ಎಂ ಎಸ್ ಧೋನಿ ವಿರುದ್ದದ ನಡೆ ಈ ಐಪಿಎಸ್ ಅಧಿಕಾರಿಗೆ ತಂದೊದಗಿದೆ ೧೦೦ ಕೋಟಿ ಕೊಡಲೇಬೇಕಾದ ಅವಶ್ಯಕತೆ. ಅಷ್ಟಕ್ಕೂ ಮದರಾಸ್ ಹೈ ಕೋರ್ಟ್ ನೀಡಿದ ತೀರ್ಪು ಏನು?

415

ಎಂ ಎಸ್ ಧೋನಿ ಎಂದರೆ ಎಲ್ಲರಿಗೂ ಚಿರಪರಿಚಿತ ವ್ಯಕ್ತಿ. ರೈಲ್ವೇ ಟಿಕೆಟ್ ಕಲೆಕ್ಟರ್ ಆಗಿದ್ದ ಒಬ್ಬ ಹುಡುಗ ಎಲ್ಲಾ ಎಲೆಗಳ ಮೀರಿ ಎದ್ದು ನಿಂತು ಭಾರತದ ಯಶಸ್ವಿ ನಾಯಕ ಎನಿಸಿದವರು. ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿ ಕೊಟ್ಟ ನಾಯಕ. ಇಂದು ಬಾರಿ ಚರ್ಚೆಯಲ್ಲಿದೆ ಅವರ ಮೇಲಿನ ಒಂದು ಕೇಸ್ ವಿಚಾರ ಹೌದು ಏನಿದು ವಿಷಯ ಬನ್ನಿ ತಿಳಿಯೋಣ.

2014ರಲ್ಲಿ ನಡೆದ ಐಪಿಎಲ್ ಕೂಟದಲ್ಲಿ ಧೋನಿ ಅವರು ಭಾಗಿ ಆಗಿದ್ದರು ಎಂದು ಐಪಿಎಸ್ ಅಧಿಕಾರಿ ಒಬ್ಬರು ಧೋನಿ ಮೇಲೆ ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ದಾಖಲಿಸಿದ್ದರು. ಅವರು ಮತ್ಯಾರು ಅಲ್ಲ ಐಪಿಎಸ್ ಅಧಿಕಾರಿ ಸಂಪತ್ ಜಿ ಅವರು. ಹೌದು ಆದರೆ ಇದಕ್ಕೆ ವಿರುದ್ಧವಾಗಿ ಮಹೇಂದ್ರ ಸಿಂಗ್ ಧೋನಿ ಪರ ವಕೀಲರು. ಮಹೇಂದ್ರ ಸಿಂಗ್ ಧೋನಿ ಒಬ್ಬರು ಯಶಸ್ವಿ ನಾಯಕ ಮತ್ತು ದೇಶದ ಸೇವೆಯನ್ನು ಮಾಡುವ ಸೇನೆಯ ಲೆಫ್ಟಿನೆಂಟ್ ಕರ್ನಲ್ ಕೂಡ ಹೌದು. ಅವರ ತೇಜೋವಧೆ ಮಾಡಲೆಂದು ಸಂಪತ್ ಅವರು ಕೇಸ್ ಹಾಕಿದ್ದಾರೆ ಎಂದು ದೂರಿ ಸಂಪತ್ ವಿರುದ್ಧ 100 ಕೋಟಿ ರೂಪಾಯಿಯ ಮಾನ ನಷ್ಟ ಮೊಕದ್ದಮೆ ಹೂಡಿದ್ದರು.

ಅದೇ ಕೇಸ್ ವಿಚಾರದಲ್ಲಿ ಈಗ ನಡೆದ ಬೆಳವಣಿಗೆ ಸಂಪತ್ ಅವರಿಗೆ ಬಹು ದೊಡ್ಡ ಹೊಡೆತ ಕೊಟ್ಟಿದೆ ಹೌದು. ಹೌದು ಈ ಮಾನಹಾನಿ case ಅನ್ನು ಮಾನ್ಯ ಮಾಡಬಾರದು ಎಂದು ಅವರು ಕೋರ್ಟ್ ಗೆ ಅರ್ಜಿ ಸೈಸಿದ್ದರು ಆದರೆ ಇಂದು ಮದ್ರಾಸ್ ಕೋರ್ಟ್ ಈ ವಿಚಾರವಾಗಿ ತೀರ್ಪು ನೀಡಿದ್ದು. ಸಂಪತ್ ಅವರ ಅರ್ಜಿ ವಜಾ ಮಾಡಿ ಅವರ ವಿರುದ್ಧದ ಮಾನ ಹಾನಿ ಮೊಕದ್ದಮೆಯನ್ನು ಎತ್ತಿ ಹಿಡಿದಿದೆ. ಈ ಹಿಂದೆಯೂ ಸ್ಥಳೀಯ ಕೋರ್ಟ್ ಕೂಡ ಇದೆ ತೀರ್ಪು ನೀಡಿದ್ದು. ಇದೀಗ ಅದೇ ತೀರ್ಪನ್ನು ಮತ್ತೆ ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ.

ಅದು ಏನೇ ಆಗಲಿ ಕೇವಲ ಹೆಸರು ಮಾಡಲೆಂದು ಸುಖಾ ಸುಮ್ಮನೆ ಕೇಸ್ ಹಾಕುವವರಿಗೆ ಇದೊಂದು ಪಾಠ ಆಗಬೇಕು. ಅದೆಷ್ಟೋ ಕೇಸ್ ಗಳು ಇನ್ನು ಕೂಡ ಹಾಗೆ ಇವೆ. ಅಂತಹದರಲ್ಲಿ ಕೋರ್ಟ್ ಸಮಯ ವ್ಯರ್ಥ ಮಾಡುವ ಇಂತವರಿಗೆ ಒಂದು ಒಳ್ಳೆಯ ಪಾಠ ಆಗಬೇಕು. ಇಂತಹ ಕೇಸುಗಳನ್ನು ಬಿಟ್ಟು ನಿಜವಾದ ನೊಂದವರಿಗೆ ಬೇಗ ನ್ಯಾಯ ಸಿಗುವಂತೆ ಆಗಬೇಕು. ಏನೇ ಆಗಲಿ ಒಳ್ಳೆಯ ದಾರಿಯಲ್ಲಿ ಹೋಗುವವರಿಗೆ ಇಂದಿಗೂ ಜಯ ಸಿಗಲಿದೆ.

Leave A Reply

Your email address will not be published.