ಕೊಹ್ಲಿ ಶತಕ ಗಳಿಸಿದ ಇನ್ನಿಂಗ್ಸ್ ಮುಗಿಯುತ್ತಿದ್ದಂತೆ ಮೈದಾನಕ್ಕೆ ಬಂದ ರೋಹಿತ್ ಮಾಡಿದ್ದೇನು ಗೊತ್ತೆ?? ವೈರಲ್ ಆಯಿತು ವಿಡಿಯೋ.

149

ಈವರೆಗೂ ಕಿಂಗ್ ಕೋಹ್ಲಿ ಅವರು ಮಾಡಿರುವ ದಾಖಲೆ ಒಂದೆರಡಲ್ಲ, ವಿರಾಟ್ ಕೋಹ್ಲಿ ಅವರು ಕಳೆದ ಮೂರು ವರ್ಷಗಳಿಂದ ಕಳಪೆ ಫಾರ್ಮ್ ನಲ್ಲಿದ್ದರು, ಆ ಸಮಯದಲ್ಲಿ ಅವರನ್ನು ಟೀಕೆ ಮಾಡಿದವರೆ ಹೆಚ್ಚು, ಆದರೆ ಈಗ ಕಿಂಗ್ ಕೋಹ್ಲಿ ಅವರು ತಮ್ಮ ಕಳಪೆ ಫಾರ್ಮ್ ಇಂದ ಹೊರಬಂದು, ನಿನ್ನೆಯ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭರ್ಜರಿಯಾಗಿ ಶತಕ ಸಿಡಿಸಿದ್ದಾರೆ. 1021 ದಿನಗಳ ಬಳಿಕ ವಿರಾಟ್ ಕೋಹ್ಲಿ ಅವರ ಬ್ಯಾಟ್ ಇಂದ 122 ರನ್ ಗಳು ಬಂದದ್ದು, ಮೈದಾನದಲ್ಲಿ ಸ್ವತಃ ವಿರಾಟ್ ಕೋಹ್ಲಿ ಅವರಿಗೆ ಬಹಳ ಸಂತೋಷವಾಯಿತು.

ನಿನ್ನೆಯ ದಿನವನ್ನು ಕ್ರಿಕೆಟ್ ಹಾಗೂ ವಿರಾಟ್ ಅವರ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಓಪನಿಂಗ್ ಬ್ಯಾಟ್ಸ್ಮನ್ ಆಗಿ ಕಣಕ್ಕೆ ಇಳಿದರು, ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದರು ಕೋಹ್ಲಿ, ಸೆಟ್ ಆದ ಬಳಿಕ, ರನ್ ಗಳು ಸರಾಗವಾಗಿ ಬರಲು ಶುರುವಾದವು, 12 ಬೌಂಡರಿ, 6 ಸಿಕ್ಸರ್ ಗಳೊಂದಿಗೆ ಕೋಹ್ಲಿ ಅವರು 61 ಬಾಲ್ ಗಳಲ್ಲಿ 122 ರನ್ ಗಳನ್ನು ಚಚ್ಚಿದರು, ಕೋಹ್ಲಿ ಅವರನ್ನು ಈ ಫಾರ್ಮ್ ನಲ್ಲಿ ನೋಡುವುದಕ್ಕಿಂತ ಮತ್ತೊಂದು ಸಂತೋಷ ಅವರ ಅಭಿಮಾನಿಗಳಿಗೆ ಇಲ್ಲ.

ನಿನ್ನೆಯ ಇನ್ನಿಂಗ್ಸ್ ಮುಗಿಸಿ ಕೋಹ್ಲಿ ಅವರು ಪೆವಿಲಿಯನ್ ಕಡೆಗೆ ಬರುವಾಗ, ಭಾರತ ತಂಡದ ಎಲ್ಲಾ ಆಟಗಾರರು ಬಂದು ಕೋಹ್ಲಿ ಅವರಿಗೆ ವಿಶ್ ಮಾಡಿ ಸಂತೋಷ ವ್ಯಕ್ತಪಡಿಸಿದರು. ಅದರಲ್ಲೂ ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಕೋಹ್ಲಿ ಅವರನ್ನು ಕಂಡ ಕೂಡಲೇ ಸಂತೋಷದಿಂದ ನಗುತ್ತಾ, ಬಂದು, ಹ್ಯಾಂಡ್ ಶೇಕ್ ಮಾಡಿ, ಕೋಹ್ಲಿ ಅವರನ್ನು ಅಪ್ಪಿಕೊಂಡು, ವಿಶ್ ಮಾಡಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೋಹಿತ್ ಹಾಗೂ ಕೋಹ್ಲಿ ಅವರ ಈ ವಿಡಿಯೋವನ್ನು ನೀವು ಸಹ ನೋಡಿ..

Leave A Reply

Your email address will not be published.