ಐಪಿಎಲ್ ಗೆ ಹಾಜರ್: ಭಾರತಕ್ಕೆ ಚಕ್ಕರ್ ಹೊಡೆಯುತ್ತಿರುವ ಬುಮ್ರಾ: ಟೀಕೆಗಳ ನಡುವೆ ಹೇಳಿದ್ದೇನು ಗೊತ್ತೇ?? ಸಾಕು ಸುಮ್ನಿರಪ್ಪಾ ಎಂದ ಫ್ಯಾನ್ಸ್.
ಭಾರತ ತಂಡದ ವೇಗಿ ಜಸ್ಪ್ರೇತ್ ಬುಮ್ರ ಅವರು ಬೌಲಿಂಗ್ ನಲ್ಲಿ ತಂಡಕ್ಕೆ ಪ್ರಮುಖ ಅಸ್ತ್ರದ ಹಾಗೆ ಇದ್ದವರು, ಬೆನ್ನು ನೋವಿನ ಕಾರಣದಿಂದ ಏಷ್ಯಾಕಪ್ ಮತ್ತು ಸೌತ್ ಆಫ್ರಿಕಾ ಸರಣಿಯಿಂದ ದೂರ ಉಳಿದಿದ್ದ ಜಸ್ಪ್ರೀತ್ ಬುಮ್ರ ಅವರು ಇದೀಗ ಟಿ20 ವಿಶ್ವಕಪ್ ಇಂದಲೂ ದೂರ ಉಳಿಯಲಿದ್ದಾರೆ. ಶಸ್ತ್ರಚಿಕಿತ್ಸೆ ಅವಶ್ಯಕತೆ ಇಲ್ಲದಿದ್ದರೂ ಸಹ ಬುಮ್ರ ಅವರಿಗೆ 4 ರಿಂದ 6 ತಿಂಗಳು ವಿಶ್ರಾಂತಿ ಬೇಕು ಎಂದು ವೈದ್ಯರು ತಿಳಿಸಿರುವ ಕಾರಣ ಬುಮ್ರ ಅವರು ವಿಶ್ವಕಪ್ ಇಂದ ಹೊರಗುಳಿದಿದ್ದಾರೆ.
ಆದರೆ ಇದರಿಂದಾಗಿ ಬುಮ್ರ ಅವರು ತೀವ್ರವಾದ ಟೀಕೆಗೆ ಒಳಗಾಗಿದ್ದಾರೆ. ಐಪಿಎಲ್ ನಡೆಯುವಾಗ ಬುಮ್ರ ಅವರಿಗೆ ಏನು ತೊಂದರೆ ಇರುವುದಿಲ್ಲಿ, ಐಪಿಎಲ್ ನ ಎಲ್ಲಾ ಪಂದ್ಯಗಳಲ್ಲೂ ಬುಮ್ರ ಅವರು ಪಾಲ್ಗೊಳ್ಳುತ್ತಾರೆ, ಆದರೆ ಭಾರತ ತಂಡದ ಪಂದ್ಯಗಳಿದ್ದಾಗ ಹೀಗೆ ತೊಂದರೆಗಳು ಕಾಣಿಸಿಕೊಳ್ಳುತ್ತವೆ, ಬುಮ್ರ ಅವರಿಗೆ ಭಾರತ ತಂಡಕ್ಕಿಂತ ಹಣವೇ ಹೆಚ್ಚಾಗಿ ಹೋಯಿತು ಎಂದೆಲ್ಲಾ ಟೀಕೆ ಮಾಡಲಾಗಿತ್ತು, ಆದರೆ ಈಗ ಬುಮ್ರ ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ವಿಶ್ವಕಪ್ ಇಂದ ಹೊರಗುಳಿದಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಈ ಬಾರಿ ನಾನು ಟಿ20 ವಿಶ್ವಕಪ್ ನ ಭಾಗವಾಗಿ ಇರುವುದಿಲ್ಲ, ನನ್ನನ್ನು ಪ್ರೀತಿಸಿ ಶುಭಕೋರಿ, ಆಶೀರ್ವಾದ, ಪ್ರೀತಿ, ಬೆಂಬಲ ನೀಡಿದ ಎಲ್ಲರಿಗೂ ಆಭಾರಿಯಾಗಿರುತ್ತೇನೆ..ಚೇತರಿಸಿಕೊಂಡ ನಂತರ ಟೂರ್ನಿಯಲ್ಲಿ ತಂಡಕ್ಕೆ ಪ್ರೋತ್ಸಾಹ ನೀಡುತ್ತೇನೆ..ಎಂದು ಬುಮ್ರ ಅವರು ಟ್ವೀಟ್ ಮಾಡಿದ್ದು, ನೆಟ್ಟಿಗರು ಮತ್ತೊಮ್ಮೆ ಬುಮ್ರ ಅವರನ್ನು ಟೀಕೆ ಮಾಡುತ್ತಿದ್ದು, ಸಾಕಪ್ಪ ನಿಲ್ಲಿಸು, ಐಪಿಎಲ್ ಅಂದ್ರೆ ಹಾಜರ್ ಆಗ್ತೀಯಾ, ಭಾರತದ ಪಂದ್ಯಗಳು ಅಂದ್ರೆ ಚಕ್ಕರ್ ಹಾಕ್ತೀಯಾ ಎಂದು ಟ್ವೀಟ್ ಗೆ ರಿಪ್ಲೈ ಮಾಡುತ್ತಿದ್ದಾರೆ.