ತಂಡಕ್ಕಾಗಿ ಏನನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ನೋವು ನನ್ನಲ್ಲಿತ್ತು. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತಾಡಿದ ವಿರಾಟ್ ಕೊಹ್ಲಿ.
ಐಪಿಎಲ್ ೨೦೨೨ ರ ೬೭ ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ನಡೆದಿತ್ತು. ಇದೊಂದು ರೋಚಕ ಪಂದ್ಯ ಹಾಗೇನೇ ಬೆಂಗಳೂರು ತಂಡಕ್ಕೆ ಗೆಲ್ಲಲೇಬೇಕಾದ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಅರ ಸಿ ಬಿ ಮಾಜಿ ನಾಯಕ ಹಾಗೇನೇ RCB ಆಟಗಾರ ವಿರಾಟ್ ಕೊಹ್ಲಿ ಅವರ ಭರ್ಜರಿ ಆಟದಿಂದಾಗಿ ನಿನ್ನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ತನ್ನ ಪ್ಲೇ ಆಫ್ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಮುಂಬೈ ಹಾಗು ಡೆಲ್ಲಿ ಕ್ಯಾಪಿಟಲ್ ನಡುವಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಡೆಲ್ಲಿ ಹಾಗು ಮುಂಬೈ ನಡುವಿನ ಪಂದ್ಯದಲ್ಲಿ ಬೆಂಗಳೂರು ತಂಡದ ಪ್ಲೇ ಆಫ್ ಭವಿಷ್ಯ ಇದೆ. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ ಗೆದ್ದರೆ ಬೆಂಗಳೂರು ,ಮನೆ ಹಾದಿ ಹಿಡಿಯಲಿದೆ. ನಿನ್ನೆ ನಡೆದ ಗುಜರಾತ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಅದ್ಬುತ ಬ್ಯಾಟಿಂಗ್ ಇಂದ ಬೆಂಗಳೂರು ತಂಡ ಗುಜರಾತ್ ತಂಡವನ್ನು ೮ ವಿಕೆಟ್ ಗಳ ಅಂತರದಲ್ಲಿ ಗೆದ್ದಿದೆ. ಇದೆ ಕಾರಣಕ್ಕೆ ವಿರಾಟ್ ಕೊಹ್ಲಿ ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಲಭಿಸಿದೆ. ರನ್ ಮಾಡಲು ಪರದಾಡುತ್ತಿದ್ದ ಕೊಹ್ಲಿ ಗೆ ಅರ್ಧ ಶತಕ ಮಾಡಿದ್ದೂ ಅವರಿಗೆ ಒಂದು ಸಮಾಧಾನ ತಂದಿದೆ ಹಾಗೇನೇ ಬೆಂಗಳೂರು ತಂಡಕ್ಕೆ ಒಂದು ಹೊಸ ಭರವಸೆ ನೀಡಿದೆ.
ಗುಜರಾತ್ ಟೈಟನ್ ನಡುವಿನ ಪಂದ್ಯದಲ್ಲಿ ಗೆದ್ದ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ ತುಂಬಾ ಭಾವುಕವಾಗಿ ಮಾತಾಡಿದ್ದಾರೆ. ಸಂದರ್ಶನದಲ್ಲಿ ಹರ್ಷ ಬೋಗ್ಲೆ ಅವರೊಂದಿಗೆ ಮಾತಾಡಿದ ಕೊಹ್ಲಿ ತಂಡಕ್ಕಾಗಿ ವಿಶೇಷವಾಗಿ ಏನನ್ನು ಮಾಡಲು ಸಾಧ್ಯವಾಗದೆ ನಾನು ನನ್ನ ಮೇಲೆ ತುಂಬಾ ನಿರಾಸೆಗೊಂಡಿದ್ದೆ. ನಾವು ತೋರಿರುವ ಪ್ರದರ್ಶನದಿಂದ ನಮ್ಮ ಮೇಲೆ ಸಾಕಷ್ಟು ಭರವಸೆಗಳು ಇರುತ್ತವೆ. ಹಾಗಾಗಿ ನಾವು ನಮ್ಮ ದೃಷ್ಟಿಕೋನವನ್ನು ಬದಲಿಸಬೇಕಾಗುತ್ತದೆ. ಇಂದಿನ ಪಂದ್ಯಕ್ಕಾಗಿ ನಾನು ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ಸತತ ೯೦ ನಿಮಿಷಗಳ ಕಾಲ ನೆಟ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಮೇಲೆ ಅನುಮಾನ ಪಡದೆ ನನಗೆ ನಾನೆ ಬೆಂಬಲ ನೀಡಿದ್ದೆ. ಎಲ್ಲ ಬಾಲ್ ಅನ್ನು ಕೂಡ ಸ್ಪಷ್ಟತೆಯಿಂದ ಆಡಬೇಕೆಂದು ನಿರ್ಧಾರ ಮಾಡಿಕೊಂಡಿದ್ದೆ. ಅದೇ ರೀತಿ ಬ್ಯಾಟ್ ಮಾಡಿದೆ. ಇದಕ್ಕೆ ಸಾಕಷ್ಟು ಪರಿಶ್ರಮ ಕೂಡ ನಡೆಸಿದ್ದೇನೆ. ನಾನು ಆಡುವಾಗ ನನ್ನ ಮೇಲೆ ಅನುಮಾನ, ಅಥವಾ ಆಡುವಾಗ ಹಿಂಜರಿಕೆಯಾಗಲಿ ಬರದಹಾಗೆ ನೋಡಿಕೊಂಡಿದ್ದೇನೆ ಎಂದು ವಿರಾಟ್ ಕೊಹ್ಲಿ ಸಂಧರ್ಶನ ವೇಳೆ ತಿಳಿಸಿದ್ದಾರೆ. ಇಂದು ನಾನು ಆಡುತ್ತೇನೆ ಎಂದು ನನಗೆ ಗೊತ್ತಿತ್ತು. ಅದೇ ರೀತಿ ಆಡಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ತಮ್ಮ ಕೆಟ್ಟ ದಿನಗಳಿಂದ ಹಿಂದೆ ಬಂದಿದ್ದು ತಂಡಕ್ಕೆ ಹೊಸ ಬಲ ಬಂದಿದೆ.