ಚೆಸ್ ಆಟಗಾರ ಆಗಿದ್ರಂತೆ ಯುಜುವೇಂದ್ರ ಚಹಲ್. ಕ್ರಿಕೆಟ್ ಗೆ ಬರಲು ಕಾರಣವೇನಂತೆ ಗೊತ್ತಾ?
ಯಜುವೇಂದ್ರ ಚಹಲ್ ಯಾರಿಗೆ ಗೊತ್ತಿಲ್ಲಾ ಹೇಳಿ. ಇಂದಿನ ದಿನಗಳಲ್ಲಿ ಭಾರತದಲ್ಲಿ ಸ್ಪಿನ್ ವಿಭಾಗದಲ್ಲಿ ಎತ್ತರದ ಸ್ಥಾನದಲ್ಲಿ ಯಾವುದಾದರು ಹೆಸರು ಇದ್ದರೆ ಅದು ಯಜುವೇಂದ್ರ ಚಹಲ್ ಅವರದ್ದು. ಪ್ರತಿಭೆ ಮೂಲಕ ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೇನೆ ಬೆಂಗಳೂರು ತಂಡದಲ್ಲಿ ಇವರು ಕಾಣಿಸಿಕೊಂಡಿದ್ದರಿಂದ ಇವರಿ ಕರ್ನಾಟಕದಲ್ಲಿ ಅನೇಕ ಅಭಿಮಾನಿಗಳು ಕೂಡಾ ಇದ್ದಾರೆ.ಐಪಿಎಲ್ ಇಂದ ತಮ್ಮ ಕ್ರಿಕೆಟ್ ಜೀವನ ಆರಂಭಿಸಿ ನಂತರ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಹಾಗು ಗೌರವ ಸಂಪಾದಿಸಿದ ಯಜುವೇಂದ್ರ ಚಹಲ್ ಕ್ರಿಕೆಟ್ ಗೂ ಮುನ್ನ ಚೆಸ್ ಆಟಗಾರರಾಗಿದ್ದರಂತೆ.
ಇವರು ಏಳನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದ್ದರಂತೆ. ಇನ್ನು ಕೇವಲ ಹತ್ತನೇ ವರ್ಷದಲ್ಲಿ ರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್ ಕೂಡಾ ಆಗಿದ್ದರು. ಅದೇ ರೀತಿ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್ ಶಿಪ್ ಅಲ್ಲಿ ಕೂಡಾ ಚಹಲ್ ಭಾಗವಹಿಸಿದ್ದರು.ಇವರ ತಂದೆ ವಕೀಲರು ತಾಯಿ ಗೃಹಿಣಿ. ಇವರದ್ದು ಒಂದು ಮಧ್ಯಮವರ್ಗದ ಪರಿವಾರವಾಗಿತ್ತು. ಬರುಬರುತ್ತಾ ಇವರ ಚೆಸ್ ಗಾಗಿ ಖರ್ಚು ಜಾಸ್ತಿ ಆಗುತ್ತಾ ಹೋಯಿತು. ಇವರಿಗೆ ಸಿಗುತ್ತಿದ್ದ sponsor ಗಳು ಕೂಡಾ ಬಿಟ್ಟು ಹೋಗ ತೊಡಗಿದರು. ವಿದಿಯಿಲ್ಲದೆ ಚೆಸ್ ಗೆ ಗುಡ್ ಬಾಯ್ ಹೇಳಬಾಕಾಯಿತು ಚಹಲ್.ಅದಾದ ನಂತರ ತಮ್ಮ ಎಲ್ಲಾ ಗಮನ ಕ್ರಿಕೆಟ್ ಮೇಲೆ ಕೇಂದ್ರೀಕರಿಸಿದರು. ಇವರ ಸತತ ಪರಿಶ್ರಮ ಫಲ ನೀಡಿತು.
೨೦೧೧ ರಲ್ಲಿ ಮುಂಬೈ ತಂಡ ಇವರನ್ನು ಮೊದಲ ಬಾರಿಗೆ ಐಪಿಎಲ್ ಅಲ್ಲಿ ಸೇರಿಸಿಕೊಂಡಿತು. ಅಲ್ಲಿಂದ ಚಹಲ್ ಚಾಂಪಿಯನ್ ಲೀಗ್ ಅಲ್ಲಿ ಉತ್ತಮ ಪ್ರದರ್ಶನ ನೀಡಿ ತಾವೊಬ್ಬ ಉತ್ತಮ ಸ್ಪಿನ್ನರ್ ಎಂದು ಎಲ್ಲರ ಗಮನ ಸೆಳೆದರು. ಅದಾದ ನಂತರ ೨೦೧೪ ರಲ್ಲಿ ಬೆಂಗಳೂರು ತಂಡ RCB ಇವರನ್ನು ಖರೀದಿ ಮಾಡಿತ್ತು. ವರ್ಷದಿಂದ ವರ್ಷಕ್ಕೆ ಇವರು ಬೆಂಗಳೂರು ತಂಡದ ಮುಖ್ಯ ಸ್ಪಿನ್ನರ್ ಆಗಿ ಮಿಂಚಿದರು. ಇದಾದ ನಂತರ ಈ ಬಾರಿ ಇವರು ರಾಜಸ್ಥಾನ ಪರ ಐಪಿಎಲ್ ಆಡಿದ್ದಾರೆ. ಈ ಬಾರಿ ಪರ್ಪಲ್ ಕ್ಯಾಪ್ ಕೂಡಾ ಇವರದ್ದಾಗಿತ್ತು. ಅಂತರಾಷ್ಟ್ರೀಯ ಸರಣಿಗೂ ಕೂಡಾ ಇವರು ಮುಖ್ಯ ಸ್ಪಿನ್ನರ್ ಆಗಿ ಇಂದು ಹೊರಹೊಮ್ಮಿದ್ದಾರೆ.