ಜೀವನ ಶ್ರೇಷ್ಠ ಫಾರ್ಮ್ ನಲ್ಲಿ ಇದ್ದರೂ ಕೂಡ ವಿಶ್ವಕಪ್ ನಲ್ಲಿ ಒಂದು ಪಂದ್ಯವಾಡುವುದಿಲ್ಲ ಈತ. ಆಯ್ಕೆಯಾಗಿರುವುದೇ ವ್ಯರ್ಥ. ಯಾರು ಗೊತ್ತೇ??

178

ವಿಶ್ವಕಪ್ ತಂಡದಲ್ಲಿ ಈಗಾಗಲೇ ಯಾರೆಲ್ಲಾ ಆಟಗಾರರು ಇದ್ದಾರೆ ಎಂದು ನಿಮಗೆಲ್ಲ ಗೊತ್ತಿದೆ. ತಂಡಕ್ಕೆ ಈಗಾಗಲೇ ಆಯ್ಕೆಯಾಗಿರುವ ಒಬ್ಬ ಆಟಗಾರ, ಏನೇ ಆದರೂ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯುವುದಿಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ತಕ್ಕ ಹಾಗೆ ಕಾರಣಗಳು ಸಹ ಇದೆ. ಈ ಆಟಗಾರನ ಫಾರ್ಮ್ ಹೇಳಿಕೊಳ್ಳುವಷ್ಟು ವಿಶೇಷವಾಗಿ ಏನಿಲ್ಲ, ಸಾಧಾರಾಣವಾಗಿದೆ ಎನ್ನುವ ಕಾರಣಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಈ ಆಟಗಾರನಿಗೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ಕೊಡುವುದಿಲ್ಲ ಎನ್ನುವ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ..

ಆ ಆಟಗಾರ ಮತ್ಯಾರು ಅಲ್ಲ, ದೀಪಕ್ ಹೂಡಾ ಅವರು. ದೀಪಕ್ ಅವರು ಪ್ರಸ್ತುತ ವಿಶ್ವಕಪ್ ತಂಡಕ್ಕೆ ಆಯ್ಕೆ ಆಗಿದ್ದಾರೆ, ಆದರೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಹ ಇವರಿಗೆ ಸಿಗುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಏಕೆಂದರೆ ಈಗಷ್ಟೇ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ದೀಪಕ್ ಹೂಡಾ ಅವರು ಹೇಳಿಕೊಳ್ಳುವಂಥ ಪ್ರದರ್ಶನ ನೀಡಲಿಲ್ಲ, ಬೌಲಿಂಗ್ ಮಾಡಿದ ಎರಡು ಓವರ್ ಗಳಲ್ಲಿ 22 ರನ್ ಬಿಟ್ಟುಕೊಟ್ಟಿದ್ದರು. ಇವರ ಬೌಲಿಂಗ್ ಮಾಡಿದ ಓವರ್ ಸ್ವಲ್ಪ ದುಬಾರಿಯಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇವರನ್ನು ಪ್ಲೇಯಿಂಗ್ 11 ಗೆ ತೆಗೆದುಕೊಳ್ಳದೆ ಇರಲು ಮೊದಲ ಕಾರಣ ಇದು.

ಮತ್ತೊಂದು ಕಾರಣ ಏನೆಂದರೆ, ದೀಪಕ್ ಹೂಡಾ ಅವರ ಬ್ಯಾಟಿಂಗ್ ನೋಡಿದರೆ, ಅಧ್ಭುತ ಎನ್ನುವ ಹಾಗಿಲ್ಲ, ಸಾಧಾರಣವಾಗಿದೆ. ಕೆ.ಎಲ್.ರಾಹುಲ್, ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಬಲಿಷ್ಠ ಬ್ಯಾಟ್ಸ್ಮನ್ ಗಳು ತಂಡದಲ್ಲಿ ಇದ್ದಾರೆ. ಹಾಗಾಗಿ ರೋಹಿತ್ ಶರ್ಮಾ ಅವರು ಆ ಬಲಿಷ್ಠ ಆಟಗಾರರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ, ಈ ಕಾರಣಗಳಿಂದ ದೀಪಕ್ ಹೂಡಾ ಅವರಿಗೆ ವಿಶ್ವಕಪ್ ನ ಪ್ಲೇಯಿಂಗ್ 11 ನಲ್ಲಿ ಸ್ಥಾನ ಸಿಗುವುದಿಲ್ಲ, ಅವರು ಬೆಂಚ್ ಕಾಯಬೇಕಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ.

Leave A Reply

Your email address will not be published.