ಐಪಿಎಲ್ ನಲ್ಲಿ ಆಡಿ ಭಾರತಕ್ಕೆ ಕೈ ಕೊಡುತ್ತಿರುವ ಆಟಗಾರರಿಗೆ ಖಡಕ್ ಸಲಹೆ ಕೊಟ್ಟ ಕಪಿಲ್ ದೇವ್ ಹೇಳಿದ್ದೇನು ಗೊತ್ತೇ??

107

ಭಾರತ ತಂಡದ ಆಟಗಾರರು ಈ ನಡುವೆ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಒತ್ತಡದಿಂದ ಸರಿಯಾಗಿ ಆಡಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಭಾರತದ ಆಟಗಾರರಿಗೆ ಅತಿಗಾಗಿ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿರುವುದರಿಂದ ಈ ರೀತಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ, ಹೀಗೆ ಮಾನಸಿಕ ಒತ್ತಡದಿಂದ ವಿಶ್ರಾಂತಿ ಪಡೆಯಲು ಬಯಸುತ್ತಿದ್ದಾರೆ. ಇತ್ತೀಚೆಗೆ ಈ ರೀತಿಯ ಘಟನೆಗಳು ನಡೆಯುತ್ತಿವೆ. ಆಟಗಾರರು ಗಾಯಕ್ಕೆ ಒಳಗಾಗುತ್ತಿದ್ದಾರೆ, ಅದರರಿಂದಲೂ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವ ಹಾಗೆ ಆಗುತ್ತಿದೆ.

ಇತ್ತೀಚೆಗೆ ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನ ಕಾರಣದಿಂದ ವಿಶ್ವಕಪ್ ಇಂದ ಹೊರಗುಳಿದಿದ್ದಾರೆ, ಆದರೆ 2022ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಎಲ್ಲಾ ಆಟಗಳನ್ನು ಆಡಿದ್ದರು. ಇದರಿಂದಾಗಿ ಬುಮ್ರ ಅವರು ಟೀಕೆಗೆ ಒಳಗಾಗಿದ್ದಾರೆ, ಭಾರತದ ಪರವಾಗಿ ಆಡುವುದಿಲ್ಲ, ಐಪಿಎಲ್ ನಲ್ಲಿ ಏನು ಆಗುವುದಿಲ್ಲ ಎನ್ನುವ ಪ್ರಶ್ನೆ ಶುರುವಾಗಿದೆ. ಇನ್ನು ಕೆಲವು ಆಟಗಾರರು ಸಹ ಒತ್ತಡದ ಕಾರಣದಿಂದ ಫಾರ್ಮ್ ಕಳೆದುಕೊಂಡು ಕಳಪೆ ಪ್ರದರ್ಶನ ನೀಡುವ ಹಾಗೆ ಆಗಿದೆ ಎನ್ನಲಾಗಿದ್ದು, ಇದರ ಬಗ್ಗೆ ಭಾರತ ತಂಡದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ..

“ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಆಡಲೇಬೇಕು ಎನ್ನುವ ಅತಿಯಾದ ಒತ್ತಡ ಆಟಗಾರರ ಮೇಲಿದೆ ಎಂದು ನಾನು ಟಿವಿಯಲ್ಲಿ ಹೇಳುವಾಗ ಕೇಳಿದ್ದೇನೆ. ಇವುಗಳಿಗೆ ನಾನು ಕೊಡುವ ಉತ್ತರ ಒಂದೇ.. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಬೇಡಿ ಅಷ್ಟೇ. ಒಬ್ಬ ಆಟಗಾರನಿಗೆ ತಾನು ಆಡುತ್ತಿರುವ ಆಟದ ಮೇಲೆ ಪ್ರೀತಿ ಇದ್ದರೆ, ಅಲ್ಲಿ ಒತ್ತಡ ಬರುವುದೇ ಇಲ್ಲ. ಅಮೆರಿಕನ್ ಗಳ ಹಾಗೆ ಮಾನಸಿಕ ಒತ್ತಡ ಎನ್ನುತ್ತಾರೆ, ನನಗೆ ಅದು ಅರ್ಥ ಆಗುವುದಿಲ್ಲ. ನಾನು ಕ್ರಿಕೆಟ್ ಆಡುವುದು ಕ್ರೀಡೆ ಮೆಲಿರ ಪ್ರೀತಿ ಇಂದ, ಕ್ರಿಕೆಟ್ ಆಡುವುದರಲ್ಲಿ ನಾನು ಸಂತೋಷಪಡುತ್ತಿದ್ದೆ, ಅಲ್ಲಿ ಒತ್ತಡ ಇರಬಾದು..”ಎಂದಿದ್ದಾರೆ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಅವರು.

Leave A Reply

Your email address will not be published.