ಒಂದು ಕೂಡಾ ಅಂತರಾಷ್ಟ್ರೀಯ ಪಂದ್ಯ ಆಡದೇ ಐಪಿಎಲ್ ನಲ್ಲಿ ಕೋಟಿಗಟ್ಟಲೆ ಬಾಚಿದ ಭಾರತದ ಐದು ಆಟಗಾರರು. ಭಾರತಕ್ಕೆ ಸಿಗಬಹುದೇ ಮುಂದಿನ ಮುಂದಿನ ಅನಿಲ್ ಕುಂಬ್ಳೆ?
ಪ್ರತಿ ವರುಷ ಹಲವಾರು ದೇಶೀಯ ಕ್ರಿಕೆಟ್ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಅವರು ಒಂದು ಕೂಡಾ ಅಂತರಾಷ್ಟ್ರೀಯ ಕ್ರಿಕೆಟ್ ಆಡಿರುವುದಿಲ್ಲ. ಆದರೂ ಅವರ ದೇಶೀಯ ಕ್ರಿಕೆಟ್ ಅಲ್ಲಿ ತೋರಿಸಿದ ಪ್ರದರ್ಶನದ ಮೇಲೆ ಅವರನ್ನು ಆಯ್ಕೆ ಮಾಡಲಾಗುತ್ತದೆ. ಅದೇ ರೀತಿ ಅಂಡರ್ ೧೯ ಆಟಗಾರರನ್ನು ಕೂಡಾ ತಂಡಗಳು ಖರೀದಿ ಮಾಡುತ್ತವೆ. ಕೆಲ ತಂಡಗಳು ಅವರಿಗೆ ದೊಡ್ಡ ಮೊತ್ತ ಕೊಟ್ಟು ಕೂಡಾ ಖರೀದಿ ಮಾಡುವುದುಂಟು. ಅಂತಹ ಆಟಗಾರರಲ್ಲಿ ಅತೀ ಹೆಚ್ಚು ಹಣ ಪಡೆದ ಈ ಐದು ಆಟಗಾರರು ಯಾರ್ಯಾರು ಗೊತ್ತೆ? ಇಲ್ಲಿದೆ ಆ ಟಾಪ್ ಐದು ಆಟಗಾರರ ಪಟ್ಟಿ.
೧. ರವಿ ಬಿಷ್ನೋಯಿ – ಇಂಡಿಯನ್ ಪ್ರೀಮಿಯರ್ ಲೀಗ್ ನ ಹಲವು ಸೀಸನ್ ಅಲ್ಲಿ ಈ ಯುವ ಆಟಗಾರ ರವಿ ಬಿಷ್ನೋಯಿ ಪಂಜಾಬ್ ಪರ ಆಡುತ್ತಿದ್ದಾರೆ. ಆದರೆ ಈ ಬಾರಿ ಇವರನ್ನು ಲಕ್ನೋ ತಂಡ ೪ ಕೋಟಿಯ ದೊಡ್ಡ ಮೊತ್ತ ಕೊಟ್ಟು ಖರೀದಿಸಿದೆ. ಅವರ ಹಿಂದಿನ ಎಲ್ಲಾ ದಾಖಲೆ ನೋಡಿ ಅವರನ್ನು ಇಷ್ಟು ದೊಡ್ಡ ಮೊತ್ತಕ್ಕೆ ಲಕ್ನೋ ಖರೀದಿಸಿದೆ.
