ಎಷ್ಟೆಲ್ಲ ಮಾಡಿದರೂ ನಿಂತಿಲ್ಲ: ರವೀಂದ್ರ ಜಡೇಜಾ ವಿರುದ್ಧ ಮತ್ತೊಮ್ಮೆ ಕಿರಿಕ್ ತೆಗೆದ ಸಂಜಯ್ ಮಾಂಜ್ರೇಕರ್. ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ನಲ್ಲಿ ಬದ್ದ ವೈರಿಗಳ ತಂಡ ಮುಖಾಮುಖಿಯಾಗುವುದನ್ನು ಗಮನಿಸಿದ್ದಿರಿ. ಆದರೇ ಇದರ ಹೊರತಾಗಿ ಕೆಲವೊಮ್ಮೆ ಆಟಗಾರರ ನಡುವೆ ಸಹ ವೈಯಕ್ತಿಕ ದ್ವೇಷ ಇರುತ್ತದೆ. ಕೆಲವೊಮ್ಮೆ ವಿನಾಕಾರಣ ಪರಸ್ಪರ ಕಾಲೆಳೆದುಕೊಳ್ಳುತ್ತಿರುತ್ತಾರೆ. ಅಂತಹ ಸಾಲಿಗೆ ಸೇರಿದ ಭಾರತದ ಕ್ರಿಕೇಟಿಗರು ಎಂದರೇ ಅದು ಮಾಜಿ ಕ್ರಿಕೆಟಿಗ ಹಾಗೂ ಹಾಲಿ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಮತ್ತು ಭಾರತದ ಈಗಿನ ಆಲ್ ರೌಂಡರ್ ರವೀಂದ್ರ ಜಡೇಜಾ.
ಮಾಂಜ್ರೇಕರ್ ಗೆ ಜಡೇಜಾ ಮೇಲೆ ಕೋಪ ಯಾವ ಕಾರಣಕ್ಕೆ ಎಂಬುದು ತಿಳಿದಿಲ್ಲ. ಆದರೇ ಸಮಯ ಸಿಕ್ಕಾಗಲೆಲ್ಲಾ ರವೀಂದ್ರ ಜಡೇಜಾ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಜಡ್ಡು ಸಹ ಕೆಲವೊಮ್ಮೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಇನ್ನು ಕೆಲವೊಮ್ಮೆ ಮಾತಿನಿಂದ ಪ್ರತಿಯುತ್ತರ ನೀಡುತ್ತಿರುತ್ತಾರೆ. ಈಗ ಮಾಂಜ್ರೇಕರ್ ಮತ್ತೊಮ್ಮೆ ರವೀಂದ್ರ ಜಡೇಜಾ ಬಗ್ಗೆ ಮಾತನಾಡಿದ್ದಾರೆ.
ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡದ ಆಯ್ಕೆ ಬಗ್ಗೆ ಮಾತನಾಡಿರುವ ಸಂಜಯ್, 6 ಮತ್ತು 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ಇದ್ದಾರೆ. ಹಾಗಾಗಿ ರವೀಂದ್ರ ಜಡೇಜಾ ಹೇಳಿಕೊಳ್ಳುವಂತಹ ಫಾರ್ಮ್ ನಲ್ಲಿ ಇಲ್ಲ. ಅವರ ಬದಲಿಗೆ ಉತ್ತಮ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡುವ ಅಕ್ಷರ್ ಪಟೇಲ್ ರನ್ನು ತಂಡಕ್ಕೆ ಆಯ್ಕೆ ಮಾಡಿ ಎಂದು ಹೇಳಿದ್ದಾರೆ. ಸಂಜಯ್ ಮಾಂಜ್ರೇಕರ್ ರವರ ಈ ಹೇಳಿಕೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.