ತಾಯಿ ಅಂದು ಚಿನ್ನ ಅಡವಿಟ್ಟು ಬ್ಯಾಟ್ ಕೊಡಿಸಿದರು, ಇಂದು ಮಗ ತನ್ನ ಚೊಚ್ಚಲ ಪಂದ್ಯದಲ್ಲಿ ದಾಖಲಿಸಿದ ರನ್ ಎಷ್ಟು ಗೊತ್ತೇ?

771

ಬಡತನ ಎಂಬುವುದು ಎಲ್ಲರಿಗೂ ಇದೆ, ಕೆಲವರಿಗೆ ಹಣ ಎಂಬ ಬಡತನ ಇದ್ದರೆ ಕೆಲವು ಹಣವಂತರಿಗೆ ಮನಸಿನಲ್ಲಿ ಬಡತನ ಇರುತ್ತದೆ. ಆದರೆ ಹಣದಲ್ಲಿ ಬಡತನ ಇದ್ದ ವ್ಯಕ್ತಿ ಯಾರು ಕೂಡ ಸೋಲಲಿಲ್ಲ. ಬದಲಾಗಿ ಬಡತನ ಎದುರಿಸಿ ಯಶಸ್ವಿ ಆದ ಉದಾಹರಣೆ ಹೆಚ್ಚು. ಅಂತಹುದೇ ಒಬ್ಬ ಮಾದರಿ ವ್ಯಕ್ತಿಯ ಬಗೆಗೆ ತಿಳಿಯೋಣ ಇಂದು. ಈತನ ಹೆಸರು ಶಕಿಬುಲ್ ಗನಿ, ಬಿಹಾರ ಮೂಲದವರು. ಚಿಕ್ಕಂದಿನಿಂದಲೂ ಕ್ರಿಕೆಟ್ ಎಂದರೆ ಪಂಚಪ್ರಾಣ. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೊಟ್ಟೆಗೆ ಸರಿಯಾಗಿ ಒಮ್ಮೊಮ್ಮೆ ಊಟಕ್ಕೂ ಇರುತ್ತಿರಲಿಲ್ಲ.

ಆದರೂ ತಮ್ಮ ಕ್ರಿಕೆಟ್ ಮಾತ್ರ ನಿಲ್ಲಿಸಿದವರಲ್ಲ ಶಕಿಬುಲ್. ಆಟ ಆಡುತ್ತಲೇ ಬೆಳೆದವರು. ತಾಯಿ ಕೂಡ ಬಡತನ ಎಂದು ಮಗನನ್ನು ಆಟ ಆಡದಂತೆ ತಡೆಯಲಿಲ್ಲ. ಬದಲಾಗಿ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ಮಾಡುತ್ತಾ ಬೆಳೆಸಿದ್ದರು. ತನ್ನ ತಾಯಿಗೆ ಎಂದೂ ನಿರಾಶೆ ಮಾಡಿದವರಲ್ಲ. ಕೊನೆಗೂ ಪ್ರಯತ್ನಕ್ಕೆ ಫಲ ಎಂಬಂತೆ ಬಿಹಾರ ರಣಜಿ ತಂಡಕ್ಕೆ ಆಯ್ಕೆ ಆದರೂ ಗನಿ ಅವರು. ಎಲ್ಲಿಲ್ಲದ ಖುಷಿ ಮನೆಯರಲ್ಲು. ಕಷ್ಟ ಎಂಬುವುದನ್ನು ಮೆಟ್ಟಿ ನಿಂತವರು ಶಾಕಿಬುಲ್ ಗನಿ. ಅವರ ಅಣ್ಣ ಹೇಳುವಂತೆ ಒಮ್ಮೊಮ್ಮೆ ಕ್ರಿಕೆಟ್ ಕೋಚಿಂಗ್ ಬ್ಯಾಟ್ ಖರೀದಿಸಲು ಹಣ ಇರುತ್ತಿರಲಿಲ್ಲ.

ಆಗ ತಾಯಿ ತನ್ನ ಚಿನ್ನವನ್ನು ಅಡವಿಟ್ಟು ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಟೂರ್ನೆಮೆಂಟ್ ಹೋಗುವ ಮುಂಚೆ ಕೂಡ ಆಕೆ ತಮ್ಮನಿಗೆ ಮೂರು ಬ್ಯಾಟ್ ಖರೀದಿಸಿ ಕೊಟ್ಟಿದ್ದಳು, ಕೊಡುವಾಗ 3 ಸೆಂಚುರಿ ಭಾರಿಸು ಎಂದಿದ್ದಳು. ಅದೇ ರೀತಿಯಲ್ಲಿ ಮಾಡಿದ ಗನೀ ಎನ್ನುತ್ತಾರೆ ಅಣ್ಣ. ಚೊಚ್ಚಲ ಮೊದಲ ದರ್ಜೆ ಪಂದ್ಯದಲ್ಲೇ ಇವರು ಮಿಜೋರಾಂ ವಿರುದ್ಧ 341 ರನ್ ಸಿಡಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಡೆಬ್ಯು ಪಂದ್ಯದಲ್ಲಿ 300+ ರನ್ ಬಾರಿಸಿರುವುದು. ಹೌದು ಈ ಮೂಲಕ ದಾಖಲೆ ಬರೆದಿದ್ದಾರೆ ಗನೀ. ಇವರ ಇನ್ನಿಂಗ್ಸ್ ನಲ್ಲಿ 56 ಬೌಂಡರಿ 2 ಸಿಕ್ಸರ್ ಸೇರಿತ್ತು. ಅದೇನೇ ಆಗಲಿ ತನ್ನ ತಾಯಿಯ ಅಶೆಯಂತೆ ಮಗ ಸಾಧಿಸಿ ಬಿಟ್ಟ. ಇವರ ಮುಂದಿನ ಭವಿಷ್ಯ ಉಜ್ವಲ ಆಗಿರಲಿ ಎಂದು ಹಾರೈಸೋಣ.

Leave A Reply

Your email address will not be published.