ಕೊಹ್ಲಿ ಅಷ್ಟೇ ಭಾರತಕ್ಕ ಶುರುವಾಗಿದೆ ಮತ್ತಷ್ಟು ಆಟಗಾರ ಫಾರ್ಮ್ ಚಿಂತೆ: ಈ ಬಾರಿ ಟೀಕೆಗಳು ಬಂದದ್ದು ಯಾರ ವಿರುದ್ಧ ಗೊತ್ತೇ?
ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡದ ಆಯ್ಕೆಯ ಬಗ್ಗೆ ಈಗ ಹೆಚ್ಚು ಚರ್ಚೆ ನಡೆಯುತ್ತಿದೆ. ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ನಲ್ಲಿ ನಾಲ್ಕು ದಿನಗಳ ಕಾಲ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಭಾರತ ನಾಲ್ಕನೇ ದಿನದ ಕೊನೆಯಾರ್ಧ ಹಾಗೂ ಐದನೇ ದಿನ ಸಂಪೂರ್ಣವಾಗಿ ಇಂಗ್ಲೆಂಡ್ ತಂಡಕ್ಕೆ ಶರಣಾಯಿತು. ಈ ಸೋಲಿನ ಬಗ್ಗೆ ಹಲವಾರು ಪರಾಮರ್ಶೆಗಳು ನಡೆದವು. ಎಲ್ಲರೂ ಸೋಲಿಗೆ ವಿರಾಟ್ ಕೊಹ್ಲಿಯವರ ಕಳಪೆ ಫಾರ್ಮ್ ಕಾರಣ ಎಂದು ಹೇಳಿದ್ದರು.
ಆದರೇ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟ್ ಆಟಗಾರ ಕರ್ಸನ್ ಘಾವ್ರಿ ಈಗ ಈ ಬಗ್ಗೆ ಮಾತನಾಡಿದ್ದು ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಬಗ್ಗೆ ಮಾತ್ರ ಏಕೆ ಪ್ರಶ್ನಿಸುತ್ತಿದ್ದಿರಿ ಉಳಿದ ಆಟಗಾರರ ಫಾರ್ಮ್ ಬಗ್ಗೆ ಏಕೆ ಪ್ರಶ್ನಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆದಿದ್ದ ಆರಂಭಿಕ ಆಟಗಾರ ಶುಭಮಾನ್ ಗಿಲ್, ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಹನುಮ ವಿಹಾರಿ, ವೇಗದ ಬೌಲಿಂಗ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಸಹ ವಿಫಲರಾಗಿದ್ದರು.
ಅವರ ಪ್ರದರ್ಶನದಲ್ಲಿ ಸ್ಥಿರತೆ ಇಲ್ಲ. ಒಂದು ಪಂದ್ಯದಲ್ಲಿ ಪ್ರದರ್ಶನ ನೀಡಿದರೇ, ಹತ್ತು ಪಂದ್ಯಗಳಲ್ಲಿ ಪ್ರದರ್ಶನ ನೀಡುತ್ತಿಲ್ಲ. ತಂಡದ ಅಂತಿಮ ಹನ್ನೊಂದರಲ್ಲಿ ಇಂತಹ ಆಟಗಾರರನ್ನು ಇಟ್ಟುಕೊಂಡು ನೀವು ಹೇಗೆ ಪಂದ್ಯ ಗೆಲ್ಲುತ್ತಿರಿ ಎಂದು ಪ್ರಶ್ನಿಸಿದ್ದಾರೆ. ಕೇವಲ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಬಗ್ಗೆ ಏಕೆ ಪ್ರಶ್ನಿಸುತ್ತಿದ್ದಿರಿ, ಉಳಿದ ಆಟಗಾರರ ಕಳಪೆ ಫಾರ್ಮ್ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