ಕಿಂಗ್ ಕೊಹ್ಲಿಗೆ ಇನ್ನೊಂದು ಪ್ರಾಬ್ಲಮ್. ಐಪಿಎಲ್ ರನ್ ರೆಕಾರ್ಡ್ ಸರಿದೂಗಿಸಲು ಮತ್ತೊಬ್ಬ ಭಾರತದ ಬ್ಯಾಟ್ಸಮನ್ ರೆಡಿ. ಇದೆ ಆವೃತ್ತಿಯಲ್ಲಿ ಕೊಹ್ಲಿ ರೆಕಾರ್ಡ್ ಉಡೀಸ್ ಸಾಧ್ಯತೆ.

541

ಐಪಿಎಲ್ ಭಾರತದ ಟಿ-೨೦ ಮಾದರಿಯ ಕ್ರಿಕೆಟ್ ಆಟ. ದೇಶಿಯ ಕ್ರಿಕೆಟ್ ಯುವಕರು ತಮ್ಮ ಪ್ರತಿಭೆ ತೋರಿಸಲು ಇರುವಂತಹ ಉತ್ತಮ ಮಾಧ್ಯಮ. ಹಾರ್ಧಿಕ್ ಪಾಂಡ್ಯ, ಕೆ ಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ಯುಜುವೇಂದ್ರ ಚಾಹಲ್ ನಂತಹ ಹೆಸರುಗಳು ಅಂತರಾಷ್ತ್ರೀಯ ಮಟ್ಟದ ತಂಡದಲ್ಲಿ ಕೇಳಲು ಕಾರಣ ಇದುವೇ ಐಪಿಎಲ್. ಇದೀಗ ೧೫ ನೇ ಆವೃತ್ತಿಯ ಐಪಿಎಲ್ ಆಗುತ್ತಿರುವ ಸಂಧರ್ಭದಲ್ಲಿ ಎರಡು ಹೊಸ ತಂಡ ಕೂಡ ಸೇರಿಸಿ ಆಟದ ಮಜಾ ಇನ್ನು ಹೆಚ್ಚು ಗೊಳಿಸಿದ್ದಾರೆ ಬಿಸಿಸಿಐ.

ವಿರಾಟ್ ಕೊಹ್ಲಿ ಹೆಸರು ಪ್ರತಿ ಭಾರತೀಯರಲ್ಲಿ ಕೇಳಿದರು ಗೊತ್ತಿರುವಂತಹ ಅದ್ಬುತ ಪ್ರತಿಭೆ. ನಾಯಕತ್ವದಲ್ಲಿ ಸಹಿ, ಬ್ಯಾಟಿಂಗ್ ಅಲ್ಲೂ ಸಹಿ ಎಂದು ಕರೆಸಿಕೊಂಡಿರುವ ಭಾರತದ ಆಟಗಾರ. ತನ್ನ ನಾಯಕತ್ವ ಹಾಗು ಬ್ಯಾಟಿಂಗ್ ಹಾಗು ಫೀಲ್ಡಿಂಗ್ ಎಂತದ್ದು ಎಂದು ತನ್ನ ದಾಖಲೆ ಮೂಲಕ ತೋರಿಸಿದ್ದಾರೆ ವಿರಾಟ್ ಕೊಹ್ಲಿ. ಅತಿ ಹೆಚ್ಚು ರನ್, ಕೊಹ್ಲಿ ನಾಯಕತ್ವದಲ್ಲಿ ಅತಿ ಹೆಚ್ಚು ಗೆಲುವು ಹಾಗೇನೇ ಅದ್ಬುತ ಐಪಿಎಲ್ ಆಟಗಾರ ಕೂಡ ಹೌದು. ಈ ಆವೃತ್ತಿಯ ಐಪಿಎಲ್ ಅಲ್ಲಿ ಏನೋ ಕೊಹ್ಲಿ ಹೇಳಿಕೊಳ್ಳುವಂತಹ ಆಟ ಆಡುತ್ತಿಲ್ಲ ಕೊಹ್ಲಿ.

ಐಪಿಎಲ್ ಅಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ್ದರೆ ಅದು ವಿರಾಟ್ ಕೊಹ್ಲಿ. ಒಟ್ಟು ಆಡಿದ ೧೫ ಆವೃತ್ತಿಯಲ್ಲಿ ಸುಮಾರು 6402 ರನ್ ಗಳಿಸಿದ್ದಾರೆ. ಇದು ಇಲ್ಲಿಯವರೆಗಿನ ಒಬ್ಬ ಆಟಗಾರ ವಯಕ್ತಿಕವಾಗಿ ಗಳಿಸಿದ ಅತಿ ಹೆಚ್ಚು ರನ್. ಇದೀಗ ಅವರ ದಾಖಲೆ ಸರಿದೂಗಿಸಲು ಮತ್ತೊಬ್ಬ ಭಾರತದ ಆಟಗಾರನೇ ಪೈಪೋಟಿ ನೀಡುತ್ತಿದ್ದಾರೆ. ನಿನ್ನೆ ನಡೆದ ಚೆನ್ನೈ ವಿರುದ್ದದ ಪಂದ್ಯದಲ್ಲಿ ಆಕರ್ಷಕ ಅರ್ಧ ಶತಕ ದಾಖಲಿಸಿ 6000 ರನ್ ಪೂರ್ತಿ ಗೊಳಿಸಿದ್ದಾರೆ ಈ ಆಟಗಾರ.

ನಾವು ಮಾತನಾಡುತ್ತಿರುವ ಆಟಗಾರ ಬೇರೆ ಯಾರು ಅಲ್ಲ ಭಾರತದ ಗಬ್ಬರ್ ಸಿಂಗ್ ಅಂತಾನೆ ಕರೆಸಿಕೊಳ್ಳೋ ಶಿಕಾರ ಧವನ್. ೧೫ ಐಪಿಎಲ್ ಆವೃತ್ತಿಯಲ್ಲಿ ಆಡಿ ಉತ್ತಮ ರನ್ ಗಳಿಸಿರುವ ಶಿಕಾರ ಧವನ್ ವಯಕ್ತಿಕವಾಗಿ 6086 ರನ್ ಕಲೆ ಹಾಕಿದ್ದಾರೆ. ವಿರಾಟ್ ಕೊಹ್ಲಿ ಅವರಿಂದ ಕೇವಲ ೩೦೦ ರನ್ ಅಷ್ಟೇ ಅಂತರದಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಈ ಆವೃತ್ತಿಯಲ್ಲಿ ಇನ್ನು ೬ ಪಂದ್ಯಗಳು ಬಾಕಿ ಇದೆ , ಶಿಕಾರ ಧವನ್ ವಿರಾಟ್ ಕೊಹ್ಲಿ ಧಾಖಲೆ ಉಡೀಸ್ ಮಾಡಬಹುದು ಎನ್ನುತ್ತಾರೆ ಎಲ್ಲರು ಕಾರಣ ಶಿಕಾರ ಧವನ್ ಅವರು ಉತ್ತಮ ಫಾರಂ ಅಲ್ಲಿಇದ್ದಾರೆ ವಿರಾಟ್ ಕೊಹ್ಲಿ ತಮ್ಮ ಫಾರಂ ಕಳೆದುಕೊಂಡಿದ್ದಾರೆ ಹಾಗೇನೇ ಇತ್ತೀಚಿಗೆ ನಾಯಕ್ತ್ವಾ ಹೋಯಿತು, ಬ್ಯಾಟ್ ಇಂದ ರನ್ ಬರುತ್ತಿಲ್ಲ.

Leave A Reply

Your email address will not be published.