ತಂಡದಿಂದ ಅನೇಕ ಬಾರಿ ಕೈಬಿಟ್ಟಿದ್ದರು, ಕಳೆದ 3 ವರ್ಷಗಳಿಂದ ನಾನು ತಂಡವನ್ನು ಹೊರಗಿನವನಾಗಿ ನೋಡುತ್ತಿದ್ದೆ, ದಿನೇಶ್ ಕಾರ್ತಿಕ್ ಭಾವುಕ ಮಾತು.

331

ಇಂಡಿಯನ್ ಪ್ರೀಮಿಯರ್ ಲೀಗ್ ಅಲ್ಲಿ ಬೊಂಬಾಟ್ ಪ್ರದರ್ಶನ ಮೂಲಕ ಮರಳಿ ಅಂತಾರಾಷ್ಟ್ರೀಯ ತಂಡಕ್ಕೆ ಮರಳಿದ ದಿನೇಶ್ ಕಾರ್ತಿಕ್ ಜೀವನ ಗಾಥೆ ಬಹಳ ಸ್ಪೂರ್ತಿಯಾಗಿದೆ. ೨೦೦೪ ರಲ್ಲಿ ಏಕದಿನಕ್ಕೆ ಪಂದ್ಯಕ್ಕೆ ಪಾದಾರ್ಪಣೆ ಇಂದ ಇದೀಗ ೩೭ ವರ್ಷದಲ್ಲಿ ಅಂತಾರಾಷ್ಟ್ರೀಯ ತಂಡದಲ್ಲಿ ಅರ್ಧಶತಕ ಮಾಡಿ ವಿಶ್ವದಾಖಲೆ ಮಾಡಿದ್ದಾರೆ ದಿನೇಶ್ ಕಾರ್ತಿಕ್. ಸೌತ್ ಆಫ್ರಿಕಾದ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಎರಡನೇ ಟಿ-೨೦ ಪಂಯ್ಡಾದಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ನಾಲ್ಕನೇ ಟಿ-೨೦ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ನಂತರ ಎಲ್ಲೆಡೆಯಿಂದ ದಿನೇಶ್ ಕಾರ್ತಿಕ್ ಗೆ ಅಭಿನಂದನೆ ಪುರ ಹರಿದು ಬರುತ್ತಿದೆ.

ಬಿಸಿಸಿಐ ಇತ್ತೀಚಿಗೆ ಹಂಚಿಕೊಂಡ ವಿಡಿಯೋ ಒಂದರಲ್ಲಿ ರಾಹುಲ್ ದ್ರಾವಿಡ್ ಅವರ ತರಬೇತಿ ಎಷ್ಟು ಸಕಾರಾತ್ಮಕವಾಗಿದೆ ಎಂದು ಹೇಳಿಕೊಂಡಿದ್ದಾರೆ. ಅದೇ ರೀತಿ ನಾನು ತುಂಬಾ ಸಂತೋಷವಾಗಿದ್ದೇನೆ, ತುಂಬಾ ಹೆಮ್ಮೆ ಪಡುತ್ತೇನೆ. ತಂಡದಲ್ಲಿ ಒಂದು ಭಾಗವಾಗಿರಲು ನನಗೆ ನಂಬಲಾಗದ ವಾತಾವರಣ ಸೃಷ್ಟಿ ಮಾಡಿದೆ ಎಂದು ಅವರು ಹೇಳಿದ್ದಾರೆ. ಸುಮಾರು ಮೂರೂ ವರ್ಷಗಳಿಂದ ನನ್ನನು ನಾನು ತಂಡವನ್ನು ಹೊರಗಿನಿಂದ ನೋಡುತ್ತಿದ್ದೆ, ಇದೀಗ ತಂಡದಲ್ಲಿ ಒಂದು ಆಟಗಾರನಾಗಿ ಇದ್ದೇನೆ. ಇಲ್ಲಿ ಇರುವ ಪ್ರತಿ ಸೆಕೆಂಡ್ ಕೂಡ ನಾನು ಆನಂದಿಸುತ್ತಿದ್ದೇನೆ ಮತ್ತು ತುಂಬಾ ಕೃತಜ್ಞನಾಗಿದ್ದೇನೆ ಎಂದು ದಿನೇಶ್ ಕಾರ್ತಿಕ್ ವಿಡಿಯೋದಲ್ಲಿ ಹೇಳಿದ್ದಾರೆ.

ನಾಲ್ಕನೇ ಟಿ-೨೦ ಪಂದ್ಯದಲ್ಲಿ ಭಾರತ ತಂಡ ೧೨.೫ ಓವರ್ ಗಳಲ್ಲಿ ೮೧ ರನ್ ಗಳಿಸಿ ೪ ವಿಕೆಟ್ ಕಳೆದುಕೊಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ದಿನೇಶ್ ಕಾರ್ತಿಕ್ ಅವರು ಹಾರ್ದಿಕ್ ಪಂದ್ಯ ಜೊತೆ ಗೂಡಿ ಉತ್ತಮ ರನ್ ಜೋಡಿಸುತ್ತ ಹೋದರು. ದಿನೇಶ್ ಕಾರ್ತಿಕ್ ಕೇವಲ ೨೭ ಬಾಲ್ ಗಳಲ್ಲಿ ತಮ್ಮ ಅತ್ಯುತ್ತಮ 55 ರನ್ ಗಳಿಸಿ ತಂಡದ ಮೊತ್ತ 169 ಆಗಲು ಸಹಕಾರಿಯಾದರು. ಇವರ ಇನ್ನಿಂಗ್ಸ್ ಅಲ್ಲಿ ೯ ಫೋರ್ ಹಾಗು ೨ ಸಿಕ್ಸ್ ಕೂಡಿದ್ದವು. ಐಪಿಎಲ್ ನಲ್ಲಿ ನೀಡಿದ ಮ್ಯಾಚ್ ವಿನ್ನಿಂಗ್ ಹಾಗು ಬೆಸ್ಟ್ ಫಿನಿಶರ್ ಪ್ರದರ್ಶನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂದುವರೆಸಿರುವುದು ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಸಂತಸ ತಂದಿದೆ.

Leave A Reply

Your email address will not be published.