೨. ಯಶಸ್ವಿ ಜೈಸ್ವಾಲ್- ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅಂಡರ್ -೧೯ ವಿಶ್ವಕಪ್ ಅಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರು ಒಪನರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದೇ ಕಾರಣಕ್ಕೆ ಐಪಿಎಲ್ ಅಲ್ಲಿ ರಾಜಸ್ಥಾನ ಅವರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿತ್ತು. ಈ ಬಾರಿಯೂ ಕೂಡಾ ರಾಜಸ್ಥಾನ ತಂಡಈ ಯುವ ಆಟಗಾರನಿಗೆ ೪ ಕೋಟಿಯ ದೊಡ್ಡ ಮೊತ್ತ ನೀಡಿ ತಂಡದಲ್ಲಿಯೇ ಉಳಿಸಿಕೊಂಡಿದೆ. ಇದೇ ಕಾರಣಕ್ಕೆ ಅಭಿಮಾನಿಗಳು ಕೂಡಾ ಇವರು ಈ ಬಾರಿಯ ಸೀಸನ್ ಅಲ್ಲಿ ಉತ್ತಮ ಪ್ರದರ್ಶನ ತೋರಲಿ ಎಂದು ಆಶಿಸಿದ್ದಾರೆ.
೩. ಅಬ್ದುಲ್ ಸಮಾದ್ – ಯುವ ಭಾರತೀಯ ಆಟಗಾರ ಹಾಗು ಹೊ-ಡಿ ಬಡ.ಇ ಆಟಗಾರ ಆಗಿರುವ ಸಮಾದ್ ಈ ಬಾರಿ ಸನ್ ರೈಸರ್ಸ್ ಪರ ಆಡಲಿದ್ದಾರೆ. ಈ ಸೀಸನ್ ಅಲ್ಲಿ ಹೈದರಾಬಾದ್ ಬರೋಬ್ಬರಿ ೪ ಕೋಟಿ ಹಣ ನೀಡಿ ತಮ್ಮ ತಂಡದಲ್ಲಿಯೇ ಉಳಿಸಿಕೊಂಡಿದೆ. ಆದರೆ ಅವರ ಬ್ಯಾಟ್ ಇಂದ ಇಲ್ಲಿಯವರೆಗೂ ಯಾವುದೇ ದೊಡ್ಡ ಆಟ ಬರಲಿಲ್ಲ. ೪. ಹರ್ಷದೀಪ್ ಸಿಂಗ್ – ಹರ್ಷದೀಪ್ ಸಿಂಗ್ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ. ಕಳೆದ ಸೀಸನ್‌ನಲ್ಲಿ ಹರ್ಷದೀಪ್ ಪಂಜಾಬ್ ತಂಡದ ಪರ ಉತ್ತಮ ಬೌಲಿಂಗ್ ಮಾಡಿ ಮಿಂಚಿದ್ದಾರೆ. ಅದೇ ಕಾರಣಕ್ಕೆ ಪಂಜಾಬ್ ಈ ಬಾರಿ ೪ ಕೋಟಿಯ ದೊಡ್ಡ ಮೊತ್ತ ಕೊಟ್ಟು ತಂಡದಲ್ಲಿ ಉಳಿಸಿಕೊಂಡಿದೆ.
೫. ಉಮರಾನ್ ಮಲ್ಲಿಕ್ – ಕಳೆದ ಸೀಸನ್ ಅಲ್ಲಿ ತನ್ನ ಅತ್ಯತ್ತಮ ಬೌಲಿಂಗ್ ಪ್ರದರ್ಶನ ನೀಡಿ ತಮ್ಮೆಡೆಗೆ ಎಲ್ಲರ ಗಮನ ಸೆಳೆದುಕೊಂಡಿದ್ದರು. ಕಳೆದ ಸೀಸನ್ ಅಲ್ಲಿ ಗಂಟೆಗೆ ೧೫೦ ಕೀ.ಮೀ ವೇಗದಲ್ಲಿ ಬೌಲಿಂಗ್ ನೋಡಲು ನಮಗೆ ಸಿಕ್ಕಿತ್ತು. ಇದೇ ಕಾರಣಕ್ಕೆ ಸನ್ ರೈಸರ್ಸ್ ಹೈದರಬಾದ್ ತಂಡ ಇವರಿಗೆ ಬರೋಬ್ಬರಿ ೪ ಕೋಟಿ ನೀಡಿ ತಂಡದಲ್ಲಿ ತೆಗೆದುಕೊಂಡಿದೆ.