ಕೊನೆಯ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಭಾರೀ ಬದಲಾವಣೆ. ಹೀಗಿರಲಿದೆ ಭಾರತ ತಂಡದ 11 ಆಟಗಾರರು.
ದಕ್ಷಿಣ ಆಫ್ರಿಕಾ ಜೊತೆ ಕೊನೆಯ ಏಕದಿನ ಪಂದ್ಯ ಆಡಲಿದೆ ಭಾರತ. ಎರಡು ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ಭಾರತಕ್ಕೆ ವೈಟ್‌ವಾಶ್ ತಪ್ಪಿಸಲು ಕೊನೆಯ ಪಂದ್ಯ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಅತ್ತಕಡೆ ಭಾರತದ ವಿರುದ್ದ ೩-೦ ಮೂಲಕ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವತ್ತ ದಕ್ಷಿಣ ಆಫ್ರಿಕಾ ತಂಡ ಹುಮ್ಮಸ್ಸಿನಲ್ಲದೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಕೊನೆಯ ಏಕದಿನ ಪಂದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ. ಆದರೆ ಭಾರತ ತಂಡದಲ್ಲಿ ೩ ಬದಲಾವಣೆ ಸಾಧ್ಯತೆ ಇದೆ.
ದಕ್ಷಿಣ ಆಪ್ರಿಕಾ ವಿರುದ್ದ ಕಳೆದ ಎರಡು ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದೇ ರನ್ ನೀಡಿ ದುಬಾರಿಯಾದ ಭುವನೇಶ್ವರ್ ಕುಮಾರ್ ಅವರನ್ನು ಈ ಬಾರಿ ತಂಡದಿಂದ ಹಿರಗಿಡುವುದು ಬಹುತೇಕ ಖಚಿತವಾಗಿದೆ. ಅವರ ಬದಲಾಗಿ ಮೊಹಮ್ಮದ್ ಸಿರಾಜ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಇಷ್ಟೇ ಅಲ್ಲದೇ ಭಾರತ ತಂಡದಲ್ಲಿ ಆಡುತ್ತಿರುವ ಎರಡು ಅಯ್ಯರ್ ಗಳಿಗೂ ಈ ಪಂದ್ಯದಲ್ಲಿ ಆಡುವ ಅವಕಾಶ ಇಲ್ಲದಿರಬಹುದು. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಎರಡೂ ಪಂದ್ಯದಲ್ಲಿ ಪ್ಲಾಪ್ ಪ್ರದರ್ಶನ ನೀಡಿದ್ದರು. ಇದೇ ಅಲ್ಲದೇ ಆಲ್ ರೌಂಡರ್ ವೆಂಕಟೇಶ ಅಯ್ಯರ್ ಕೂಡಾ ಹೇಳಿಕೊಳ್ಳುವಂತಹ ಯಾವುದೇ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಶ್ರೇಯಸ್ ಐಯ್ಯರ್ ಅವರ ಬದಲಿಗೆ ಸೂರ್ಯಕುಮಾರ್ ಯಾದವ್ ಹಾಗು ವೆಂಕಟೇಶ ಐಯ್ಯರ್ ಅವರ ಸ್ಥಾನಕ್ಕೆ ಇಶಾನ್ ಕಿಶನ್ ಅಥವಾ ದೀಪಕ್ ಚಹರ್ ಕೊನೆಯ ಏಕದಿನ ತಂಡದಲ್ಲಿ ಕಾಣಿಸಿಕೊಳ್ಳುವ ಸಾದ್ಯತೆ ಇದೆ.
ಭಾರತ ತಂಡದ ಸಂಭಾವ್ಯ ಏಕದಿನ ತಂಡದಲ್ಲಿ – ಶಿಕರ್ ಧವನ್, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ವೆಂಕಟೇಶ ಐಯ್ಯರ್/ಇಶಾನ ಕಿಶನ್/ದೀಪಕ್ ಚಹರ್, ಶಾರ್ದುಲ್ ಟಾಕುರ್, ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ಯಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್ ಆಗಲಿದೆ. ಇಂದು ಅಂದರೆ ಜನವರಿ ೨೩ ರಂದು ಕೊನೆಯಏಕದಿನ ಪಂದ್ಯ ನಡೆಯಲಿದೆ. ಪ್ರಾರಂಭ ಮಧ್ಯಾಹ್ನ ೨ ಗಂಟೆಗೆ ಆಗಲಿದೆ.