ಐಪಿಎಲ್ ನಲ್ಲಿ ಬೇರೆ ತಂಡಗಳಿಗೆ ಹೋಗುವ ಅವಕಾಶ ಇದ್ದರು ಕೂಡ ಹೋಗಲಿಲ್ಲ ವಿರಾಟ್ ಕೊಹ್ಲಿ. ಕೊನೆಗೂ ಭಾವುಕ ಕಾರಣ ಹೇಳಿದ ಕಿಂಗ್ ಕೊಹ್ಲಿ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸಮನ್, ಅತಿ ಹೆಚ್ಚು ಪಂದ್ಯ ಗೆಲ್ಲಿಸಿದ ನಾಯಕ ಹಾಗು ಆಟಗಾರ ವಿರಾಟ್ ಕೊಹ್ಲಿ ಎಂದರೆ ತಪ್ಪಾಗಲಾರದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾರೆ ೭೦ ಶತಕ ಗಳಿಸಿರುವ ವಿರಾಟ್ ಕೊಹ್ಲಿ ಐಪಿಎಲ್ ಅಲ್ಲೂ ೬೦೦೦ ಕ್ಕೂ ಹೆಚ್ಚು ರನ್ ಗಳಿಸಿದ ಮೊದಲಿಗ ಹಾಗೇನೇ ಐಪಿಎಲ್ ಅಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಕಳೆದ ೧೫ ವರ್ಷಗಳಿಂದ ಕೇವಲ RCB ಪರ ಆಡುತ್ತಿದ್ದಾರೆ ವಿರಾಟ್ ಕೊಹ್ಲಿ. ಬೆಂಗಳೂರು ತಂಡವನ್ನೇ ತನ್ನದು ಎಂದು ತಿಳಿದಿದ್ದರೆ ಕೊಹ್ಲಿ. ಕಳೆದ ವರ್ಷ ನಾಯಕತ್ವ ಕೂಡ ಬಿಟ್ಟಿದ್ದಾರೆ ಕೊಹ್ಲಿ.
ಐಪಿಎಲ್ ನ ಮೊದಲನೇ ಆವೃತ್ತಿಯಿಂದ ಇಲ್ಲಿಯವರೆಗೆ ವಿರಾಟ್ ಕೊಹ್ಲಿ RCB ಪರ ಮಾತ್ರ ಆಡುತ್ತಿದ್ದಾರೆ. ಬೇರೆ ಯಾವುದೇ ತಂಡಕ್ಕೂ ಸೇರಲಿಲ್ಲ. ಹೀಗಿರುವಾಗ ಎಲ್ಲರಲ್ಲೂ ಮೂಡುವ ಪ್ರಶ್ನೆ ಯಾಕೆ ವಿರಾಟ್ ಕೊಹ್ಲಿ ಬೇರೆ ತಂಡಗಳಿಗೆ ಹೋಗಲಿಲ್ಲ ಎನ್ನುವುದು. RCB ಬಿಡಬೇಕು ಅನಿಸಲಿಲ್ಲವಾ ಎಂದು ಪ್ರಶ್ನೆ ಕೇಳಿದಕ್ಕೆ ವಿರಾಟ್ ಕೊಹ್ಲಿ ಭಾವುಕ ಉತ್ತರ ನೀಡಿದ್ದಾರೆ. ೨೦೦೮ ರಿಂದ RCB ತಂಡದಲ್ಲಿ ಇದ್ದಾರೆ. ೨೦೧೧ ರಲ್ಲಿ ತಂಡದ ನಾಯಕತ್ವ ವಹಿಸಿಕೊಂಡವರು ಸತತ ೧೦ ವರ್ಷಗಳ ಕಾಲ RCB ತಂಡವನ್ನು ಮುಂದುವರೆಸಿದ್ದಾರೆ.
ತನಗೆ ಕೇಳಿದ ಪ್ರಶೆನ್ಗೆ ಉತ್ತರಿಸಿದ ವಿರಾಟ್ ಕೊಹ್ಲಿ ಒಂದು ಕ್ರೀಡೆ ಸೂಪರ್ ಸ್ಟಾರ್ ಸ್ಥಾನವನ್ನು ತಂದು ಕೊಡುವ ಕ್ರೀಡೆ ಅಂದರೆ ಅದು ಕೇವಲ ಯಶಸ್ಸು ಗಳಿಸೋದಲ್ಲ ಎಂದಿದ್ದಾರೆ. ನಾನು ಬೇರೆ ತಂಡಕ್ಕೆ ಹೋಗುವ ಬಗ್ಗೆ ಸಾಕಷ್ಟು ಬಾರಿ ಯೋಚಿಸಿದ್ದೇನೆ. ನನಗೆ ಹರಾಜಿನಲ್ಲಿ ಬರಲು ಆಫರ್ ಕೂಡ ಇತ್ತು. ಎಲ್ಲರಿಗು ಒಂದು ಸಮಯ ಇರುತ್ತದೆ. ಎಲ್ಲರು ಬರುತ್ತಾರೆ, ಆಡುತ್ತಾರೆ, ಬದುಕುತ್ತಾರೆ ಮತ್ತು ಹೋಗುತ್ತಾರೆ ಜೀವನವು ಹೀಗೇನೆ ಮುಂದುವರೆಯುತ್ತದೆ. ಅಂತವರಲ್ಲಿ ಅನೇಕ ಆಟಗಾರರು ನಮಲ್ಲಿ ಇದ್ದಾರೆ.
ಅವರು ಅನೇಕ ಟ್ರೋಫಿ ಗಳನ್ನೂ ಗೆದ್ದಿದ್ದಾರೆ. ಆದರೆ ಅವರನ್ನು ಐಪಿಎಲ್ ಚಾಂಪಿಯನ್, ಈತ ವಿಶ್ವಕಪ್ ಚಾಂಪಿಯನ್ ಎಂದು ಯಾರು ಕರೆಯುವುದಿಲ್ಲ ನೀವು ಒಳ್ಳೆಯ ವ್ಯಕ್ತಿಯಾದಾಗ ಮಾತ್ರ ನಿಮ್ಮನ್ನು ಜನರು ಪ್ರೀತಿಸುತ್ತಾರೆ, ನೆನಪಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಜನರು ನಿಮ್ಮಿಂದ ದೂರ ಹೋಗುತ್ತಾರೆ. ಇದುವೇ ಜೀವನ. ನಾನು ವೃತ್ತಿ ಜೀವನ ಪ್ರಾರಂಭಿಸುವಾಗ ಜಗತ್ತಿನ ಪ್ರಮುಖ ಆಟಗಾರರೊಂದಿಗೆ ಆಡುವ ಅವಕಾಶ ಪಡೆದುಕೊಂಡೆ. ಇದು ನನ್ನ ಜೀವನವನ್ನು ಮುಂದಿನ ಹಂತಕ್ಕೆ ಕೊಂಡೊಯಿತು. ನಾನು ನನ್ನ ಆಟವನ್ನು ಗಂಭೀರವಾಗಿ ಆಡಲು ಕಲಿಸಿತು. ಇದು ನನಗೆ ಐಪಿಎಲ್ ಕಳಿಸಿದ ಪಾಠ ಹಾಗು ಸಹಾಯ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.