ಕೊನೆಗೂ ರೋಹಿತ್ ಮೇಲೆ ಬಂದೆ ಬಿಡ್ತು ಬಾಣ: ರೋಹಿತ್ ಶರ್ಮ ಮಾಡುತ್ತಿರುವ ತಪ್ಪೇನು ಅಂತೇ ಗೊತ್ತೇ?? ಆಕಾಶ್ ಚೋಪ್ರಾ ಹೇಳಿದ್ದೇನು ಗೊತ್ತೇ??

81

ನಿನ್ನೆ ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದೆ. ರೋಹಿತ್ ಶರ್ಮಾ ಅವರು 3-0 ಅಂತರದಲ್ಲಿ ಗೆಲ್ಲಬೇಕು ಎಂದುಕೊಂಡಿದ್ದರು. ಆದರೆ ಮೊದಲ ಪಂದ್ಯ ಸೋತು ಭಾರತ ತಂಡ ಹಿನ್ನಡೆಯಲ್ಲಿದೆ..ಮೊದಲ ಇನ್ನಿಂಗ್ಸ್ ನಲ್ಲಿ ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಅವರ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡ 208 ರನ್ ಗಳ ಗುರಿ ನೀಡಲು ಸಾಧ್ಯವಾಯಿತು. ಆದರೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಹಾಗೂ ವಿರಾಟ್ ಕೋಹ್ಲಿ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ. ಇಬ್ಬರು ಬೇಗ ಔಟ್ ಆದರು.

ರೋಹಿತ್ ಶರ್ಮಾ ಅವರು ಆರಂಭದ ಎಸೆತಗಳಲ್ಲಿಯೇ, ಬಿಗ್ ಹಿಟ್ಸ್ ಹೊಡೆಯುವ ಪ್ರಯತ್ನದಲ್ಲಿ, 11 ರನ್ ಗಳಿಸಿ ಔಟ್ ಆದರು. ವಿರಾಟ್ ಕೋಹ್ಲಿ ಅವರು ಸಹ ಇದೇ ರೀತಿ ಬೇಗ ಔಟ್ ಆದರು. ರೋಹಿತ್ ಶರ್ಮಾ ಅವರು ಈ ರೀತಿ ಆಡುತ್ತಿರುವುದು ಸರಿಯಲ್ಲ ಎಂದು ಆಕಾಶ್ ಚೋಪ್ರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ನಿನ್ನೆಯ ಪಂದ್ಯದ ಬಳಿಕ ಆಕಾಶ್ ಚೋಪ್ರಾ ಅವರು ಮಾತನಾಡಿ, “ಪಂದ್ಯದ ಶುರುವಿನಲ್ಲೇ ರೋಹಿತ್ ಶರ್ಮಾ ಅವರು ಹೆಚ್ಚು ರನ್ ಗಳಿಸುವ ಭರದಲ್ಲಿ ಬಹಳ ಬೇಗ ಔಟ್ ಆಗುತ್ತಿದ್ದಾರೆ. ರೋಹಿತ್ ಅವರು 40 ಎಸೆತಗಳನ್ನು ಎದುರಿಸಿದರೆ, 75 ರನ್ ಗಳನ್ನಾದರು ಗಳಿಸುವ ಸಾಮರ್ಥ್ಯ ಅವರಿಗೆ ಇದೆ. ಆದರೆ ರೋಹಿತ್ ಅವರು ದೀರ್ಘಕಾಲ ಕ್ರೀಸ್ ನಲ್ಲಿ ಇರದ ಹಾಗೆ ಬ್ಯಾಟ್ ಮಾಡುತ್ತಿದ್ದಾರೆ, ಇದರಿಂದ ಅವಕಾಶ ಕಳೆದುಕೊಳ್ಳುತ್ತಿದ್ದಾರೆ.

ರೋಹಿತ್ ಶರ್ಮಾ ವಿಶೇಷವಾದ ಬ್ಯಾಟ್ಸ್ಮನ್, ಕ್ರೀಸ್ ನಲ್ಲಿ ಸೆಟಲ್ ಆಗಿ ಹೆಚ್ಚಿನ ರನ್ ಗಳಿಸಲು ರೋಹಿತ್ ಅವರು ಸ್ವಲ್ಪ ಸಮಯ ತೆಗೆದುಕೊಳ್ಳಬೇಕು..” ಎಂದು ಹೇಳಿದ್ದಾರೆ ಆಕಾಶ್ ಚೋಪ್ರಾ. ಇನ್ನು ಕೆ.ಎಲ್.ರಾಹುಲ್ ಅವರ ಬಗ್ಗೆ ಮಾತನಾಡಿ, ಕೆ.ಎಲ್.ರಾಹುಲ್ ಅವರು ಎಂತಹ ಅದ್ಭುತವಾದ ಆಟಗಾರ ಎಂದು ತೋರಿಸಿದ್ದಾರೆ, ಹಾರ್ದಿಕ್ ಪಾಂಡ್ಯ ಎಂದಿನಂತೆ ಮಿಂಚಿನ ವೇಗದಲ್ಲಿ ಬ್ಯಾಟಿಂಗ್ ಮಾಡಿ ತಂಡದ ಸ್ಕೋರ್ ಹೆಚ್ಚಾಗಲು ಮುಖ್ಯ ಕಾರಣ ಆಗಿದ್ದಾರೆ ಎಂದು ಹೇಳಿದ್ದಾರೆ ಆಕಾಶ್ ಚೋಪ್ರಾ.

Leave A Reply

Your email address will not be published.