ಕ್ರಿಕೆಟ್ ಜಗತ್ತಿನಲ್ಲೂ ಕೂಡ ಮಿಂಚಲು ರೆಡಿ ಆದ ರತನ್ ಟಾಟಾ ಒಡೆತನದ ಟಾಟಾ ಗ್ರೂಪ್? ಚೈನಾ ಕಂಪನಿಗೆ ಗೇಟ್ ಪಾಸ್.

363

ಕ್ರಿಕೆಟ್ ಎಂದರೆ ಹಾಗೆ ನೋಡಿ ಜನ ಹುಚ್ಚೆದ್ದು ಕುಣಿಯುತ್ತಾರೆ.ಕ್ರಿಕೆಟ್ ಮಾಡಿರುವ ಮೋಡಿ ಅಶ್ಟಿದೆ, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಕ್ರಿಕೆಟ್ ಅನ್ನು ಬೇಡ ಎಂದು ದೂರ ಮಾಡಿದವರು ಯಾರು ಇಲ್ಲ. ಭಾರತ ಮತ್ತು ಕ್ರಿಕೆಟ್ ಗೆ ಅಷ್ಟೊಂದು ನಂಟಿದೆ. ಇಲ್ಲಿನ ಗಲ್ಲಿ ಗಲ್ಲಿಯಲ್ಲೂ ಕ್ರಿಕೆಟ್ ಅಭಿಮಾನಿಗಳು ಇದ್ದಾರೆ. ಎಲ್ಲರಿಗೂ ಜೀವನದಲ್ಲಿ ಒಬ್ಬ ಕ್ರಿಕೆಟರ್ ಆಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹಾಗೆ ಇದೀಗ ಬಂದ ಸುದ್ದಿಯಂತೆ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಲು ದೇಶದ ರತ್ನ ರತನ್ ಟಾಟಾ ಸಾಜಾಗಿದ್ದಾರೆ.

ಹೌದು ಹಾಗೆಂದರೆ ರತನ್ ಟಾಟಾ ಅವರು ಕ್ರಿಕೆಟ್ ಆಡಲು ಮುಂದಾಗಿಲ್ಲ, ಬದಲಾಗಿ ಅವರ ಒಡೆತನದ ಕಂಪನಿ ಈಗ ಈ ಒಂದು ಹೆಜ್ಜೆಯನ್ನು ಇಟ್ಟಿದೆ.ಐಪಿಎಲ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ, ಸದ್ಯದ ಮಟ್ಟಿನಲ್ಲಿ ಅತೀ ಹೆಚ್ಚು ಹಣ ನೀಡುತ್ತಿರುವ ಲೀಗ್ ಇದ್ದರೆ ಅದು ಐಪಿಎಲ್. ಕೋಟ್ಯಾಂತರ ರೂಪಾಯಿ ಹಣ ಇಲ್ಲಿ ವ್ಯಯವಾಗುತ್ತದೆ. ಈ ಹಿಂದೆ ನಡೆದ ಐಪಿಎಲ್ ಗಳಲ್ಲಿ ಚೀನಾ ಮೂಲದ ಕಂಪನಿಗಳು ಎಲ್ಲವನ್ನೂ ವಹಿಸಿ ಕೊಂಡಿದ್ದವು.

ಕಳೆದ ಬಾರಿಯೂ ಚೈನಾ ಒಡೆತನದ ವಿವೋ ಮೊಬೈಲ್ಸ್ ಐಪಿಎಲ್ ಹಕ್ಕನ್ನು ಪಡೆದಿತ್ತು. ಆದರೆ ಈ ಬಾರಿ ಎಲ್ಲಾ ಚೈನಾ ಕಂಪನಿಗಳಿಗೆ ಭಾರತ ಸೆಡ್ಡು ಹೊಡೆದಂತೆ ಭಾರತದ ಕಂಪನಿ ನಮ್ಮ ಹೆಮ್ಮೆಯ ರತನ್ ಟಾಟಾ ಅವರ ಟಾಟಾ ಸಮೂಹ ಸಂಸ್ಥೆ ಈ ಬಾರಿಯ ಐಪಿಎಲ್ ಹಕ್ಕನ್ನು ಪಡೆದಿದೆ. ಈ ಬಾರಿಯ ಐಪಿಎಲ್ “TATA IPL” ಆಗಿ ಮೂಡಿ ಬರಲಿದೆ. ಏನೇ ಆಗಲಿ ಈ ಒಂದು ಬೆಳವಣಿಗೆ ಒಳ್ಳೆಯದು. ಸಧೃಡ ಭಾರತ ನಿರ್ಮಾಣದಲ್ಲಿ ನಮ್ಮ ದೇಶಗಳು ಭಾಗಿ ಆಗುತ್ತಿರುವುದು ಹೆಮ್ಮೆಯ ವಿಚಾರ.

Leave A Reply

Your email address will not be published.