ಟಿ20 ಅಲ್ಲ, ಈತನಿಗೆ ಟೆಸ್ಟ್ ತಂಡದಲ್ಲಿ ಚಾನ್ಸ್ ನೀಡಿ ಎಂದ ಮದನಲಾಲ್ – ಯಾರ ಬಗ್ಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ನಲ್ಲಿ ಟಿ20 ಸರಣಿ ಜಯಿಸಿದೆ. ಏಕದಿನ ಸರಣಿ ಸಹ ಜಯಿಸುವ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಕಾರಣ ಭಾರತ ತಂಡದ ಬೌಲರ್ ಗಳು ಎಂದು ಹೇಳಬಹುದು. ಇಂಗ್ಲೆಂಡ್ ನ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ನ್ನು ಬಲು ಬೇಗ ಔಟ್ ಮಾಡಿ, ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಕಾರಣ ಬ್ಯಾಟ್ಸ್ಮನ್ ಗಳು ಸುಲಭವಾಗಿ ಗುರಿ ತಲುಪವಂತಾಯಿತು.
ಈ ಮಧ್ಯೆ ಟಿ 20 ಸರಣಿಯಲ್ಲಿ ಅವಕಾಶ ಪಡೆದ ಜಮ್ಮು ಕಾಶ್ಮೀರದ ವೇಗದ ಬೌಲರ್ ಉಮ್ರಾನ್ ಮಲೀಕ್ ರವರ ವೈಫಲ್ಯದ ಬಗ್ಗೆ ಸಹ ಟೀಕೆಗಳು ಕೇಳಿ ಬರುತ್ತಿವೆ. ಮೂರನೇ ಹಾಗೂ ಅಂತಿಮ ಟಿ 20 ಪಂದ್ಯದಲ್ಲಿ ಅವಕಾಶ ಪಡೆದ ಅವರು ಸಾಕಷ್ಟು ದುಬಾರಿಯಾದರು. ನಾಲ್ಕು ಓವರ್ ಗಳಲ್ಲಿ ಬರೋಬ್ಬರಿ 56 ರನ್ ಬಿಟ್ಟುಕೊಟ್ಟರು. ಇದಲ್ಲದೇ ಐರ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿಯೂ ಸಹ ಉಮ್ರಾನ್ ಮಲೀಕ್ ದುಬಾರಿಯಾಗಿದ್ದರು. ಅತಿ ವೇಗದ ಎಸೆತ ಹಾಕುವ ಉಮ್ರಾನ್ ರವರ ಲೈನ್ ಎಂಡ್ ಲೆಂಗ್ತ್ ಕೊಂಚ ತಪ್ಪಿದರೂ ಬ್ಯಾಟ್ಸ್ಮನ್ ಗೆ ಸುಲಭವಾಗುತ್ತದೆ.
ಹೀಗಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ಮದನ್ ಲಾಲ್, ಉಮ್ರಾನ್ ಮಲೀಕ್ ರ ಆಯ್ಕೆಯ ಬಗ್ಗೆ ಒಂದು ಸಲಹೆ ನೀಡಿದ್ದಾರೆ. ಉಮ್ರಾನ್ ಮಲೀಕ್ ಉತ್ತಮ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಅವರು ಬೌಲ್ ಚೆಂಡು ಬ್ಯಾಟ್ ಗೆ ತಗುಲಿದರೇ, ಎಡ್ಜ್ ಆಗಿ ಸ್ಲಿಪ್ ನತ್ತ ಹೋಗುತ್ತದೆ. ಟಿ 20 ಯಲ್ಲಿ ಅಂತಹ ಫೀಲ್ಡ್ ಪ್ಲೇಸ್ ಮೆಂಟ್ ಕಷ್ಟ. ಹಾಗಾಗಿ ಅವರನ್ನು ಟಿ 20 ಬದಲಿಗೆ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿ. ವೇಗದ ಬೌಲರ್ ಗಳಿಗೆ ನೆರವಾಗುವ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ವಿಂಡೀಸ್, ನ್ಯೂಜಿಲೆಂಡ್ ನಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