ಕೇಪ್‌ಟೌನ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಪೂಜಾರ, ರಹಾನೆ. ತಮ್ಮ ಟೆಸ್ಟ್ ಕ್ರಿಕೆಟ್ ಇಲ್ಲಿಗೆ ಕೊನೆಯಾಗುತ್ತದ? ಅಂಕಿ ಅಂಶಗಳು ಏನು ಹೇಳುತ್ತಿವೆ?

403

ಭಾರತ ಹಾಗು ದಕ್ಷಿಣ ಆಫ್ರಿಕಾ ನಡುವಣ ೩ ಟೆಸ್ಟ್ ಪಂದ್ಯಗಳ ನಿರ್ಣಾಯಕ ಪಂದ್ಯ ನಡೆಯುತ್ತಿದೆ. ಇಂದು ಅಂದರೆ ಗುರುವಾರ ಟೆಸ್ಟ್ ಪಂದ್ಯದ ಮೂರನೆ ದಿನವಾಗಿದೆ. ಈ ಪಂದ್ಯ ಭಾರತ‌ ಟೆಸ್ಟ್ ತಂಡದ ಇಬ್ಬರು ದಿಗ್ಗಜ ಆಟಗಾರರ ಕೊನೆಯ ಪಂದ್ಯ ಕೂಡಾ ಆಗಿರಬಹುದು. ತಂಡ ಈ ಪಂದ್ಯದಲ್ಲಿ ಗೆಲ್ಲಲು ಬ್ಯಾಟ್ಸ್‌ಮನ್ ಗಳು ಉತ್ತಮ ಪ್ರದರ್ಶನ ನೀಡುವುದು ಬಹುಮುಖ್ಯ ಆದರೆ ಚೇತೇಶ್ವರ ಪೂಜಾರ ಹಾಗು ಅಜಿಂಕ್ಯ ರಹಾನೆ‌ ಇಬ್ಬರೂ ಈ ಪಂದ್ಯದಲ್ಲಿ ರನ್ ಗಳಿಸಲು‌ ಪರದಾಡಿದರು.

ನಿರ್ಣಾಯಕ ಪಂದ್ಯದಲ್ಲಿ ಪರದಾಡಿದ ದಿಗ್ಗಜರು.
ನಿರ್ಣಾಯಕ ಪಂದ್ಯವಾದ ಮೂರನೇ ಟೆಸ್ಟ್ ನಲ್ಲಿ ರನ್ ಗಳಿಸಲು ಪರದಾಡಿದ ಚೇತೇಶ್ವರ ಪೂಜಾರ ಹಾಗು ಅಜಿಂಕ್ಯಾ ರಹಾನೆ ತಲಾ ೯ ರನ್ ಹಾಗು ೧ ರನ್ ಗಳಿಸುವ ಮೂಲಕ ಮತ್ತೊಮ್ಮೆ ನಿರಾಶೆ‌ ಮೂಡಿಸಿದರು. ದಕ್ಷಿಣ ಆಫ್ರಿಕಾ ನೆಲದಲ್ಲಿ‌ ಟೆಸ್ಟ್ ಕ್ರಿಕೆಟ್ ಗೆಲ್ಲಲು ಬ್ಯಾಟ್ಸ್‌ಮನ್ ಗಳ ಸಹಾಯ ಬೇಕಿತ್ತು ಆದರೆ ಇತ್ತೀಚಿನ ಫಲಿತಾಂಶ ನೋಡುವಾಗ ಭಾರತ ವಿಕೆಟ್ ಉಳಿಸಿಕೊಳ್ಳಲು ಪರದಾಡುತ್ತಿದೆ. ಇದರ ನಡುವೆ ಪೂಜಾರ ಹಾಗು ರಹಾನೆ ಅವರ ಕೊನೆಯ ಟೆಸ್ಟ್ ಪಂದ್ಯ ಅಂತ ಹೇಳುತ್ತಿದ್ದಾರೆ. ಇದಕ್ಕೂ ಮೊದಲು ಇವರಿಬ್ಬರನ್ನು ತಂಡಕ್ಕೆ ಆಯ್ಜೆ ಮಾಡಿದಕ್ಕೂ ಪ್ರಶ್ನೆ ಮಾಡಲಾಗಿತ್ತು.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲ- ಕಳೆದೆರಡು ವರ್ಷಗಳಿಂದ ರಹಾನೆ ಹಾಗು ಪೂಜಾರ ಆಟಗಳು ಸಾಧಾರಣ ಮಟ್ಟದಲ್ಲಿದೆ. ಹೇಳಿಕೊಳ್ಳುವ ಯಾವುದೇ ರನ್ ಗಳಿಸಲಿಲ್ಲ. ಇದೇ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಹೇಳುವುದಾದರೆ ಇಬ್ಬರೂ ಆಟಗಾರರು ಒಟ್ಟು 6-6 ಇನ್ನಿಂಗ್ಸ್ ಆಡಿದ್ದಾರೆ. ಜೋಹಾನ್ಸ‌ಬರ್ಗ್ ನಲ್ಲಿ ನಡೆದ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್ ಅಲ್ಲಷ್ಟೇ ಇಬ್ಬರೂ ಅರ್ಧಶತಕ ಗಳಿಸಿದ್ದಾರೆ. ಉಳಿದ ಪಂದ್ಯಗಳಲ್ಲಿ ಎರಡಂಕ್ಕೆ ದಾಟುವಲ್ಲಿ ಎಡವಿದ್ದಾರೆ. ಪೂಜಾರ ಈ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ೬ ಪಂದ್ಯದಲ್ಲಿ ೨೦.೬ ರ ಸರಾಸರಿಯಲ್ಲಿ ಕೇವಲ 124 ರನ್ ಗಳಿಸಿದರೆ ಅಜಿಂಕ್ಯ ರಹಾನೆ ೬ ಇನ್ನಿಂಗ್ಸ್ ನಲ್ಲಿ ೨೨.೬ ರ ಸರಾಸರಿಯಲ್ಲಿ ಕೇವಲ 132 ರನ್ ಅಷ್ಟೇ ಗಳಿಸಿದ್ದಾರೆ.

