ಎರಡನೇ ಪಂದ್ಯ ಗೆದ್ದ ಬಳಿಕ ಅಸಮಾಧಾನ ಹೊರಹಾಕಿದ ರೋಹಿತ್ ಶರ್ಮ: ತಪ್ಪನ್ನು ಒಪ್ಪಿಕೊಂಡು ಹೇಳಿದ್ದೇನು ಗೊತ್ತೇ??

181

ನಿನ್ನೆ ನಡೆದ ಭಾರತ ವರ್ಸಸ್ ಸೌತ್ ಆಫ್ರಿಕಾ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತು. ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಭಾರತ ಕೆ.ಎಲ್.ರಾಹುಲ್, ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್ ಅವರ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನದಿಂದ 237 ರನ್ ಕಲೆಹಾಕಲು ಸಾಧ್ಯವಾಯಿತು. ಭಾರತ ಹಿರಿಯ ಆಟಗಾರರು ಅದರಲ್ಲು ವಿರಾಟ್ ಕೋಹ್ಲಿ ಅವರು ಫಾರ್ಮ್ ನಲ್ಲಿಲ್ಲ ಎನ್ನುವುದು ಇಷ್ಟು ದಿನಗಳ ಕಾಲ ತಲೆನೋವಾಗಿತ್ತು, ಆದರೆ ಈಗ ವಿರಾಟ್ ಕೋಹ್ಲಿ ಅದ್ಭುತವಾದ ಫಾರ್ಮ್ ನಲ್ಲಿ ಬೇಗ ರನ್ ಗಳನ್ನು ಸಹ ಗಳಿಸುತ್ತಿದ್ದಾರೆ, ನಿನ್ನೆಯ ಪಂದ್ಯದಲ್ಲಿ ಕೊನೆಯವರೆಗೂ ಅಜೇಯರಾಗಿ ಉಳಿದರು ವಿರಾಟ್. ಸೂರ್ಯಕುಮಾರ್ ಯಾದವ್ ಅವರು ಬಹುಬೇಗ 61 ರನ್ ಚಚ್ಚಿದರು.

ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ಪ್ರದರ್ಶನವೇನೋ ಅದ್ಭುತವಾಗಿತ್ತು, ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ಪ್ರದರ್ಶನ ಸಹ ಆರಂಭದಲ್ಲಿ ಚೆನ್ನಾಗಿಯೇ ಇತ್ತು, ಅರ್ಷದೀಪ್ ಸಿಂಗ್ ಅವರು ಆರಂಭದಲ್ಲಿ ಎರಡು ವಿಕೆಟ್ಸ್ ಪಡೆದರು. ಆದರೆ ನಂತರದ ಓವರ್ ಗಳಲ್ಲಿ ಬೌಲಿಂಗ್ ಪ್ರದರ್ಶನ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ, ಮಿಲ್ಲರ್ ಅವರು ಶತಕ ಸಿಡಿಸಿದರೆ, ಕ್ವಿಂಟನ್ ಡಿಕಾಕ್ ಅರ್ಧಶತಕ ಗಳಿಸಿದರು. ಜೊತೆಗೆ ಮತ್ತೊಮ್ಮೆ ಡೆತ್ ಓವರ್ ನಲ್ಲಿ ಬೌಲಿಂಗ್ ಪ್ರದರ್ಶನ ಕಳಪೆಯಾಗಿದೆ. ಅರ್ಷದೀಪ್ ಸಿಂಗ್ ಅವರು 19ನೇ ಓವರ್ ನಲ್ಲಿ ಬರೋಬ್ಬರಿ 26 ರನ್ ಬಿಟ್ಟುಕೊಟ್ಟರು. ಭಾರತದ ಬ್ಯಾಟಿಂಗ್ ಲೈನಪ್ ಈಗ ಸುಧಾರಿಸಿಕೊಂಡಿದೆ, ಆದರೆ ಬೌಲಿಂಗ್ ಸಮಸ್ಯೆ ಇನ್ನು ಬಗೆಹರಿದಿಲ್ಲ. ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಸಹ ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ .

ನಿನ್ನೆ ಪಂದ್ಯ ಮುಗಿದು, ಭಾರತ ತಂಡ ಗೆದ್ದ ಬಳಿಕ ಮಾಧ್ಯಮದ ಎದುರು ಮಾತನಾಡಿದ ರೋಹಿತ್ ಶರ್ಮ ಅವರು ಬೌಲಿಂಗ್ ಬಗ್ಗೆ ಬೇಸರ ಹೊರಹಾಕಿದ್ದಾರೆ, “ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡನ್ನು ನಿರ್ದಿಷ್ಟವಾದ ರೀತಿಯಲ್ಲಿ ಆಡಬೇಕು ಎಂದು ತಂಡ ಅಂದುಕೊಂಡಿದೆ, ಅವರಿಗೆ ನಾವು ಆತ್ಮವಿಶ್ವಾಸ ಕೊಡಬೇಕು. ಕಳೆದ ಐದಾರು ಪಂದ್ಯಗಳಿಂದ ಡೆತ್ ಓವರ್ ನಲ್ಲಿ ನಮ್ಮ ಬೌಲಿಂಗ್ ಪ್ರದರ್ಶನ ಚೆನ್ನಾಗಿಲ್ಲ. ಅಪೋಸಿಟ್ ನವರಿಗೆ ನಾವು ಕೂಡ ಅದನ್ನೇ ಮಾಡುತ್ತಿದ್ದೇವೆ. ಡೆತ್ ಓವರ್ ಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ಕಷ್ಟ, ಪಂದ್ಯ ಡಿಸೈಡ್ ಆಗುವುದೇ ಡೆತ್ ಓವರ್ ನಲ್ಲಿ. ನಾವೆಲ್ಲರೂ ಇದನ್ನು ಅರ್ಥಮಾಡಿಕೊಂಡು, ಜೊತೆಯಾಗಿ ಆಟವಾಡಬೇಕು..”ಎಂದಿದ್ದಾರೆ ರೋಹಿತ್ ಶರ್ಮಾ.

Leave A Reply

Your email address will not be published.