ಕಿಂಗ್ ಕೊಹ್ಲಿಯೇ ಕೆಲವರಿಗೆ ವಿಲ್ಲನ್: ಆ ಕನ್ನಡಿಗನು ಸೇರಿದಂತೆ ಟಾಪ್ 5 ಆಟಗಾರರ ಕ್ರಿಕೆಟ್ ಆಟಗಾರರ ಭವಿಷ್ಯಕ್ಕೆ ಕೊಹ್ಲಿ ಅಡ್ಡಗಾಲು ಹಾಕಿದ್ದು ಯಾಕೆ ಗೊತ್ತೇ?

197

ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡ ಕಂಡ ಯಶಸ್ವಿ ನಾಯಕ. ಆದರೇ ಅವರ ಮೇಲೆ ಕೆಲವು ಫಾರ್ಮ್ ನಲ್ಲಿ ಇದ್ದ ಆಟಗಾರರನ್ನು ಬ್ಯಾಕ್ ಮಾಡಿಕೊಂಡು ಬೆಳೆಸಲಿಲ್ಲ ಎಂಬ ಆಪಾದನೆ ಸಹ ಇದೆ. ಕೆಲವು ಕ್ರಿಕೇಟಿಗರ ಕೆರಿಯರ್ ಗೆ ಅವರು ವಿಲನ್ ಸಹ ಆದರು ಎಂದು ಹೇಳಲಾಗಿದೆ. ಬನ್ನಿ ವಿರಾಟ್ ಕೊಹ್ಲಿ ವಿಲನ್ ಆದ ಆ ಐವರು ಕ್ರಿಕೇಟಿಗರು ಯಾರು ಎಂಬುದನ್ನು ತಿಳಿಯೋಣ.

1.ಅಮಿತ್ ಮಿಶ್ರಾ – ಭಾರತ ತಂಡದ ಪ್ರತಿಭಾವಂತ ಲೆಗ್ ಸ್ಪಿನ್ನರ್ ಆಗಿದ್ದ ಅಮಿತ್ ಮಿಶ್ರಾ ಟೆಸ್ಟ್,ಏಕದಿನ,ಟಿ 20 ಕ್ರಿಕೆಟ್ ನಲ್ಲಿ ಭಾರತ ತಂಡದ ಹೆಚ್ಚು ವಿಕೆಟ್ ಪಡೆದಿದ್ದರು. ಆದರೇ ವಿರಾಟ್ ನಾಯಕರಾದ ನಂತರ ಮಿಶ್ರಾಗೆ ತಂಡದಲ್ಲಿ ಹೆಚ್ಚು ಅವಕಾಶಗಳೇ ಸಿಗಲಿಲ್ಲ. ಉತ್ತಮ ಪ್ರದರ್ಶನದ ನಡುವೆಯೂ ಮಿಶ್ರಾ ಮೂಲೆಗುಂಪಾದರು.

2.ಕರುಣ್ ನಾಯರ್ – ಕನ್ನಡಿಗ ಕರುಣ್ ನಾಯರ್ ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ತ್ರಿಶತಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದರು. ಆದರೇ ಒಂದೆರೆಡು ವೈಫಲ್ಯಗಳ ನಂತರ ಕರುಣ್ ನಾಯರ್ ಗೆ ಹೆಚ್ಚು ಅವಕಾಶವೇ ಸಿಗಲಿಲ್ಲ.ಹೀಗಾಗಿ ಕರುಣ್ ನಾಯರ್ ಬಂದಷ್ಟೇ ವೇಗದಲ್ಲಿ ರಾಷ್ಟ್ರೀಯ ತಂಡದಿಂದ ದೂರವಾದರು.

3.ಪೃಥ್ವಿ ಶಾ – ಯುವ ಆಟಗಾರ ಪೃಥ್ವಿ ಶಾ, ಭಾರತ ತಂಡದ ಆರಂಭಿಕರಾಗಿ ಪದಾರ್ಪಣೆಯ ಪಂದ್ಯದಲ್ಲಿಯೇ ಶತಕ ಗಳಿಸಿ ಗಮನಸೆಳೆದರು. ಆದರೇ ಆಸ್ಟ್ರೇಲಿಯಾದಲ್ಲಿನ ಒಂದು ಇನ್ನಿಂಗ್ಸ್ ವೈಫಲ್ಯದ ಕಾರಣ ಅವರನ್ನು ತಂಡದಿಂದ ಹೊರಹಾಕಲಾಯಿತು. ಈಗಲೂ ಸಹ ಅವರು ತಂಡಕ್ಕೆ ಕಮ್ ಬ್ಯಾಕ್ ಮಾಡಲು ಆಗುತ್ತಿಲ್ಲ.

4.ಕರ್ಣ್ ಶರ್ಮಾ – ಲೆಗ್ ಸ್ಪಿನ್ನರ್ ಕರ್ಣ್ ಶರ್ಮಾ ಭಾರತ ತಂಡದ ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೇ ಒಂದು ಇನ್ನಿಂಗ್ಸ್ ವೈಫಲ್ಯದಿಂದ ಅವರು ತಂಡದಿಂದಲೇ ಹೊರಬೀಳಬೇಕಾಯಿತು. ಈಗಲೂ ಸಹ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಅವರು ಮರಳಲು ಸಾಧ್ಯವಾಗಿಲ್ಲ.

5.ಮೋಹಿತ್ ಶರ್ಮಾ – ವೇಗದ ಬೌಲರ್ ಮೋಹಿತ್ ಶರ್ಮ ಎಂ.ಎಸ್.ಧೋನಿ ನಾಯಕರಾಗಿದ್ದ ಸಂದರ್ಭದಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿದ್ದರು.ಆದರೇ ವಿರಾಟ್ ಕೊಹ್ಲಿ ನಾಯಕರಾದ ನಂತರ ತಂಡದಿಂದ ಹೊರಬಿದ್ದರು. ಅವರು ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಸಹ ಅವರು ಭಾರತ ತಂಡಕ್ಕೆ ಆಯ್ಕೆಯಾಗಲಿಲ್ಲ.

Leave A Reply

Your email address will not be published.