ಉತ್ತಮ ಪ್ರದರ್ಶನ ನೀಡಿದರು ಕೂಡ ತಂಡದಲ್ಲಿ ಸಿಗುತ್ತಿಲ್ಲ ಕೆ ಎಲ್ ರಾಹುಲ್ ಗೆ ಸ್ಥಾನ. ಇದು ಯಾವ ತರಹದ ದುರದೃಷ್ಟ?

222

ಭಾರತದ ಟಾಪ್ ಬ್ಯಾಟ್ಸಮನ್ ಗಳ ಲಿಸ್ಟ್ ತೆಗೆದರೆ ಅದರಲ್ಲಿ ನಮ್ಮ ಕೆ ಎಲ್ ರಾಹುಲ್ ಹೆಸರು ಕೂಡ ಇರುವುದು ನಿಶ್ಚಿತ. ಆರಂಭಿಕ ಆಟಗಾರನಾಗಿ ಅನೇಕ ಪಂದ್ಯಗಳಲ್ಲಿ ಚಿತ್ರಣವನ್ನೇ ಬದಲಿಸಿದ್ದಾರೆ ನಮ್ಮ ರಾಹುಲ್. ಇವರು ಉತ್ತಮ ಬ್ಯಾಟ್ಸಮನ್ ಮಾತ್ರ ಅಲ್ಲದೆ ವಿಕೆಟ್ ಕೀಪರ್ ಕೂಡ ಹೌದು. ಹಾಗೇನೇ ಇವರು ನಾಯಕ್ತ್ವದಲ್ಲಿ ಕೂಡ ಅಷ್ಟೇ ಉತ್ತಮವಾಗಿ ನಿಭಾಯಿಸುತ್ತಾರೆ. ಇದಕ್ಕೆ ಸಾಕ್ಷಿ ಐಪಿಎಲ್ ಅಲ್ಲಿ ಪಂಜಾಬ್ ತಂಡವನ್ನು ನಾಯಕತ್ವ ವಹಿಸಿದ್ದು ಹಾಗೇನೇ ಕಳೆದ ಐಪಿಎಲ್ ಅಲ್ಲಿ ಹೊಸ ತಂಡಕ್ಕೆ ನಾಯಕನಾಗಿ ತಂಡವನ್ನು ಚೊಚ್ಚಲ ಬಾರಿಗೆ ಪ್ಲೇ ಆಫ್ ಹಂತಕ್ಕೆ ಕರೆದುಕೊಂಡು ಬಂದಿದ್ದು.

ಇವರ ಪ್ರದರ್ಶನ ಮೇಲೇನೆ ಐಪಿಎಲ್ ಮುಗಿದ ನಂತರ ಇದೀಗ ನಡೆಯುತ್ತಿರುವ ದಕ್ಷಿಣ ಆಫ್ರಿಕಾದ ಟಿ-೨೦ ಸರಣಿಗೆ ನಾಯಕನನ್ನಾಗಿ ಬಿಸಿಸಿಐ ನೇಮಕ ಮಾಡಿತ್ತು. ಆದರೆ ಪಂದ್ಯದ ಹಿಂದಿನ ದಿನನೇ ಗೌಯಾಳುವಾಗಿ ಇಡೀ ಸರಣಿ ಇಂದ ಹೊರಗೆ ಹೋಗಬೇಕಾಗಿ ಬಂತು. ಇನ್ನು ಮುಂದಿನ ಇಂಗ್ಲೆಂಡ್ ಸರಣಿಗೆ ಲಭ್ಯರಾಗುತ್ತಾರೆ ಅನ್ನುವಾಗ ಇದೀಗ ಬಿಸಿಸಿಐ ಆಯ್ಕೆ ಮಂಡಳಿ ಇನೊಂದು ಷಾಕಿಂಗ್ ಸುದ್ದಿ ನೀಡಿದೆ. ಇವರು ಇಂಗ್ಲೆಂಡ್ ಜೊತೆಗಿನ ಪಂದ್ಯದಲ್ಲೂ ಕೂಡ ಆಡುವುದು ಅನುಮಾನ. ಇದಕ್ಕೆ ಕಾರಣ ಕೆ ಎಲ್ ರಾಹುಲ್ ಇನ್ನು ಕೂಡ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಹಾಗೇನೇ ಇವರು ಯಾವಾಗ ಚೇತರಿಸಿಕೊಳ್ಳುತ್ತಾರೆ ಎನ್ನುವ ಮಾಹಿತಿ ಕೂಡ ಲಭ್ಯವಿಲ್ಲ. ಅದೇ ಕಾರಣಕ್ಕೆ ಇವರನ್ನು ಇಂಗ್ಲೆಂಡ್ ಸರಣಿಗೆ ಸೇರಿಸಿಕೊಳ್ಳಲಾಗಿಲ್ಲ ಎನ್ನುತಿದೆ ಬಿಸಿಸಿಐ.

ಇವರು ಅಂತಾರಾಷ್ಟ್ರೀಯ ತಂಡದಲ್ಲಿ ತಾವು ಉತ್ತಮ ಫಾರಂ ಅಲ್ಲಿ ಇರುವಾಗಲೇ ಆಯ್ಕೆ ಆಗಿರಲಿಲ್ಲ. ಇದರ ಬಗ್ಗೆ ಹೋದ ವರ್ಷವೇ ಒಂದು ಸಂದರ್ಶನದಲ್ಲಿ ತಾನು ಉತ್ತಮವಾಗಿ ಆಡಿದರು ಕೂಡ ಯಾಕೆ ತಂಡದಲ್ಲಿ ಆಯ್ಕೆ ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಇದೀಗ ಆಯ್ಕೆ ಆದ ಸಮಯಕ್ಕೆ ಗಾಯಾಳುವಾಗಿ ಸರಣಿಯಿಂದಲೇ ಹೊರಬಿದ್ದಿರುವುದು ಇವರ ದುರದೃಷ್ಟವೇ ಸರಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅದೇ ರೀತಿ ಮುಂದಿನ ಪಂದ್ಯಕ್ಕೂ ಗಾಯಾಳುವಿನಿಂದ ಚೇತರಿಕೆ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಇರುವುದು ರಾಹುಲ್ ಟೈಮ್ ಸರಿ ಇಲ್ಲ ಎಂದು ನಿಜವಾಗಿ ಗೊತ್ತಾಗುತ್ತಿದೆ.

Leave A Reply

Your email address will not be published.