ಜೀವ ಪೂರ್ತಿ ಮಾತ್ರೆಗಳನ್ನು ನುಂಗುವ ಬದಲು, ಆಯುರ್ವೇದದ ಮೂಲಕ 3 ತಿಂಗಳಲ್ಲಿ ಮನೆಯಲ್ಲಿಯೇ ಮಧುಮೇಹ ತಡೆಹಿಡಿಯುವುದು ಹೇಗೆ ಗೊತ್ತೇ??
ಈಗ ಜೀವನ ಶೈಲಿಯಲ್ಲಿ ಬದಲಾವಣೆ ಆಗುತ್ತಿರುವ ಕಾರಣ ನಮ್ಮ ಸುತ್ತಲು ಹಲವು ರೋಗಗಳು ಶುರುವಾಗಿದೆ, ಅದರಲ್ಲೂ ಮುಖ್ಯವಾಗಿ ಡೈಯಾಬಿಟಿಸ್ ರೋಗ ಎಲ್ಲರನ್ನು ಕಾಡುತ್ತಿದೆ. ಈ ರೋಗವ ಹೆಣ್ಣು ಗಂಡು ಎನ್ನುವ ಬೇಧ ಇಲ್ಲದೆ ಬರುತ್ತಿದೆ, ಅಷ್ಟೇ ಅಲ್ಲದೆ ದೊಡ್ಡವರು ಚಿಕ್ಕವರು ಎನ್ನುವ ವಯಸ್ಸಿನ ವ್ಯತ್ಯಾಸ ಕೂಡ ಇಲ್ಲದೆ ಬರುತ್ತಿದೆ. ಡೈಯಾಬಿಟಿಸ್ ಇಂದ ಗುಣ ಹೊಂದಲು ಅನೇಕ ಇಂಗ್ಲಿಷ್ ಮೆಡಿಸಿನ್ ಕಂಡು ಹಿಡಿದಿದ್ದರು ಸಹ ಪೂರ್ತಿಯಾಗಿ ಇದರಿಂದ ಮುಕ್ತಿ ಹೊಂದಲು ಸಾಧ್ಯವಾಗಿಲ್ಲ. ಡೈಯಾಬಿಟಿಸ್ ಕಡಿಮೆ ಮಾಡಲು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ ಸಂಸ್ಥೆಯು ಬಿಜಿಆರ್34 ಎನ್ನುವ ಆಯುರ್ವೇದ ಔಷಧಿಯನ್ನು ಕಂಡು ಹಿಡಿದಿದೆ. ಬಹಳ ಸಮಯದಿಂದ ಡೈಯಾಬಿಟಿಸ್ ಇರುವವರಿಗೆ ಮತ್ತು ದೇಹದ ತೂಕ ಹೆಚ್ಚಾಗಿ ಇರುವವರಿಗೆ ಈ ಮೆಡಿಸಿನ್ ಇಂದ ಸಹಾಯ ಆಗುತ್ತದೆ ಎಂದು ಸಂಸ್ಥೆಯ ಮೂಲಕ ತಿಳಿದು ಬಂದಿದೆ.
ಈ ಆಯುರ್ವೇದಿಕ್ ಔಷಧಿಯು ಡೈಯಾಬಿಟಿಸ್ ಕಡಿಮೆ ಮಾಡಲು ಮತ್ತು ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ಈ ಸ್ಟಡಿ ಅನ್ನು ವೈದ್ಯಕೀಯ ತಜ್ಞರು, ಪ್ರಾಧ್ಯಾಪಕರು, ಫಾರ್ಮಕಾಲಜಿ ಡಿಪಾರ್ಟ್ಮೆಂಟ್, AIIMS, ದೆಹಲಿ ಇಂದ ತಿಳಿದುಬಂದಿದೆ. ಈ ಸ್ಟಡಿ ಅವರು ಸುಧೀರ್ ಸಾರಂಗಿ ಅವರು ಶುರು ಮಾಡಿದ್ದರು, ಇದನ್ನು ಪೂರ್ಣಗೊಳಿಸಲು 3 ವರ್ಷ ಸಮಯ ತೆಗೆದುಕೊಂಡಿದೆ. ಈ ಬಿಜಿಆರ್ 34 ಔಷಧಿ ಹೇಗೆ ಕೆಲಸ ಮಾಡುತ್ತದೆ? ಇದರಿಂದ ಪ್ರಯೋಜನ ಆಗುತ್ತದೆಯೇ ಎಂದು ಸಂಶೋಧನೆ ನಡೆಸಲಾಗಿದ್ದು, ಉತ್ತಮವಾದ ಫಲಿತಾಂಶ ಸಿಕ್ಕಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಔಷಧಿಯು ಹಾರ್ಮೋನ್ ಗಳ ಪ್ರೊಫೈಲ್ ಅನ್ನು ಮಾಡ್ಯುಲೇಟ್ ಮಾಡುವ ಮೂಲಕ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣ ಮಾಡುತ್ತದೆ.
ದೇಹದಲ್ಲಿ ಟ್ರೈ ಗ್ಲಿಸರೈಡ್ ಹೆಚ್ಚಾಗಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಹಾಗಾಗಿ ಬಿಜಿಆರ್ 34 ಔಷಧಿ, ಅದಕ್ಕೆ ಸಂಬಂಧಿಸಿದ ಖಾಯಿಲೆಗಳು ದೇಹದಿಂದ ದೂರ ಇರುವ ಹಾಗೆ ಮಾಡುತ್ತದೆ. ಹಾರ್ಮೋನ್ ಪ್ರೊಫೈಲ್ ಗಳಲ್ಲಿ ಆಗು ಬದಲಾವಣೆ ನಿದ್ರೆಗೆ ತೊಂದರೆ ಉಂಟು ಮಾಡಬಹುದು. ಈ ಔಷಧಿ ಬಳಸುವುದರಿಂದ 3 ತಿಂಗಳಲ್ಲಿ ನಿಯಂತ್ರಣಕ್ಕೆ ತರಬಹುದು. ಸರ್ಬಿಯನ್ ಜನರಲ್ ಆಫ್ ಎಕ್ಸ್‌ಪರಿಮೆಂಟಲ್ ಮತ್ತು ಕ್ಲಿನಿಕಲ್ ಸೈಂಟಿಫಿಕ್ ಪ್ಲಾಟ್ ಫಾರ್ಮ್ ನಲ್ಲಿ ನಡೆಸಿದ ರೀಸರ್ಚ್ ಪ್ರಕಾರ ಬಿಜಿಆರ್ 34, 90 ದಿನಗಳಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಇದರಲ್ಲಿರುವ ಆಂಟಿ ಆಕ್ಸಿಡಂಟ್ ಅಂಶವು ಡೈಯಾಬಿಟಿಸ್ ವಿರುದ್ಧ ಹೋರಾಡುತ್ತದೆ ಎಂದು ತಿಳಿಸಲಾಗಿದೆ. ಈ ಬಿಜಿಆರ್ 34 ಔಷಧಿ ತಯಾರಿಸಲು ಅನೇಕ ರೀತಿಯ ಗಿಡ ಮೂಲಿಕೆಗಳನ್ನು ಬಳಸುತ್ತಾರೆ. ಮಂಜಿಷ್ಟ, ಸಾರ, ಹಾಗೂ ಇನ್ನಿತರ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಲಾಗುತ್ತದೆ.