ಟೀಮ್ ಇಂಡಿಯಾ ಗೆದ್ದ ತಕ್ಷಣವೇ ಕಿಂಗ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮ ಮಾಡಿದ್ದೇನು ಗೊತ್ತೇ?? ಫುಲ್ ವೈರಲ್ ಆಯಿತು ಸುದ್ದಿ.

155

ನಿನ್ನೇ ಸೆಪ್ಟೆಂಬರ್ 25ರಂದು ಭಾರತ ವರ್ಸಸ್ ಆಸ್ಟ್ರೇಲಿಯಾ ನಿರ್ಣಾಯಕ ಪಂದ್ಯ ಹೈದರಾಬಾದ್ ನಲ್ಲಿ ನಡೆಯಿತು. ನಿನ್ನೆಯ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿ 187 ರನ್ ಗಳ ಟಾರ್ಗೆಟ್ ಅನ್ನು ಭಾರತಕ್ಕೆ ನೀಡಿತು. ಇತ್ತ ಭಾರತ ತಂಡ ಅದ್ಭುತವಾದ ಪ್ರದರ್ಶನದ ಮೂಲಕ ಗೆಲುವು ಸಾಧಿಸಿತು. ವಿರಾಟ್ ಕೋಹ್ಲಿ ಅವರು 48 ಬಾಲ್ ಗಳಲ್ಲಿ 63 ರನ್ ಭಾರಿಸಿದರು. ಸೂರ್ಯಕುಮಾರ್ ಯಾದವ್ ಅವರು 36 ಬಾಲ್ ಗಳಲ್ಲಿ 69 ರನ್ ಭಾರಿಸಿದರು.

ಇವರಿಬ್ಬರ ಜೊತೆಯಾಟ ಭಾರತ ತಂಡಕ್ಕೆ ಅತ್ಯುತ್ತಮವಾದ ಕೊಡುಗೆಯಾಗಿ ಅಡಿಪಾಯ ಹಾಕಿತು ಎಂದರೆ ತಪ್ಪಾಗುವುದಿಲ್ಲ. ಕೊನೆಯ ಓವರ್ ಗಳಲ್ಲಿ ಹಾರ್ದಿಕ್ ಪಾಂಡ್ಯ ಅವರು 16 ಬಾಲ್ ಗಳಲ್ಲಿ 25 ರನ್ ಗಳನ್ನು ಭಾರಿಸಿ, ಪಂದ್ಯ ಗೆಲ್ಲುವ ಹಾಗೆ ಮಾಡಿದರು. ನಿನ್ನೆಯ ಪಂದ್ಯ ಒಂದು ರೀತಿ ರೋಚಕವಾಗಿತ್ತು ಎಂದರೆ ತಪ್ಪಲ್ಲ. ಏಷ್ಯಾಕಪ್ ನಲ್ಲಿ ಫಾರ್ಮ್ ಕಂಡುಕೊಂಡ ವಿರಾಟ್ ಕೋಹ್ಲಿ ಅವರು ನಿನ್ನೆಯ ಪಂದ್ಯದಲ್ಲಿ ಒಳ್ಳೆಯ ಪ್ರದರ್ಶನ ನೀಡಿದರು. ನಿನ್ನೆಯ ಪಂದ್ಯವನ್ನು ಹಾರ್ದಿಕ್ ಪಾಂಡ್ಯ ಅವರು ಮುಗಿಸಿದ ಕ್ಷಣವೇ ವಿರಾಟ್ ಕೋಹ್ಲಿ ಅವರು ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಮಾಡಿದ ಕೆಲಸ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಕೊನೆಯ 2 ಬಾಲ್ ಗಳಲ್ಲಿ 4 ರನ್ ಗಳ ಅವಶ್ಯಕತೆ ಭಾರತ ತಂಡಕ್ಕೆ ಇತ್ತು, ಆಗ ಒಂದೇ ಬಾಲ್ ನಲ್ಲಿ ಡೇನಿಯಲ್ ಸ್ಯಾಮ್ಸ್ ಅವರು ವೈಡ್ ಬಾಲ್ ಹಾಕಿದಾಗ, ಪಾಂಡ್ಯ ಅವರ ಬ್ಯಾಟ್ ಎಡ್ಜ್ ಗೆ ತಾಗಿದ ಬಾಲ್ ಬೌಂಡರಿ ಕಡೆಗೆ ಸಾಗಿ, ಬೌಂಡರಿಯತ್ತ ಸಾಗಿದ ಹಾಗೆ, ವಿರಾಟ್ ಕೋಹ್ಲಿ ಅವರು ಮತ್ತು ರೋಹಿತ್ ಶರ್ಮಾ ಅವರು ಸತತವಾಗಿ ಸಂಭ್ರಮಿಸಿದ್ದಾರೆ. ವಿರಾಟ್ ಕೋಹ್ಲಿ ಅವರು ರೋಹಿತ್ ಶರ್ಮಾ ಅವರಿಗೆ ಹೆಮ್ಮೆಯಿಂದ ಬೆನ್ನು ತಟ್ಟಿದ್ದು, ಇಬ್ಬರು ಹಗ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Leave A Reply

Your email address will not be published.