ಕೊನೆಗೂ ಹರ್ಷಲ್ ಪಟೇಲ್ ಜೊತೆಗೆ ನಡೆದ ಜಿದ್ದಾಜಿದ್ದಿನ ಕಾರಣ ತಿಳಿಸಿದ ರಿಯಾನ್ ಪರಾಗ್. ಈ ವಿವಾದದ ಪೂರಾ ವಿಷಯ ಇಲ್ಲಿದೆ.

300

ಇಂಡಿಯನ್ ಪ್ರೀಮಿಯರ್ ಲೀಗ್ ಅಲ್ಲಿ ರಿಯಾನ್ ಪರಾಗ್ ಹಾಗು ಹರ್ಷಲ್ ಪಟೇಲ್ ನಡುವಿನ ಜಗಳದ ವಿಷಯ ದೊಡ್ಡ ಸುದ್ದಿಯನ್ನೇ ಮಾಡಿತ್ತು. ಆದರೆ ಇದರ ಕಾರಣ ಯಾರಿಗೂ ಇಲ್ಲಿಯವರೆಗೆ ಗೊತ್ತಿರಲಿಲ್ಲ. ಇದೀಗ ಅದರ ಪೂರಾ ಸತ್ಯ ರಿಯಾನ್ ಪರಾಗ್ ಕುದ್ದು ಬಿಚ್ಚಿಟ್ಟಿದ್ದಾರೆ. ರಿಯಾನ್ ಪರಾಗ್ ಅವರನ್ನು ಪಂದ್ಯದ ವೇಳೆ ಪ್ರಚೋದನೆ ನೀಡಿದ್ದು RCB ಬೌಲರ್ ಸಿರಾಜ್ ಎಂದು ಇದೀಗ ತಿಳಿದು ಬರುತ್ತಿದೆ. ಹರ್ಷಲ್ ಪಟೇಲ್ ಅವರ ಬಾಲ್ ಗೆ ಬೌಂಡರಿ ಹೊಡೆದ ತಕ್ಷಣ ಕೈಯಿಂದ ಸನ್ನೆ ಮಾಡುವ ಮೂಲಕ ಹರ್ಷಲ್ ಪಟೇಲ್ ಅವರನ್ನು ಪ್ರಚೋದಿಸಿದರು.

ರಿಯಾನ್ ಪರಾಗ್ ಒಂದು ಕಡೆ ಸಂದರ್ಶನ ನೀಡುತ್ತಾ ಹರ್ಷಲ್ ಪಟೇಲ್ ಕಳೆದ ವರ್ಷ RCB ವಿರುದ್ಧ ಪಂದ್ಯದಲ್ಲಿ ನನ್ನನ್ನು ಔಟ್ ಮಾಡಿದ್ದರು. ನಾನು ಔಟ್ ಆಗಿ ಹೋಗುತ್ತಿರುವಾಗ ಹರ್ಷಲ್ ಪಟೇಲ್ ನನಗೆ ಸನ್ನೆ ಮೂಲಕ ಹೋಗುವಂತೆ ಹೇಳಿದ್ದರು. ಆ ಸಮಯದಲ್ಲಿ ನನಗೆ ಗೊತ್ತಾಗಿರಲಿಲ್ಲ, ಆದರೆ ಹೋಟೆಲ್ ತಲುಪಿದ ನಂತರ ರಿಪ್ಲೇ ನೋಡುವಾಗ ಈ ಬಗ್ಗೆ ತಿಳಿಯಿತು. ಇದು ನನ್ನ ತಲೆಯಲ್ಲಿ ಹಾಗೇನೇ ಉಳಿದಿತ್ತು. ನಾನು ಕೂಡ ಈ ಬಾರಿ ಅವರ ಕೊನೆಯ ಓವರ್ ಅಲ್ಲಿ ರನ್ ಗಳಿಸಿದಾಗ ಅದೇ ಸನ್ನೆಯನ್ನು ವಾಪಾಸ್ ಅವರಿಗೆ ಮಾಡಿದೆ.

ನಾನು ಏನು ಜಗಳ ಮಾಡಲಿಲ್ಲ, ಬಯ್ಯಲಿಲ್ಲ, ಆದರೆ ಸಿರಾಜ್ ನನ್ನನ್ನು ಕರೆದು ನೀನು ಇನ್ನು ಚಿಕ್ಕ ಹುಡುಗ, ಅದೇ ರೀತಿ ನಡೆದುಕೋ ಎಂದು ಹೇಳಿದರು. ಅದಕ್ಕೆ ಪರಾಗ್ ನಿಮಗೇನು ಹೇಳುತ್ತಿಲ್ಲ ಎಂದು ಉತ್ತರಿಸಿದರು. ಆವಾಗಲೇ ತಂಡದ ಎಲ್ಲ ಆಟಗಾರರು ಕೂಡ ಸೇರಿದರು ಆ ವಾದ ಅಲ್ಲಿಗೆ ಮುಕ್ತಾಯವಾಯಿತು ಎಂದು ಪರಾಗ್ ಹೇಳಿದ್ದಾರೆ. ಇದು ನಡೆದ ನಂತರ ಅನೇಕ ಉಹಾ ಪೋಹಗಳು ಎದ್ದಿದ್ದವು. ಇಬ್ಬರು ಕೂಡ ಜಗಳಕ್ಕೆ ಕಾರಣ ತಿಳಿಸಿರಲಿಲ್ಲ. ಇದೀಗ ರಿಯಾನ್ ಪರಾಗ್ ಅವರ ಸನ್ನೆಗೆ ಸ್ಪಷ್ಟನೆ ನೀಡುವ ಮೂಲಕ ಅಂದು ನಡೆದ ಚಿಕ್ಕ ಘಟನೆಗೆ ತೆರೆ ಎಳೆದಿದ್ದಾರೆ.

Leave A Reply

Your email address will not be published.