ಐಪಿಎಲ್ ಟ್ವೆಂಟಿ-೨೦ ಕ್ರಿಕೆಟ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ ರಶೀದ್ ಖಾನ್. ೪೫೦ ವಿಕೆಟ್ ಪಡೆದ ೩ನೆ ಆಟಗಾರ. ಮೊದಲ ಎರಡನೇ ಸ್ಥಾನ ಯಾರಿಗಿದೆ?

245

ವಯಸ್ಸಿನಲ್ಲಿ ೨೩ ಆದರೂ ಕೂಡ ಸಾಧನೆ ಅಪಾರ. ತನ್ನ ಪ್ರತಿಭೆಯಿಂದ ಇಂದು ಯಶಸ್ಸಿನ ಶಿಖರಕ್ಕೆ ಏರಿದ್ದಾರೆ ರಶೀದ್ ಖಾನ್. ತನ್ನ ದೇಶದ ಪರ ಆಡುವಾಗಲು ಪ್ರತಿಭೆಯಿಂದ ಉತ್ತಮ ಪ್ರದರ್ಶನ ತೋರಿ ಇಂದು ಅನೇಕ ಐಪಿಎಲ್ ಟೂರ್ನಮೆಂಟ್ ಗಳಲ್ಲಿ ಇವರಿಗೆ ಅತಿ ಹೆಚ್ಚು ಬೇಡಿಕೆ ಇಡಲಾಗುತ್ತಿದೆ. ಬೇರೆ ಬೇರೆ ಟಿ-೨೦ ಟೂರ್ನಮೆಂಟ್ ಕೂಡ ಆಡಿದ್ದಾರೆ ಈ ಸ್ಪಿನ್ನರ್ ರಶೀದ್ ಖಾನ್ ಆದರೆ ಐಪಿಎಲ್ ನ ೫೭ ನೇ ಪಂದ್ಯ ದಲ್ಲಿ ರಶೀದ್ ಖಾನ್ ಇತಿಹಾಸ ನಿರ್ಮಿಸಿದ್ದಾರೆ. ೪೫೦ ವಿಕೆಟ್ ಪಡೆದ ೩ ನೇ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಲೂಕ್ನೌ ವಿರುದ್ಧ ಪಂದ್ಯದಲ್ಲಿ ಗುಜರಾತ್ ಪರ ಆಡಿದ ರಶೀದ್ ಖಾನ್ ೨೪ ರನ್ ನೀಡಿ ೪ ವಿಕೆಟ್ ಪಡೆದು ಮಿಂಚಿದರಲ್ಲದೆ ೬೨ ರನ್ ಗಳ ದೊಡ್ಡ ಅಂತರದಲ್ಲಿ ಗುಜರಾತ್ ಪಂದ್ಯ ಗೆದ್ದು ಕೊಂಡಿತು. ಹಾಗೇನೇ ಗುಜರಾತ್ ಪ್ಲೇ ಆಫ್ ಹಂತಕ್ಕೆ ತಲುಪಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ಇನ್ನು ಲಕ್ನೋ ಎರಡನೇ ಸ್ಥಾನದಲ್ಲಿ ಇದ್ದರೆ ಮೂರನೇ ಸ್ಥಾನದಲ್ಲಿ ರಾಜಸ್ತಾನ್ ರಾಯಲ್ಸ್ ಇದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದ್ದರೆ ಮೂರನೇ ಹಾಗು ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ ಈ ಬಾರಿ. ಇನ್ನು ಮುಂಬೈ ಇಂಡಿಯನ್ಸ್ ಈ ಬಾರಿ ಲೀಗ್ ಇಂದ ಹೊರಬಿದ್ದಿದೆ.

ಇನ್ನು ಟ್ವೆಂಟಿ ಟ್ವೆಂಟಿ ಪಂದ್ಯಗಳಲ್ಲಿ ರಶೀದ್ ಖಾನ್ ೩ ನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದು ಮೊದಲೆರಡು ಸ್ಥಾನದಲ್ಲಿ ಯಾರಿದ್ದಾರೆ ಎನ್ನುವ ಕುತೂಹಲ ನಿಮ್ಮಲಿರಬಹುದು. ಮೊದಲ ಸ್ಥಾನದಲ್ಲಿ Dwayne ಬ್ರಾವೊ ೫೮೭ ವಿಕೆಟ್ ಪಡೆದು ಇದ್ದರೆ, ಎರಡನೇ ಸ್ಥಾನದಲ್ಲಿ ಸೌತ್ ಆಫ್ರಿಕಾದ ಇಮ್ರಾನ್ ತಾಹಿರ್ ೪೫೧ ವಿಕೆಟ್ ಪಡೆದಿದ್ದರೆ. ಮೂರನೇ ಸ್ಥಾನದಲ್ಲಿ ರಶೀದ್ ಖಾನ್ ಹಾಗು ನಾಲ್ಕನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ನ ಸುನಿಲ್ ನಾರೈನ್ ೪೩೭ ವಿಕೆಟ್ ಪಡೆದು ಇದ್ದಾರೆ. ಇನ್ನು ಈ ೪೦೦ ಕ್ಕೂ ಅಧಿಕ ವಿಕೆಟ್ ಪಡೆದವರ ಸ್ಥಾನದಲ್ಲಿ ಭಾರತದ ಯಾವುದೇ ಆಟಗಾರರು ಇಲ್ಲ.

ಗುಜರಾತ್ ಟೈಟಾನ್ಸ್ ನ ಉಪನಾಯಕನಾಗಿರುವ ರಶೀದ್ ಖಾನ್ ಪ್ಲೇ ಆಫ್ ಗೆ ತಲುಪಿದ ಸಂತಸದಲ್ಲಿದ್ದಾರೆ. ಅದೇ ರೀತಿ ಅತಿ ಹೆಚ್ಚು ವಿಕೆಟ್ ಪಡೆದ ಖುಷಿಯಲ್ಲೂ ಇದ್ದಾರೆ. ರಶೀದ್ ಖಾನ್ ಈ ಆವೃತ್ತಿಯಲ್ಲಿ ಆಡಿದ ಪಂದ್ಯಗಳಲ್ಲಿ ಉತ್ತಮವಾಗಿ ಬ್ಯಾಟ್ ಕೂಡ ಬಿಸಿದ್ದಾರೆ. ಒಂದು ಪಂದ್ಯದಲ್ಲಿ ಇವರ ಆಟದಿಂದಾದಾಗಿ ಪಂದ್ಯವನ್ನೇ ಗೆದ್ದುಕೊಟ್ಟಿದ್ದರು. ಇನ್ನು ಹೇಳಬೇಕೆಂದರೆ ಬ್ಯಾಟಿಂಗ್ ಅಲ್ಲಿ ೭೨ ರನ್ ಮಾಡಿದ್ದಾರೆ ಇನ್ನು ಬೌಲಿಂಗ್ ಅಲ್ಲಿ ೧೨ ಮ್ಯಾಚ್ ಅಲ್ಲಿ ೧೧ ವಿಕೆಟ್ ಪಡೆದಿದ್ದಾರೆ. ಇವರ ಎಕಾನಮಿ ೬.೮೪ ರಲ್ಲಿದೆ. ಇವರದ್ದು ಉತ್ತಮ ಬೌಲಿಂಗ್ ಎಂದು ಸಾಬೀತಾಗಿದೆ.

Leave A Reply

Your email address will not be published.