ಕೊಹ್ಲಿ ಹಾಗೂ ರೋಹಿತ್ ಅಲ್ಲ, ಭಾರತದ ಆ ಒಬ್ಬ ಬ್ಯಾಟ್ಸಮನ್ ಹೆಸರು ಕೇಳಿದರೆ ಬೆಚ್ಚು ಬೀಳುತ್ತಿರುವ ಪಾಕ್ ತಂಡ: ವಾಸಿಂ ಅಕ್ರಮ್ ಹೇಳಿದ್ದು ಯಾರ ಬಗ್ಗೆ ಗೊತ್ತೇ??

78

ಏಷ್ಯಾಕಪ್ ಟೂರ್ನಿ ಪಂದ್ಯಗಳು ಇಂದು ಶುರುವಾಗಲಿದೆ. ಮೊದಲ ಪಂದ್ಯ ಶ್ರೀಲಂಕಾ ಮತ್ತು ಅಫ್ಗಾನಿಸ್ತಾನ್ ತಂಡಗಳ ನಡುವೆ ನಡೆಯಲಿದ್ದು, ಭಾರತದ ಮೊದಲ ಪಂದ್ಯ ನಾಳೆ ಆಗಸ್ಟ್ 28ರಂದು ಪಾಕಿಸ್ತಾನದ ವಿರುದ್ಧ ನಡೆಯಲಿದೆ. ಯುಎಇ ನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಮೆಗಾ ಪಂದ್ಯಗಳು, ಸೆಪ್ಟೆಂಬರ್ 11ರಿಂದ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲಿ ಎನ್ನುವುದೇ ಎಲ್ಲರ ಆಸೆ ಆಗಿದೆ. ಈ ಸಮಯದಲ್ಲಿ ಪಾಕಿಸ್ತಾನ್ ಆಟಗಾರ ವಾಸಿಂ ಅಕ್ರಂ ಅವರು ಭಾರತದ ಆ ಒಬ್ಬ ಬ್ಯಾಟ್ಸ್ಮನ್ ಹೆಸರು ಕೇಳಿದರೆ, ಪಾಕ್ ತಂಡ ಭಯ ಪಡುತ್ತಿದೆ ಎಂದು ಹೇಳಿದ್ದಾರೆ.

ವಾಸಿಂ ಅಕ್ರಂ ಅವರು ಮಾತನಾಡಿರುವುದು ಭಾರತದ ಆಟಗಾರರಾದ ರೋಹಿತ್ ಶರ್ಮಾ ಅವರ ಬಗ್ಗೆ ಅಥವಾ ವಿರಾಟ್ ಕೋಹ್ಲಿ ಅವರ ಬಗ್ಗೆ ಮಾತನಾಡಿಲ್ಲ, ಬದಲಾಗಿ ಭಾರತ ತಂಡದ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಮಾತನಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಫಾರ್ಮ್ ನಲ್ಲಿದ್ದು, ಭಾರತ ತಂಡದ ಪರವಾಗಿ ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ. ಇವರ ಬಗ್ಗೆ ಮಾತನಾಡಿರುವ ವಾಸಿಂ ಅಕ್ರಂ, ಸೂರ್ಯಕುಮಾರ್ ಯಾದವ್ ತಮ್ಮ ಮೆಚ್ಚಿನ ಆಟಗಾರ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ಟಿ20 ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಬಹಳ ಅಪಾಯಕಾರಿ ಬ್ಯಾಟಿಂಗ್ ಮಾಡುತ್ತಾರೆ ಎಂದು ಸೆನ್ಸೇಷನ್ ಕಮೆಂಟ್ಸ್ ಮಾಡಿದ್ದಾರೆ. ಶಾರ್ಟ್ ಬಾಲ್ ಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿ, ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯ ಇರುವ ಕೆಲವೇ ಆಟಗಾರರಲ್ಲಿ ಇವರು ಸಹ ಒಬ್ಬರು ಎಂದಿದ್ದಾರೆ. ಪಾಕಿಸ್ತಾನ್ ತಂಡವು ಭಾರತ ತಂಡದ ಸೂರ್ಯಕುಮಾರ್ ಯಾದವ್ ಅವರ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ವಾರ್ನಿಂಗ್ ಸಹ ನೀಡಿದ್ದಾರೆ ವಾಸಿಂ ಅಕ್ರಂ. ಇನ್ನು ಮಾತನಾಡಿ, ತಮ್ಮ ಆಟದ ವೈಖರಿಯಿಂದ ಸೂರ್ಯಕುಮಾರ್ ಯಾದವ್ ಅವರು ಏಷ್ಯಾಕಪ್ ಪಂದ್ಯಗಳಲ್ಲಿ ಎದುರಾಳಿ ತಂಡಗಳಿಗೆ ಭಯ ಹುಟ್ಟಿಸುತ್ತಾರೆ ಎಂದು ಹೇಳಿದ್ದಾರೆ.

Leave A Reply

Your email address will not be published.