will not be published.