ಕೇವಲ ಇದೊಂದು ಎಲೆಯ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟಿಕೊಳ್ಳುವುದು ಹೇಗೆ ಗೊತ್ತು??

172

ಈಗಿನ ಕಾಲದಲ್ಲಿ ಹಲವಾರು ಜನರು ಡೈಯಾಬಿಟಿಸ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ, ಇದಕ್ಕೆ ಕಾರಣ ಸರಿಯಾದ ಸಮಯಕ್ಕೆ ಆಹಾರ ಸೇವಿಸದೇ ಇರುವುದು, ಕೆಲಸ ಮಾಡುವ ಕಡೆ ಒತ್ತಡ, ಹೀಗೆ ಹಲವು ಕಾರಣಗಳಿಂದ ಡೈಯಾಬಿಟಿಸ್ ಸಮಸ್ಯೆಯಿಂದ ತೊಂದರೆ ಅನುಭವಿಸುವವರು ಸಾಕಷ್ಟು ಜನರಿದ್ದಾರೆ. ಡೈಯಾಬಿಟಿಸ್ ಇರುವವರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಹಾಗೆಯೇ ಆಹಾರ ಕ್ರಮದಲ್ಲಿ ಸಹ ಕೆಲವು ನಿಯಮಗಳ ಪಾಲನೆ ಮಾಡಬೇಕು. ಡೈಯಾಬಿಟಿಸ್ ಇರುವವರು ಸೇವಿಸುವ ಆಹಾರ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಒಂದು ಸಾರಿ ಡೈಯಾಬಿಟಿಸ್ ಬಂದರೆ ಇಡೀ ಜೀವನ ಅದನ್ನು ಸರಿದೂಗಿಸಿಕೊಂಡು ಹೋಗಬೇಕು. ಅಡದೆ ಡೈಯಾಬಿಟಿಸ್ ಅನ್ನು ನಿಯಂತ್ರಣಕ್ಕೆ ತರುವ ಒಂದು ಎಲೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.

ಡೈಯಾಬಿಟಿಸ್ ಇರುವವರಿಗೆ ಇಮ್ಯುನಿಟಿ ಕಡಿಮೆ ಆಗುತ್ತದೆ. ಡೈಯಾಬಿಟಿಸ್ ಇರುವವರಿಗೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಡೈಯಾಬಿಟಿಸ್ ಇರುವವರಿಗೆ ಎದೆನೋವು, ಪ್ಯಾಂಕ್ರಿಯಾಸ್, ಕಿಡ್ನಿ ಇನ್ನಿತರ ಅಂಗಗಳ ಮೇಲೆ ಪ್ರಭಾವ ಬೀರುತ್ತದೆ. ಡೈಯಾಬಿಟಿಸ್ ಅನ್ನು ನಿಯಂತ್ರಣದಲ್ಲಿಡಲು ಬೇ ಎಲೆಗಳು ಬಹಳ ಸಹಾಯ ಮಾಡುತ್ತದೆ. ಈ ಬೇ ಎಲೆಗಳನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ, ಈ ಎಲೆಗಳನ್ನು ಡೈಯಾಬಿಟಿಸ್ ವಿರೋಧಿ ಲಕ್ಷಣಗಳಿವೆ. ಈ ಎಲೆಗಳು ರಕ್ತದಲ್ಲಿ ಸಕ್ಕರೆ ಅಂಶ ಹಾಗೂ ಕೊಲೆಸ್ಟ್ರಾಲ್ ಅಂಶ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೇ ಎಲೆಗಳಲ್ಲಿ ಹೆಚ್ಚಾಗಿ ಹೈಪೋಗ್ಲೈಸಿಮಿಕ್ ಹಾಗೂ ಉತ್ಕರ್ಷಣ ವಿರೋಧ ಮಾಡುವ ಗುಣ ಇರುತ್ತದೆ.

ದೇಹದಲ್ಲಿ ಡೈಯಾಬಿಟಿಸ್ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಮೇದೋಜ್ಜೀರಿಕ ಗ್ರಂಥಿ ಬಲವಾಗುವ ಹಾಗೆ ಮಾಡುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚು ಮಾಡುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣ ಮಾಡುತ್ತದೆ. ಪ್ರತಿದಿನ ಬೆಳಗ್ಗೆ 3 ಬೇ ಎಲೆಗಳನ್ನು ಅಗಿದು ನುಂಗಬೇಕು. ಅಥವಾ ಎರಡು ಎಲೆಗಳನ್ನು ಬಳಸಿ ಜ್ಯುಸ್ ಮಾಡಿ ಕುಡಿಯಬಹುದು. ಡೈಯಾಬಿಟಿಸ್ ಸಮಸ್ಯೆ ಇರುವವರಿಗೆ ಪ್ರೊಟೀನ್ ಆಹಾರಗಳು, ಹಣ್ಣುಗಳು, ಫೈಬರ್, ತರಕಾರಿ, ಕಡಿಮೆ ಫ್ಯಾಟ್ ಇರುವ ಡೈರಿ ಉತ್ಪನ್ನಗಳು, ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಪ್ರತಿದಿನ ಎರಡು ಬೇ ಎಲೆಗಳನ್ನು ತಿನ್ನುವ ಅಭ್ಯಾಸ, ಡೈಯಾಬಿಟಿಸ್ ನಿಯಂತ್ರಣ ಮಾಡುವಲ್ಲಿ ಸಹಾಯ ಮಾಡುತ್ತದೆ.

Leave A Reply

Your email address will not be published.