ಐಪಿಎಲ್ 2022 ತಂಡದ ನಾಯಕನ ಬಗೆಗೆ ಸುಳಿವು ಕೊಟ್ಟ RCB ಫ್ರಾಂಚೈಸಿ? ಯಾರು ಮುಂದಿನ ನಾಯಕ?
ಐಪಿಎಲ್ ಎಂದರೆ ಕ್ರಿಕೆಟ್ ಅಭಿಮಾನಿಗಳಿಗೆ ಒಂಥರಾ ಹಬ್ಬ ಇದ್ದ ಹಾಗೆ. ಎಲ್ಲಾ ಕೆಲಸ ಬಿಟ್ಟು ಟಿವಿ ಮುಂದೆ ಕೂತು ಬಿಡುತ್ತಾರೆ. ಅದೆಷ್ಟೋ ಯುವ ಪ್ರತಿಭೆಗಳಿಗೆ ಮನೆ ಹಾಕಿ ರಾಷ್ಟ್ರೀಯ ತಂಡದಲ್ಲಿ ಗುರುತಿಸಿ ಕೊಳ್ಳುವಂತೆ ಮಾಡಿದ ಕೂಟ ಇದು. ಅದೆಷ್ಟೋ ದೇಶಗಳು ಇಲ್ಲಿ ಬಂದು ಒಂದು ತಂಡವಾಗಿ ಆಟ ಆಡಿ ತಮ್ಮ ಪ್ರತಿಭೆಯನ್ನು ತೋರುತ್ತಾರೆ. ಹಾಗೆಯೇ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಚರ್ಚೆಯಲ್ಲಿರುವ ತಂಡಗಳು RCB ಮತ್ತು csk . ಐಪಿಎಲ್ ಎಂದರೆ ಅದು RCB ಮತ್ತು csk ಎಂಬ ಭಾವನೆ ಬರುತ್ತದೆ. ಇದೀಗ RCB ತಂಡದ ಬಗೆಗೆ ಒಂದು ಬ್ರೇಕಿಂಗ್ ಸುದ್ದಿ ಬರುತ್ತಿದೆ.
ಕಳೆದ ಬಾರಿಯ ಐಪಿಎಲ್ ನಂತರ rcb ನಾಯಕ ವಿರಾಟ್ ಕೊಹ್ಲಿ ಒತ್ತಡದ ಕಾರಣ ನೀಡಿ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ಹೊಸ ನಾಯಕನ ಹುಡುಕಾಟದಲ್ಲಿ ಇರುವ ತಂಡ ತಮ್ಮ ಮುಂದಿನ ನಾಯಕನ ಬಗ್ಗೆ ಸುಳಿವು ನೀಡಿದೆ. 2013 ರಿಂದ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಇದುವರೆಗೂ ತಂಡದ ಪರವಾಗಿ 140 ಪಂದ್ಯಗಳಲ್ಲಿ ನಾಯಕನಾಗಿ ಆಡಿದ್ದಾರೆ ಇದರಲ್ಲಿ 66 ಪಂದ್ಯಗಳನ್ನು ಗೆದ್ದಿದ್ದಾರೆ. ಕಪ್ ಗೆಲ್ಲುವಲ್ಲಿ ವಿಫಲ ಆಗಿರುವ ಕೊಹ್ಲಿ ಬಗ್ಗೆ ಹಲವು ಟೀಕೆಗಳು ಕೂಡ ಕೇಳಿ ಬಂದಿದ್ದವು.
ಆದರೆ ಇದೀಗ ಹೊಸ ಸುದ್ದಿ ಏನೆಂದರೆ ತಂಡದ ಅಧ್ಯಕ್ಷ ಪ್ರಥಮೇಷ್ ಮಿಶ್ರಾ ಅವರು ನಾವು ಮತ್ತೊಮ್ಮೆ ಕೊಹ್ಲಿ ಅವರನ್ನೇ ನಾಯರನ್ನಾಗಿ ಮುಂದುವರೆಸುವ ಯೋಚನೆಯಲ್ಲಿ ಇದ್ದೇವೆ. ಇದಕ್ಕೆ ಕೊಹ್ಲಿ ಅವರು ಒಪ್ಪಿದರೆ ಈ ಬಾರಿಯ ಐಪಿಎಲ್ ಅಲ್ಲಿ ಕೊಹ್ಲಿ ಅವರನ್ನು ತಂಡದ ನಾಯಕರಾಗಿ ಕಾಣಬಹುದು. ಒಂದು ವೇಳೆ ಒಪ್ಪದೇ ಹೋದಲ್ಲಿ ಮುಂಬರು ಮೇಘಾ ಹರಾಜಿನಲ್ಲಿ ಸೂಕ್ತ ನಾಯನನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಅದೇನೇ ಇರಲಿ ಮುಂಬರುವ ಐಪಿಎಲ್ ನಲ್ಲಿ ಮತ್ತೊಮ್ಮೆ ಕೊಹ್ಲಿ ನಾಯರಾದರೆ RCB ಅಭಿಮಾನಿಗಳಂತೂ ಫುಲ್ ಖುಷ್ ಆಗುವುದರಲ್ಲಿ ಎರಡು ಮಾತಿಲ್ಲ.