ಯುವ ಆಟಗಾರರ ಉತ್ತಮ ಪ್ರದರ್ಶನ
ಕಳೆದ ಒಂದು ದಶಕಗಳಿಂದ ರಹಾನೆ ಹಾಗು ಪೂಜಾರ ಭಾರತೀಯ ಟೆಸ್ಟ್ ತಂಡದಲ್ಲಿ ಇದ್ದಾರೆ. ಎಲ್ಲಾ ಇನ್ನಿಂಗ್ಸ್ ಅಲ್ಲೂ ಆಡಲು ಅವಕಾಶ ಸಿಕ್ಕಿದೆ. ಆದರೆ ಕೆಲ ವರ್ಷಗಳಿಂದ ಇಬ್ಬರ ಬ್ಯಾಟ್ ನಿಂದಲೂ ರನ್ ಅಷ್ಟಾಗಿ ಬರುತ್ತಿಲ್ಲ. ಅದೇ ಬೆಂಚಲ್ಲಿ ಕುಳಿತಿರುವ ಅನೇಕ ಯುವ ಆಟಗಾರರು ದೇಶೀಯ ಕ್ರಿಕೆಟ್ ಅಲ್ಲಿ ಉತ್ತಮ ಆಟವಾಡಿ ಅವಕಾಶ ಸಿಗದೇ ಹೊರಗಿದ್ದಾರೆ. ಈ ಪೂಜಾರ ಹಾಗು ರಹಾನೆ ಅವರ ಬದಲಿಗೆ ಬಲಗೈ ಬ್ಯಾಟ್ಸ್‌ಮನ್‌ ಗಳಾದ ಸೂರ್ಯಕುಮಾರ್ ಯಾದವ್ ಹಾಗು ಶ್ರೇಯಸ್ ಐಯ್ಯರ್ ಸೂಕ್ತ ಎಂದು ಅನೇಕರು ಹೇಳುತ್ತಿದ್ದಾರೆ. ಈ ಸರಣಿಯ ರಹಾನೆ ಹಾಗು ಪೂಜಾರ ಪ್ರದರ್ಶನ ನೋಡಿದರೆ ಇದೇ ಇವರಿಬ್ಬರ ಕೊನೆಯ ಪಂದ್ಯ ಎಂದು ಅನೇಕ ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ.

Leave A Reply

Your email address will not be published.