ಕೊನೆಗೂ ಬಯಲಾಯ್ತು ಏಷ್ಯಾ ಕಪ್ ನಿಂದ ಬುಮ್ರಾ, ಹರ್ಷಲ್ ಪಟೇಲ್ ರವರನ್ನು ಹೊರಗಿಟ್ಟ ಕಾರಣ. ಏನು ಗೊತ್ತೇ??

145

ನಮಸ್ಕಾರ ಸ್ನೇಹಿತರೇ ಬಹು ಮಹತ್ವದ ಏಷ್ಯಾ ಕಪ್ ಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ.ಹದಿನೈದು ಸದಸ್ಯರ ತಂಡದಲ್ಲಿ ಅಚ್ಚರಿಯೆಂಬಂತೆ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ವೇಗದ ಬೌಲರ್ ಆವೇಶ್ ಖಾನ್ ಸ್ಥಾನ ಪಡೆದಿದ್ದಾರೆ. ಈ ನಡುವೆ ಭಾರತ ತಂಡದ ಸ್ಟಾರ್ ವೇಗಿ ಜಸಪ್ರಿತ್ ಬುಮ್ರಾ ಹಾಗೂ ಟಿ 20 ಕ್ರಿಕೆಟ್ ನಲ್ಲಿ ಕಮಾಲ್ ಮಾಡಿರುವ ವೇಗಿ ಹರ್ಷಲ್ ಪಟೇಲ್ ಗೂ ಸಹ ಸ್ಥಾನ ಸಿಕ್ಕಿಲ್ಲ.

ಇದು ಸಹಜವಾಗಿ ಕೂತುಹಲಕ್ಕೆ ಕಾರಣವಾಯಿತು. ಆದರೇ ಈಗ ಬಿಸಿಸಿಐ ಇಬ್ಬರು ಸ್ಟಾರ್ ವೇಗಿಗಳನ್ನು ಮಹತ್ವದ ಏಷ್ಯಾ ಕಪ್ ಗೆ ಬಿಟ್ಟಿರುವ ಹಿಂದಿನ ರಹಸ್ಯವನ್ನು ಬಯಲು ಮಾಡಿದೆ. ಟಿ 20 ಕ್ರಿಕೆಟ್ ನಲ್ಲಿ ವಿಶ್ವದ ಅತ್ಯಂತ ಡೇಂಜರ್ ಬೌಲರ್ ಎಂದು ಕರೆಸಿಕೊಂಡಿರುವ ಜಸಪ್ರಿತ್ ಬುಮ್ರಾ ಸದ್ಯ ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಅವರಿನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಅವರು ಏಷ್ಯಾ ಕಪ್ ಆಡಿದರೇ, ಮುಂಬರುವ ಟಿ 20 ವಿಶ್ವಕಪ್ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.

ಹೀಗಾಗಿ ಮುನ್ನೆಚ್ಚರಿಕೆ ಕಾರಣ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಗಾಯಗೊಂಡ ಹರ್ಷಲ್ ಪಟೇಲ್ ರನ್ನು ಚೇತರಿಸಿಕೊಳ್ಳುತ್ತಾರೆ ಎಂದು ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೇ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಅವರು ಸಹ ಆಯ್ಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಇಬ್ಬರೂ ಆಟಗಾರರು ಸದ್ಯ ಬೆಂಗಳೂರಿನ ಎನ್.ಸಿ.ಎ ನಲ್ಲಿ ಪುನಶ್ಚೇತನ ಶಿಬಿರದಲ್ಲಿ ಇದ್ದು, ತಮ್ಮ ಫಿಟ್ ನೆಸ್ ನತ್ತ ಗಮನ ಹರಿಸಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.