ಟೆಸ್ಟ್ ನಾಯಕತ್ವ ಬಿಟ್ಟ ವಿರಾಟ್ ಕೊಹ್ಲಿ. ನಿಜವಾಯಿತು ಧೋನಿ ಹೇಳಿದ ಭವಿಷ್ಯವಾಣಿ. ಏನಿದು ಧೋನಿ ಹೇಳಿದ್ದ ಮಾತು?

3,171

ಏಕದಿನ ಭಾರತ ತಂಡದಿಂದ ನಾಯಕ್ತ್ವವನ್ನು ಬಿಸಿಸಿಐ ಹಿಂದಕ್ಕೆ ಪಡೆದ ನಂತರ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವೆ ಬಹಳ ಮನಸ್ತಾಪ ಇತ್ತು. ಅದೇ ರೀತಿ ಟಿ೨೦ ನಾಯಕತ್ವವನ್ನು ಬಿಟ್ಟ ವಿರಾಟ್ ಕೊಹ್ಲಿ ಇದೀಗ ಸೌತ್ ಆಫ್ರಿಕಾ ವಿರುದ್ದದ ೩ ಪಂದ್ಯಗಳ ಟೆಸ್ಟ್ ಸರಣಿ ಸೋತ ನಂತರ ಟೆಸ್ಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ರಾಜೀನಾಮೆ ನೀಡಲು ಕಾರಣವನ್ನು ತಿಳಿಸಿದ್ದಾರೆ. ಇದೀಗ ಧೋನಿ ಅವರು ಹೇಳಿದ ಭವಿಷ್ಯವಾಣಿ ನಿಜವಾಗಿದೆ.

ಧೋನಿ ವರ್ಷಗಳ ಹಿಂದೆ ವಿಭಜಿತ ನಾಯಕತ್ವ ಸೂಕ್ತವಲ್ಲ ಎಂದು ಹೇಳಿದ್ದರು. ಟೆಸ್ಟ್, ಏಕದಿನ ಹಾಗು ಟಿ-೨೦ ಯಾ ಎಲ್ಲ ಮಾತು ಕ್ರಿಕೆಟ್ ತಂಡಕ್ಕೂ ಒಬ್ಬನೇ ನಾಯಕ ಇರಬೇಕು ಎಂದು ಧೋನಿ ಅಭಿಪ್ರಾಯ ಪಟ್ಟಿದ್ದರು. ಅದರಂತೆ ೨೦೧೭ ರಲ್ಲಿ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂಗ್ಲೆಂಡ್ ತಂಡದ ವಿರುದ್ಧ ಏಕದಿನ ಪಂದ್ಯ ನಡೆಯುವ ಮುನ್ನ ಸೀಮಿತ ಓವರ್ಗಳ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪತ್ರಿಕಾ ಗೋಷ್ಠಿ ಅಲ್ಲಿ ಭಾರತದಲ್ಲಿ ಬೇರೆ ಬೇರೆ ಮಾದರಿಯ ಕ್ರಿಕೆಟ್ ಗೆ ಬೇರೆ ಬೇರೆ ಆಟಗಾರರು ನಾಯಕತ್ವ ವಹಿಸಿಕೊಂಡರೆ ಬಹಳ ದಿನ ಅದು ಮುಂದುವರೆಯುವುದಿಲ್ಲ. ಹಾಗಾಗಿ ನಾನು ರಾಜೀನಾಮೆ ಕೊಡುತ್ತಿದ್ದೇನೆ ಅದೇ ರೀತಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಅತ್ಯಂತ ಯಶಸ್ಸು ಕಾಣಲಿದೆ ಎಂದು ಹೇಳಿದ್ದರು.

ವಿರಾಟ್ ಕೊಹ್ಲಿ ೨೦೧೪-೧೫ ರಲ್ಲಿ ಟೆಸ್ಟ್ ತಂಡದ ನಾಯಕತ್ವ ವ್ಹಸಿಕೊಂಡಿದ್ದರು. ಇದು ವಿಭಜಿತ ನಾಯಕತ್ವಕ್ಕೆ ದಾರಿ ಮಾಡಿಕೊಟ್ಟಿತು. ಅದಾದ ನಂತರ ಧೋನಿ ರಾಜೀನಾಮೆ ಹಾಗು ನಿವೃತ್ತಿ ಪಡೆದ ನಂತರ ಎಲ್ಲ ಮಾದರಿಯಲ್ಲಿ ನಾಯಕತ್ವ ಪಡೆದುಕೊಂಡರು. ಇದೀಗ ಕಳೆದ ವರ್ಷ ನಡೆದ ಟಿ೨೦ ವಿಶ್ವಕಪ್ ನಂತರ ಟಿ೨೦ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಅದಾದ ನಂತರ ಏಕದಿನಕ್ಕೆ ಬಿಸಿಸಿಐ ರಾಜೀನಾಮೆ ಕೇಳಿ ಏಕಾಏಕಿ ತೆಗೆದು ಬಿಟ್ಟಿತು. ಇದೀಗ ಟೆಸ್ಟ್ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

Leave A Reply

Your email address will not be published.