ಈ ಸರಣಿಗಳೇ ಭಾರತಕ್ಕೆ ಮುಖ್ಯ: ಟಿ 20 ವಿಶ್ವಕಪ್ ಗು ಮುನ್ನ ಭಾರತ ಯಾವ್ಯಾವ ತಂಡಗಳ ವಿರುದ್ಧ ಸರಣಿ ಆಡಲಿದೆ ಗೊತ್ತೆ?? ವೇಳಾಪಟ್ಟಿ ಗೊತ್ತೇ??
ಭಾರತ ತಂಡವು ಈಗ ಏಷ್ಯಾಕಪ್ ಪಂದ್ಯಗಳನ್ನು ಮುಗಿಸಿದೆ, ಮೊದಲ ಎರಡು ಪಂದ್ಯಗಳಲ್ಲಿ ಚೆನ್ನಾಗಿ ಪ್ರದರ್ಶನ ನೀಡಿ ಗೆದ್ದ ಭಾರತ ತಂಡ,.ಸೂಪರ್ 4 ಹಂತದ ಎರಡು ಪಂದ್ಯಗಳನ್ನು ಸೋತು, ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿಯಾದ ಗೆಲುವು ಸಾಧಿಸಿ, ಟೂರ್ನಿಯಿಂದ ಹೊರಬಿದ್ದಿದೆ. ಟಿ20ವಿಶ್ವಕಪ್ ಶುರುವಾಗಲು ಇನ್ನು ಕೆಲವೇ ಸಮಯ ಇದ್ದು ಅದಕ್ಕಿಂತ ಮೊದಲು ಇನ್ನು ಎರಡು ಸರಣಿಗಳನ್ನು ಭಾರತ ತಂಡ ಆಡಬೇಕು. ಈ ಸರಣಿಗಳು ಸಹ ಭಾರತ ತಂಡಕ್ಕೆ ಬಹಳ ಮುಖ್ಯವಾದ ಸರಣಿ ಆಗಿದೆ. ಇದು, ಅಸ್ಟ್ರೇಲಿಯಾ ಹಾಗೂ ದಕ್ಷಿಜ ಆಫ್ರಿಕಾ ವಿರುದ್ಧದ ನಡೆಯಲಿರುವ ಸರಣಿ ಆಗಿದೆ, ಸೆಪ್ಟೆಂಬರ್ ನಲ್ಲಿ ಆಸ್ಟ್ರೇಲಿಯಾ, ಅಕ್ಟೋಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಪಂದ್ಯಗಳು ನಡೆಯಲಿದೆ.
ಸೆಪ್ಟೆಂಬರ್ 2ನೇ ವಾರದಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದ್ದು, ಮೂರು ಸರಣಿ ಪಂದ್ಯಗಳು ನಡೆಯಲಿದೆ. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಆಡಲಿದ್ದು, 3 ಟಿ20 ಹಾಗೂ ಏಕದಿನ ಪಂದ್ಯಗಳು ನಡೆಯಲಿದೆ. ಏಷ್ಯಾಕಪ್ ಸಮಯದಲ್ಲಿ 15 ಪ್ಲೇಯರ್ ಗಳ ತಂಡವನ್ನು ಮ್ಯಾನೇಜ್ಮೆಂಟ್ ಸೆಲೆಕ್ಟ್ ಮಾಡಿತ್ತು, ಆದರೆ ಈ ಸರಣಿ ಪಂದ್ಯಗಳಿಗೆ ಇನ್ನು ಆಟಗಾರರ ಆಯ್ಕೆ ಆಗಿಲ್ಲ, ಹಾಗಾಗಿ ಏಷ್ಯಾಕಪ್ ಗೆ ಸೆಲೆಕ್ಟ್ ಆಗಿದ್ದ ತಂಡವೆ ಈ ಸರಣಿ ಪಂದ್ಯಗಳಿಗೂ ಮುಂದುವರೆಯಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ.
ಟಿ20 ವಿಶ್ವಕಪ್ ಪಂದ್ಯಗಳಿಗೂ ಸಹ ಏಷ್ಯಾಕಪ್ ನಲ್ಲಿ ಆಡಿದ ಆಟಗಾರರ ನಡುವೆ ಆಯ್ಕೆ ಆಗುವುದರಿಂದ, ಇವರೇ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.
ಭಾರತ ವರ್ಸಸ್ ಆಸ್ಟ್ರೇಲಿಯಾ ಪಂದ್ಯಗಳು ಹೀಗಿದೆ..
1ನೇ ಟಿ20, ಸೆಪ್ಟೆಂಬರ್ 20, ಮೊಹಾಲಿಯಲ್ಲಿ ನಡೆಯುತ್ತದೆ.
2ನೇ ಟಿ20, ಸೆಪ್ಟೆಂಬರ್ 23, ನಾಗ್ಪುರದಲ್ಲಿ ನಡೆಯುತ್ತದೆ.
3ನೇ ಟಿ20, ಸೆಪ್ಟೆಂಬರ್ 25, ಹೈದರಾಬಾದ್ ನಲ್ಲಿ ನಡೆಯುತ್ತದೆ.
ಭಾರತ ವರ್ಸಸ್ ದಕ್ಷಿಣ ಆಫ್ರಿಕಾ ಪಂದ್ಯಗಳು ಹೀಗಿದೆ..
1ನೇ ODI, ಸೆಪ್ಟೆಂಬರ್ 28, ತಿರುವನಂತಪುರಂ ನಲ್ಲಿ ನಡೆಯುತ್ತದೆ.
2ನೇ ODI, ಅಕ್ಟೋಬರ್ 9, ರಾಂಚಿಯಲ್ಲಿ ನಡೆಯುತ್ತದೆ.
3ನೇ ODI, ಅಕ್ಟೋಬರ್ 11, ದೆಹಲಿಯಲ್ಲಿ ನಡೆಯುತ್ತದೆ.
ಏಷ್ಯಾಕಪ್ ಗೆ ಆಯ್ಕೆಯಾದ ತಂಡ :- ರೋಹಿತ್ ಶರ್ಮಾ (ಕ್ಯಾಪ್ಟನ್), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್,
ಮೀಸಲು ಆಟಗಾರರು :- ದೀಪಕ್ ಚಹರ್, ಅಕ್ಷರ್ ಪಟೇಲ್ ಮತ್ತು ಶ್ರೇಯಸ್ ಅಯ್ಯರ್.
ಆಸ್ಟ್ರೇಲಿಯಾ ಸರಣಿ ಶುರುವಾಗುವುದಕ್ಕಿಂತ ಮೊದಲು, ಸೆಪ್ಟೆಂಬರ್ 16ರಂದು ಟಿ20 ವಿಶ್ವಕಪ್ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.