ಐಪಿಎಲ್ ನಲ್ಲಿ ದಿನೇಶ್ ಕಾರ್ತಿಕ್ ಬೊಂಬಾಟ್ ಆಟ, ಈ ಮೂವರು ಆಟಗಾರರಿಗೆ ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನಕ್ಕೆ ಕುತ್ತು.

239

ಇಂಡಿಯನ್ ಪ್ರೀಮಿಯರ್ ಲೀಗ್ ೨೦೨೨ ರಲ್ಲಿ ದಿನೇಶ್ ಕಾರ್ತಿಕ್ ಅವರ ಬೊಂಬಾಟ್ ಮ್ಯಾಚ್ ಫಿನಿಶಿಂಗ್ ಆಟದಿಂದಾಗಿ ಅವರಿಗೆ ಮುಂಬರುವ ದಕ್ಷಿಣ ಆಫ್ರಿಕಾ ಎದುರಿನ ಟಿ-೨೦ ಪಂದ್ಯಕ್ಕೆ ತಂಡದಲ್ಲಿ ಆಯ್ಕೆಗೊಂಡಿದ್ದಾರೆ. ಜೂನ್ ಇಂದ ಈ ಸರಣಿ ಆರಂಭವಾಗಲಿದೆ. ಭಾರತದ ೧೮ ಸದಸ್ಯರ ತಂಡದಲ್ಲಿ ದಿನೇಶ್ ಕಾರ್ತಿಕ್ ಕೂಡಾ ಒಬ್ಬರು. ಇನ್ನು ಈ ದಕ್ಷಿಣ ಆಫ್ರಿಕಾ ಸರಣಿಯ ಆಟಗಾರರ ಪ್ರದರ್ಶನ ಮುಂಬರುವ ಟಿ-೨೦ ವಿಶ್ವಕಪ್‌ ನಲ್ಲಿ ಆಯ್ಕೆಗಾರರು ಯಾವ ಆಟಗಾರರನ್ನು ಸೇರಿಸಬೇಕು ಎನ್ನುವ ನಿರ್ಧಾರಕ್ಕೆ ಮಹತ್ವ ಪಡೆದಿದೆ.

ದಿನೇಶ್ ಕಾರ್ತಿಕ್ ಅವರ‌ ಪ್ರದರ್ಶನ ಇಂದಾಗಿ ಆಯ್ಕೆಗಾರರು ಮೂರು ವರ್ಷಗಳ ಬಳಿಕ ಅಂತರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಈ ಬಾರಿ ದಿನೇಶ್ ಕಾರ್ತಿಕ್ ಅತ್ಯತ್ತಮ ಪ್ರದರ್ಶನ ನೀಡುವ ಮೂಲಕ ಫಿನಿಷರ್ ಕೆಲಸ ಉತ್ತಮವಾಗಿ ನಿಭಾಯಿಸಿದ್ದಾರೆ. ೩೭ ವರ್ಷದ ವಿಕೆಟ್ ಕೀಪರ್ ಹಾಗು ಫಿನಿಷರ್ ರೀತಿಯಲ್ಲಿ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆಯಬಹುದು. ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿದ ನಂತರ ಯುವ ಆಟಗಾರರೊಂದಿಗೆ ಪ್ಲೇಯಿಂಗ್ ೧೧ ಅಲ್ಲಿ ಕಾಣಿಸಿಕೊಳ್ಳಲಿದ್ದಾರ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಇವರ ತಂಡದಲ್ಲಿ ಆಯ್ಕೆ ಆಗುವ ಮೂಲಕ ೩ ಆಟಗಾರರಿಗೆ ಭಾರಿ ಹಿನ್ನಡೆಯಾಗಲಿದೆ.

