ಏಕದಿನ ಸರಣಿಯಿಂದ ಹೊರಗುಳಿದ ವಿರಾಟ್ ಕೊಹ್ಲಿ. ಈ ಪ್ರತಿಭೆ ಮೂರನೇ ಕ್ರಮಾಂಕದಲ್ಲಿ ಇಳಿಯಲ್ಲಿರುವ ಆಟಗಾರ?

458

ಭಾರತೀಯ ಕ್ರಿಕೆಟ್ ತಂಡದ ಏಕದಿನ ನಾಯಕನ ಸ್ಥಾನವನ್ನು ಬಿಸಿಸಿಐ ವಿರಾಟ್ ಕೊಹ್ಲಿ ಇಂದ ವಾಪಸ್ಸು ತೆಗೆದುಕೊಂಡು ರೋಹಿತ್ ಶರ್ಮಾ ಅವರಿಗೆ ನೀಡಿದ‌ ನಂತರ ಕೊಹ್ಲಿ ಬಿಸಿಸಿಐ ಗೆ ಸೆಡ್ಡು ಹೊಡೆದು ಯಾವುದೇ ಅಭ್ಯಾಸ ಪಂದ್ಯವಾಗಲಿ, ಏಕದಿನ ಪಂದ್ಯಕ್ಕಾಗಲಿ ಲಭ್ಯವಿಲ್ಲ ಎಂದು ಹೇಳಿದ್ದಾರೆ. ತಮ್ಮ ಅಹಂನಿಂದ ವಿರಾಟ್ ಕೊಹ್ಲಿ ಸರಣಿಯಿಂದ ಹೊರಗುಳಿದಿದ್ದು ಇತರ ಯುವ ಆಟಗಾರರಿಗೆ ಒಂದು ಉತ್ತಮ ವೇದಿಕೆ ಸಿದ್ದವಾಗುವುದರಲ್ಲಿ ಅನುಮಾನವಿಲ್ಲ. ಅಷ್ಟಕ್ಕೂ ಮೂರನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಗೆ ಬರಬಹುದು ಗೊತ್ತೆ? ಇಲ್ಲಿದೆ ಅದಕ್ಕೆ ಉತ್ತರ.

ವಿರಾಟ್ ಕೊಹ್ಲಿ ಸ್ಥಾನವನ್ನು ತಂಬಬಲ್ಲ ಆಟಗಾರನ ಹುಡುಕುತ್ತಾ ಹೋದರೆ ನಮಗೆ ಕಾಣಸಿಗುವುದು ಚೆನ್ನೈ ಸೂಪರ್ ಕಿಂಗ್ಸ್ ನ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್. ತಮ್ಮ ವೃತ್ತಿ ಜೀವನದ ಅತ್ಯುತ್ತಮ ಉನ್ನತ ಮಟ್ಟದಲ್ಲಿ ಇರುವ ಗಾಯಕ್ವಾಡ್ ಇತ್ತಿಚಿನ ಡೊಮೆಸ್ಟಿಕ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರಿಗೂ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿಸಿದ್ದಾರೆ. ದೇಶಿಯ ಕ್ರಿಕೆಟ್ ಅಲ್ಲಿ ನಾಲ್ಕು ಶತಕ ಬಾರಿಸಿ ವಿರಾಟ್ ಕೊಹ್ಲಿ, ಪೃಥ್ವಿ ಷಾ ಹಾಗು ದೇವದತ್ತ್ ಪಡಿಕ್ಕಲ್ ಅವರ ಸಾಲಿಗೆ ಸೇರಿ ತಾನು ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರಿಸಿದ್ದಾರೆ.

ರುತುರಾಜ್ ಗಾಯಕ್ವಾಡ್ ಅವರು ಯುವ ಪ್ರತಿಭೆ ಯಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಳೆದ ಐಪಿಎಲ್ ಆಡಿದ್ದು ಉತ್ತಮ ಪ್ರದರ್ಶನ ನೀಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ರುತುರಾಜ್ ಅವರನ್ನು ಉತ್ತಮವಾಗಿ ಬಳಸಿಕೊಂಡು ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೇ ೨೦೨೧ ನೇ ಐಪಿಎಲ್ ಸರಣಿಯಲ್ಲಿ ೧೬ ಪಂದ್ಯದಲ್ಲಿ ಒಟ್ಟು ೬೩೬ ರನ್ ಗಳಿಸಿ ಆರೇಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಯುವ ಆಟಗಾರ ಈಗ ಅತ್ಯುತ್ತಮ ಪಾರ್ಮ್ ಅಲ್ಲಿದ್ದು ಭಾರತೀಯ ತಂಡದಲ್ಲಿ ಸ್ಥಾನ ಪಡೆದು ಮಿಂಚಿದರೆ ಅದಕ್ಕಿಂತ ಖುಷಿ ಬೇರೊಂದಿಲ್ಲ.

Leave A Reply

Your email address will not be published.