ಕಳೆದ ಬಾರಿ ಸೂರ್ಯಕುಮಾರ್ ಯಾದವ್ ಈ ಬಾರಿ ಈ ಆಟಗಾರ ಅವಕಾಶದಿಂದ ವಂಚಿತ. ಆಯ್ಕೆಗಾರರ ವಿರುದ್ಧ ಅಸಮಾಧಾನ ಹೊರ ಹಾಕಿದ ಸೆಹ್ವಾಗ್ ಹಾಗು ಹರ್ಭಜನ್ ಸಿಂಗ್.

690

ಬಿಸಿಸಿಐ ನಿನ್ನೆ ರವಿವಾರ ಮುಂಬರುವ ದಕ್ಷಿಣ ಆಫ್ರಿಕಾ ಜೊತೆಗಿನ ಟಿ-೨೦ ಸರಣಿಗೆ ಭಾರತೀಯ ತಂಡ ಪ್ರಕಟ ಮಾಡಿದೆ. ಈ ತಂಡದಲ್ಲಿ ಒಟ್ಟು ೧೮ ಆಟಗಾರರಿಗೆ ಅವಕಾಶ ನೀಡಲಾಗಿದೆ. ಈ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಹಾಗು ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದಿನೇಶ್ ಕಾರ್ತಿಕ್ ಅನೇಕ ವರ್ಷಗಳ ನಂತರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಬಾರಿಯ ಪಂದ್ಯಕ್ಕೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಅದರ ಬದಲಿಗೆ ಕೆ ಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಬಾರಿಯ ತಂಡದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತಂಡದಲ್ಲಿ ಇಬ್ಬರು ಹೊಸ ಮುಖ ಕಾಣಿಸಿಕೊಂಡಿದ್ದಾರೆ. ಉಮ್ರಾನ್ ಮಲ್ಲಿಕ್ ಹಾಗು ಅರ್ಶದೀಪ್ ಸಿಂಗ್. ಆದರೆ ಒಬ್ಬ ಪ್ರತಿಭಾನ್ವಿತ ಆಟಗಾರನನ್ನು ತಂಡದಲ್ಲಿ ಸೇರಿಸಿಕೊಳ್ಳದೆ ಇದ್ದುದರ ಬಗ್ಗೆ ಮಾಜಿ ಆಟಗಾರರಾದ ಸೆಹ್ವಾಗ್ ಹಾಗು ಹರ್ಭಜನ್ ಸಿಂಗ್ ಆಯ್ಕೆಗಾರರಲ್ಲಿ ಬೇಸರ ತೋಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ನಡುವೆ ನಡೆಯುವ ಸರಣಿಗೆ ತಂಡ ಪ್ರಕಟಿಸಿದ ೧೦ ನಿಮಿಷಗಳಲ್ಲೇ ಹರ್ಭಜನ್ ಸಿಂಗ್ ತಮ್ಮ ನಿರಾಸೆಯನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಸನ್ ರೈಸರ್ಸ್ ಹೈದೆರಾಬಾದ್ ತಂಡದ ಪ್ರತಿಭಾನ್ವಿತ ಆಟಗಾರ ರಾಹುಲ್ ತ್ರಿಪಾಠಿ ಅವರನ್ನು ತಂಡಕ್ಕೆ ಸೇರಿಸದೆ ಇದ್ದದಕ್ಕೆ ಬೇಸರಗೊಂಡಿದ್ದಾರೆ. ಟ್ವಿಟ್ಟರ್ ಅಲ್ಲಿ ಹರ್ಭಜನ್ ಸಿಂಗ್ ಅವರು “ರಾಹುಲ್ ತ್ರಿಪಾಠಿಯವರನ್ನು ತಂಡದಲ್ಲಿ ಸೇರಿಸದೆ ಇದ್ದುದು ಬೇಸರವಾಗಿದೆ” ಎಂದು ಟ್ವೀಟ್ ಮಾಡಿ ತಮ್ಮ ಬೇಸರ ಹೊರಹಾಕಿದ್ದಾರೆ. ಇನ್ನೊಂದು ಕಡೆ ವೀರೇಂದ್ರ ಸೆಹ್ವಾಗ್ ರಾಹುಲ್ ತ್ರಿಪಾಠಿ ಅವರನ್ನು ಸೂರ್ಯಕುಮಾರ್ ಅವರಿಗಾದ ಪರಿಸ್ಥಿತಿಗೆ ಹೋಲಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಕೂಡ ಹಾಗೇನೇ ಉತ್ತಮ ಪ್ರದರ್ಶನದ ಹೊರತಾಗಿಯೂ ಕೂಡ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಲು ಪರದಾಡಿದ್ದರು.

ಆದರೆ ನಂತರ ಆಯ್ಕೆಗಾರರು ಕೊನೆಗೂ ಮನಸು ಮಾಡಿ ಅಂತಾರಾಷ್ಟ್ರೀಯ ತಂಡಕ್ಕೆ ಯಾದವ್ ಅವರನ್ನು ಸೇರಿಸಿದ್ದರು. ಅವರು ಯಾರಿಗೂ ನಿರಾಸೆ ಮಾಡಿಲ್ಲ. ಉತ್ತಮ ಪ್ರದರ್ಶನ ತೋರಿದ್ದರು. ಇದೀಗ ಅಂತಹದೇ ಪರಿಸ್ಥಿತಿ ರಾಹುಲ್ ತ್ರಿಪಾಠಿ ಗೆ ಕೂಡ ಆಗಿದೆ. ಐಪಿಎಲ್ ಅಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ತಂಡದಲ್ಲಿ ಒಂದು ಅವಕಾಶ ದೊರಕದೆ ಇರುವುದು ಅನೇಕರಲ್ಲಿ ಬೇಸರ ಮೂಡಿಸಿದೆ. ಈ ಬಾರಿಯ ಐಪಿಎಲ್ ಅಲ್ಲಿ ೧೩ ಪಂದ್ಯಗಳಲ್ಲಿ ೩೯೩ ರನ್ ಗಳಿಸಿದ್ದಾರೆ. ಇವರ ಆವರೇಜ್ ರನ್ ೩೯.೩ ರಲ್ಲಿದೆ. ಇದರಲ್ಲಿ ಮೂರೂ ಅರ್ಧ ಶತಕ ಕೂಡ ಸೇರಿದೆ. ಇವರ ಸ್ಟ್ರೈಕ್ ರೇಟ್ ೧೬೧.೭೨ ರಲ್ಲಿದೆ. ಇವರಿಗೆ ಒಂದು ಅವಕಾಶ ಕೊಡಬೇಕಿತ್ತು ಎನ್ನುವುದು ಎಲ್ಲರ ಬೇಡಿಕೆ.

Leave A Reply

Your email address will not be published.