ಸಂಜು ಸಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದ‌ ನಾಯಕ ಭಾರತೀಯ ತಂಡಕ್ಕೆ ಆಯ್ಕೆ ಆಗುವುದು ಆಗದೇ ಇರುವುದು ನಡೆಯುತ್ತಲೇ ಇದೆ. ಕಳೆದ ಶ್ರೀಲಂಕಾ ವಿರುದ್ದ ಸರಣಿಗೆ ಆಯ್ಕೆ ಆಗಿದ್ದ ಸಂಜು ಮುಂದಿನ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆ ಆಗಿಲ್ಲ. ಇದಕ್ಕೆ ಮುಖ್ಯ ದಿನೇಶ್ ಕಾರ್ತಿಕ್ ಅಂದರೆ ತಪ್ಪಾಗಲಾರದು. ಇಬ್ಬರೂ ಕೂಡಾ ವಿಕೇಟ್‌ ಕೀಪರ್ ಹಾಗು ಬ್ಯಾಟ್ಸ್‌ಮನ್. ಐಪಿಎಲ್ ಪ್ರದರ್ಶನ ನೋಡಿ ಕಾರ್ತಿಕ್ ಗೆ ಸ್ಥಾನ ಸಿಕ್ಕಿದೆ.

ಇನ್ನೊಬ್ಬ ಪ್ರತಿಭಾನ್ವಿತ ಆಟಗಾರ ಅನುಜ್ ರಾವತ್. ಆರ್ ಸಿ ಬಿ ಪರ ಆರಂಭಿಕ ಆಟಗಾರನಾಗಿ ಬಂದವರು. ಆಡಿದ ೮ ಪಂದ್ಯಗಳಲ್ಲಿ ಗಳಿಸಿದ್ದು ೧೨೯ ರನ್. ಇವರು ಉತ್ತಮ ವಿಕೆಟ್ ಕೀಪರ್ ಕೂಡಾ ಆಗಿದ್ದಾರೆ. ದೇಶೀಯ ರಣಜಿ ಕ್ರಿಕೆಟ್ ಅಲ್ಲಿ ೨೨ ವರ್ಷದ ರಾವತ್ ಮೊದಲ ಪಂದ್ಯದಲ್ಲಿ ೭೧ ರನ್ ಗಳನ್ನು ಗಳಿಸಿದ್ದಾರೆ. ಇನ್ನು ಇವರು ಯುವ ಆಟಗಾರರಾಗಿರುವುದರಿಂದ ಸದ್ಯಕ್ಕೆ ಯಾವ ತೊಂದರೆ ಆಗದೆ ಇದ್ದರೂ ಕೂಡಾ ದಿನೇಶ್ ಕಾರ್ತಿಕ್ ಅಂತರಾಷ್ಟ್ರೀಯ ತಂಡಕ್ಕೆ ಮತ್ತೊಮ್ಮೆ ಕಾಲಿಟ್ಟಿದ್ದು‌ ಇವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಲಿದೆ.

ಇನ್ನು ಮೂರನೇ ಆಟಗಾರ ಜಿತೇಶ್ ಶರ್ಮಾ. ಈ ಆವೃತ್ತಿಯ ಐಪಿಎಲ್ ಅಲ್ಲಿ ಪಂಜಾಬ್ ಪರ ಆಡಿದ ಈ ಆಟಗಾರ ದೇಶೀಯ ಕ್ರಿಕೆಟ್ ಅಲ್ಲಿ ಉತ್ತಮ ಹೆಸರು ಮಾಡಿದಾತ. ಹತ್ತು ವರ್ಷಗಳ ಕ್ರಿಕೆಟ್ ಅನುಭವ ಹೊಂದಿರುವ ಈತ ಐಪಿಎಲ್ ಅಲ್ಲಿ ವಿಕೆಟ್ ಕೀಪರ್ ಹಾಗು ಬ್ಯಾಟ್ಸ್‌ಮನ್ ಆಗಿ‌ ತಮ್ಮ ಛಾಪು ಮೂಡಿಸಿದ್ದಾರೆ. ಈ ಬಾರಿಯ ಐಪಿಎಲ್ ಅಲ್ಲಿ ಆಡಿದ ೧೨ ಪಂದ್ಯಗಳಲ್ಲಿ ೧೬೦+ ಸ್ಟ್ರೈಕ್ ರೇಟ್ ಅಲ್ಲಿ ೨೩೪ ರನ್ ಕಲೆ ಹಾಕಿದ್ದಾರೆ. ೧೨ ಸಿಕ್ಸ್ ಹಾಗು ೨೨ ಪೋರ್ ಕೂಡಾ ಹೊಡೆದಿದ್ದಾರೆ ಇವರು.

Leave A Reply

Your email address will not be published.